ಫಲಿತಾಂಶಗಳು ನಾಯಕತ್ವದ ಗುಣಗಳ ಮೇಲೆ ಅವಲಂಬಿಸಿಲ್ಲ- ವಿರಾಟ್ ಕೊಹ್ಲಿ

ನಾಯಕನಾಗಿ ತಂಡವನ್ನು ಮುನ್ನಡೆಸುವುದಷ್ಟೇ ಗುರಿ. ಅದು ಬಿಟ್ಟು ನಾಯಕತ್ವದ ಗುಣಗಳ ಮೇಲೆ ಅವಲಂಬನೆ ಹೊಂದಿಲ್ಲದ ಫಲಿತಾಂಶಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Published: 23rd January 2020 01:10 PM  |   Last Updated: 23rd January 2020 01:10 PM   |  A+A-


ViratKohli1

ವಿರಾಟ್ ಕೊಹ್ಲಿ

Posted By : Nagaraja AB
Source : UNI

ಅಕ್ಲೆಂಡ್:  ನಾಯಕನಾಗಿ ತಂಡವನ್ನು ಮುನ್ನಡೆಸುವುದಷ್ಟೇ ಗುರಿ. ಅದು ಬಿಟ್ಟು ನಾಯಕತ್ವದ ಗುಣಗಳ ಮೇಲೆ ಅವಲಂಬನೆ ಹೊಂದಿಲ್ಲದ ಫಲಿತಾಂಶಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸದ್ಯ ಟೀಮ್ ಇಂಡಿಯಾ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ನಲ್ಲಿದ್ದು, ಐದು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯಲ್ಲಿ ನಾಳೆ ಈಡೆನ್ ಪಾರ್ಕ್ ಅಂಗಳದಲ್ಲಿ ಕಿವೀಸ್ ಎದುರು ಕಾದಾಟ ನಡೆಸಲಿದೆ
 
ನಾಯಕನಾಗಿ ಒಂದು ಅಂಶವನ್ನು ಪೂರ್ಣಗೊಳಿಸಿದ್ದು, ತಂಡಕ್ಕೆ ಏನು ಬೇಕು ಎಂಬ ಬಗ್ಗೆ ನನ್ನ ಗಮನ ಕೇಂದ್ರಿಕರಿದುತ್ತೇನೆ. ಈ ದೃಷ್ಠಿಕೋನದಲ್ಲಿ ತಂಡವನ್ನು ಮುನ್ನಡೆಸುತ್ತೇನೆ,'' ಎಂದು ಕೊಹ್ಲಿ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp