ಕಿವೀಸ್ ಹುಡುಗರು ತುಂಬಾ ಒಳ್ಳೆಯವರು, ಸೇಡು ತೀರಿಸಿಕೊಳ್ಳುವ ಯೋಚನೆಯಿಲ್ಲ: ವಿರಾಟ್ ಕೊಹ್ಲಿ

ನ್ಯೂಜಿಲ್ಯಾಂಡ್ ಹುಡುಗರು ತುಂಬಾ ಮೃಧು ಸ್ವಾಭಾವದವರು. ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Published: 23rd January 2020 05:02 PM  |   Last Updated: 23rd January 2020 05:10 PM   |  A+A-


Virat Kohli

ವಿರಾಟ್ ಕೊಹ್ಲಿ

Posted By : Vishwanath S
Source : IANS

ಆಕ್ಲೆಂಡ್: ನ್ಯೂಜಿಲ್ಯಾಂಡ್ ಹುಡುಗರು ತುಂಬಾ ಮೃಧು ಸ್ವಾಭಾವದವರು. ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

2019ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡಿತ್ತು. ಆ ನಂತರ ಇದೀಗ ಈ ತಂಡಗಳು ಮುಖಾಮುಖಿಯಾಗುತ್ತಿದ್ದು ಅಂದಿನ ಸೇಡಿಗೆ ಈ ಸರಣಿ ಮೂಲಕ ಪ್ರತಿಸೇಡು ತೀರಿಸಿಕೊಳ್ಳುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ನ್ಯೂಜಿಲ್ಯಾಂಡ್ ಹುಡುಗರು ತುಂಬಾ ಒಳ್ಳೆಯವರು ಅವರು ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚನೆಯನ್ನು ಮಾಡಲು ಸಾಧ್ಯವಿಲ್ಲ ಎಂದರು. 

ಮೈದಾನದಲ್ಲಿ ತಂಡಗಳ ನಡುವೆ ಸ್ಪರ್ಧಾತ್ಮಕವಾಗಿ ಕೂಡಿರುತ್ತದೆ. ತಂಡಗಳು ತಮ್ಮನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಾಗಿಸಲು ಸರಿಯಾದ ಉದಾಹರಣೆಯನ್ನು ನೀಡಿವೆ. ನ್ಯೂಜಿಲ್ಯಾಂಡ್ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಾಗ ನಿಜವಾಗಿಯೂ ನಮಗೆ ಸಂತೋಷವಾಗಿತ್ತು. ಆದ್ದರಿಂದ ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ಮರುದಿನವೇ ಟೀಂ ಇಂಡಿಯಾ ತಂಡ ನ್ಯೂಜಿಲೆಂಡ್‌ಗೆ ತೆರಳಬೇಕಾಯಿತು. ಇದು ಆಟಗಾರರ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ವಿದೇಶ ಪ್ರವಾಸದಲ್ಲಿರುವಾಗ ವೇಳಾಪಟ್ಟಿ ಸ್ವಲ್ಪ ಉತ್ತಮವಾಗಬೇಕು ಎಂದು ಕೊಹ್ಲಿ ಭಾವಿಸಿದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp