ಬುಷ್ ಫೈರ್ ಕ್ರಿಕೆಟ್ ಬ್ಯಾಷ್ ಆಡಲಿರುವ ಸಿಕ್ಸರ್ ಸರದಾರ ಯುವರಾಜ್ ಸಿಂಗ್

ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಕೆನಡಾದಲ್ಲಿ ಟಿ-20 ಲೀಗ್ ಆಡಿದ್ದ ಭಾರತ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುವ  ಬುಷ್ ಫೈರ್ ಬ್ಯಾಷ್ ಆಡುವುದಾಗಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್

ಜೊಲಿಮಂಟ್: ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಕೆನಡಾದಲ್ಲಿ ಟಿ-20 ಲೀಗ್ ಆಡಿದ್ದ ಭಾರತ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುವ  ಬುಷ್ ಫೈರ್ ಬ್ಯಾಷ್ ಆಡುವುದಾಗಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.

ದೊಡ್ಡ ಮನವಿಯ ಮೇರೆಗೆ ಫೆಬ್ರುವರಿ 8 ರಂದು ಈ ಪಂದ್ಯ ನಡೆಯಲಿದೆ. ವಿಶೇಷವೆಂದರೆ, ಇದೇ ಅಂಗಳದಲ್ಲಿ ಅಂದು ಈ ಪಂದ್ಯವೂ ಸೇರಿ ಮೂರು ಹಣಾಹಣಿಗಳು ನಡೆಯಲಿವೆ. ಐಸಿಸಿ ಟಿ-20 ಮಹಿಳಾ ವಿಶ್ವಕಪ್ ಟೂರ್ನಿಯ ಅಂದಿನ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ವನಿತೆಯರು ಸೆಣಸಲಿದ್ದಾರೆ. ಜತೆಗೆ, ಅಂದೇ ಬಿಗ್ ಬ್ಯಾಷ್ ಲೀಗ್ ಪೈನಲ್ ಪಂದ್ಯ ಕೂಡ ಜರುಗಲಿದೆ.

ಬುಷ್ ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದಿಂದ ಸಿಗುವ ಹಣ ಆಸ್ಟ್ರಲಿಯಾ ರೆಡ್ ಕ್ರಾಸ್ ಪರಿಹಾರ ನಿಧಿಗೆ ಸೇರಲಿದೆ. ಯುವರಾಜ್ ಸಿಂಗ್ ಜತೆಗೆ, ಪಾಕಿಸ್ತಾನ ಮಾಜಿ ವೇಗಿ ವಾಸೀಮ್ ಅಕ್ರಂ ಅವರು ಕೂಡ ಆಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಶೇನ್ ವಾರ್ನ್  ಹಾಗೂ ಮಾಜಿ ನಾಯಕ ರಿಕಿ ಪಾಂಟಿಂಗ್ ತಂಡಗಳನ್ನು ಮುನ್ನಡೆಸಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com