ಮೂರನೇ ಟಿ20: 23 ಎಸೆತಕ್ಕೆ ಅರ್ಧಶತಕ ಸಿಡಿಸಿದ ಹಿಟ್‌ಮ್ಯಾನ್‌, ಕಿವೀಸ್ ಗೆಲುವಿಗೆ 180 ರನ್ ಟಾರ್ಗೆಟ್

ರೋಹಿತ್ ಶರ್ಮಾ (65 ರನ್, 40 ಎಸೆತಗಳು) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಮೂರನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಸಫಲವಾಗಿದೆ. ಇಲ್ಲಿ ಸೆಡಾನ್ ಕಾರ್ಕ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿತು. ಆ ಮೂಲಕ ಆತಿಥೇಯ ನ್ಯೂಜಿಲೆಂಡ್ ಗೆ
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಹ್ಯಾಮಿಲ್ಟನ್:ರೋಹಿತ್ ಶರ್ಮಾ (65 ರನ್, 40 ಎಸೆತಗಳು) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಮೂರನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಸಫಲವಾಗಿದೆ. ಇಲ್ಲಿ ಸೆಡಾನ್ ಕಾರ್ಕ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿತು. ಆ ಮೂಲಕ ಆತಿಥೇಯ ನ್ಯೂಜಿಲೆಂಡ್ ಗೆ 180 ರನ್ ಗುರಿ ನೀಡಿದೆ.

ಭಾರತ-ನ್ಯುಜಿಲ್ಯಾಂಡ್ ನಡುವಣ ಮೂರನೇ ಟಿ20  ಇಂದು (ಬುಧವಾರ) ನಡೆಯುತ್ತಿದ್ದು ಟಾಸ್ ಗೆದ್ದ ಕಿವೀಸ್ ಪಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವೇಳೆ ಟೀಂ ಇಂಡಿಯಾಗೆ ಕೆ.ಎಲ್. ರಾಹುಲ್  ಉತ್ತಮ ಆರಂಭ ಒದಗಿಸಿದ್ದಾರೆ.

ಸರಣಿಯನ್ನು  ಗೆಲ್ಲಲು ಭಾರತ ಈ ಪಂದ್ಯವನ್ನು ಗೆಲ್ಲುವ ಅಗತ್ಯವಿದೆ. ಈ ಹಿಂದೆ ನಡೆದ ಎರಡೂ ಪಂದ್ಯಗಳಲ್ಲಿ ಭಾರತ ಗೆದ್ದಿದ್ದು ಈ ಗೆಲುವಿನೊಡನೆ ಸರಣ್ ತನ್ನ ವಶ ಮಾಡಿಕೊಳ್ಳುವ ಹವಣಿಕೆಯಲ್ಲಿದೆ. 

ಪಂದ್ಯದ ಮೊದಲ್ ವಿಕೆಟ್ ಗೆ ರಾಹುಲ್-ಶರ್ಮಾ ಜೋಡಿ 7 ಓವರ್‌ಗಳಲ್ಲಿ 77 ರನ್ ಗಳಿಸಿತ್ತು. 

ಇನ್ನು ನ್ಯೂಜಿಲ್ಯಾಂಡ್ ತನ್ನ ತಂಡದಲ್ಲಿ ವೇಗದ ಬೌಲರ್‌ ಸ್ಕಾಟ್‌ ಕುಗ್ಲೇಜಿನ್‌ ಗೆ ಸ್ಥಾನ ಕಲ್ಪಿಸಿದೆ. ಆದರೆ ಟೀಂ ಇಂಡಿಯಾ ತಂಡದಲ್ಲಿ ಯಾವ ಬದಲಾವಣೆ ಆಗಿಲ್ಲ. ಇನ್ನು ಹ್ಯಾಮಿಲ್ಟನ್ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಅನುಕೂಲವಾಗಿದ್ದು ಇಲ್ಲಿ ನಡೆದಿದ್ದ ಕಡೆಯ ನಾಲ್ಕು ಟ್ವೆಂಟಿ 20ಪಂದ್ಯಗಳಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ತಂಡ ಗೆಲುವು ಕಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com