ನಾಲ್ಕನೇ ಟಿ20: ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್, ಗಾಯದ ಸಮಸ್ಯೆಯಿಂದ ಹೊರಗುಳಿದ ವಿಲಿಯಮ್ಸನ್‌

ನ್ಯೂಜಿಲ್ಯಾಂಡಿನ ವೆಲ್ಲಿಂಗ್ಟನ್  ಸ್ಕೈ ಸ್ಟೇಡಿಯಂನಲ್ಲಿ ಶುಕ್ರವಾರ ಪ್ರಾರಂಭವಾಗಿರುವ ನಾಲ್ಕನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನಾಯಕ ಟಿಮ್ ಸೌಥಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

Published: 31st January 2020 01:06 PM  |   Last Updated: 31st January 2020 01:06 PM   |  A+A-


ನಾಲ್ಕನೇ ಟಿ20: ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್, ಗಾಯದ ಸಮಸ್ಯೆಯಿಂದ ಹೊರಗುಳಿದ ವಿಲಿಯಮ್ಸನ್‌ಗೆ

Posted By : Raghavendra Adiga
Source : The New Indian Express

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡಿನ ವೆಲ್ಲಿಂಗ್ಟನ್  ಸ್ಕೈ ಸ್ಟೇಡಿಯಂನಲ್ಲಿ ಶುಕ್ರವಾರ ಪ್ರಾರಂಭವಾಗಿರುವ ನಾಲ್ಕನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನಾಯಕ ಟಿಮ್ ಸೌಥಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಭುಜದ ಗಾಯದಿಂಡ ಕಿವೀಸ್ ನಾಯಕ  ಕೇನ್ ವಿಲಿಯಮ್ಸನ್ ಪಂದ್ಯದಿಂದ ಹೊರಗುಳಿದಿದ್ದು ಅವರ ಅನುಪಸ್ಥಿತಿಯಲ್ಲಿ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ.

ಅತಿಥೇಯ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು ವಿಲಿಯಮ್ಸನ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ರ ಬದಲಿಗೆ ಟಾಮ್ ಬ್ರೂಸ್ ಮತ್ತು ಡ್ಯಾರಿಲ್ ಮಿಚೆಲ್‌ರನ್ನು  ತಂಡಕ್ಕೆ ಕರೆತರಲಾಗಿದೆ.

ಮತ್ತೊಂದೆಡೆ, ಭಾರತವು ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲು ತೀರ್ಮಾನಿಸಿ ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್  ಅವರನ್ನು ಫೀಲ್ಡಿಗಿಳಿಸಲಿದೆ.

ಇದಾಗಲೇ ಐದು ಪಂದ್ಯಗಳ ಸರಣಿಯನ್ನು ಭಾರತ 3-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ತಂಡಗಳ ವಿವರ ಹೀಗಿದೆ-

ನ್ಯೂಜಿಲ್ಯಾಂಡ್ (ಪ್ಲೇಯಿಂಗ್ ಇಲೆವೆನ್): ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ, ಟಾಮ್ ಬ್ರೂಸ್, ರಾಸ್ ಟೇಲರ್, ಟಿಮ್ ಸೀಫರ್ಟ್ (ಕೀಪರ್‌), ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಲೇಜಿನ್‌, ಟಿಮ್ ಸೌಥೀ (ನಾಯಕ), ಇಶ್ ಸೋಧಿ, ಹ್ಯಾಮಿಶ್ ಬೆನೆಟ್, ಡ್ಯಾರಿಲ್ ಮಿಚೆಲ್.

ಭಾರತ (ಪ್ಲೇಯಿಂಗ್‌ ಇಲೆವೆನ್‌): ಸಂಜು ಸ್ಯಾಮ್ಸನ್, ಲೋಕೇಶ್ ರಾಹುಲ್ (ಕೀಪರ್‌), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೇ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಜಸ್‌ಪ್ರೀತ್ ಬುಮ್ರಾ, ನವದೀಪ್ ಸೈನಿ.

Stay up to date on all the latest ಕ್ರಿಕೆಟ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp