ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಹೇಳಿದ್ದು ಸಚಿನ್: ಇರ್ಫಾನ್‌ ಪಠಾಣ್

ನನ್ನ ನಿವೃತ್ತಿ ನಂತರದ ದಿನಗಳಲ್ಲೂ ಈ ಬಗ್ಗೆ ಹೇಳಿದ್ದೇನೆ. ಗ್ರೇಗ್ ಚಾಪೆಲ್ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿ ನನ್ನ ವೃತ್ತಿ ಬದುಕನ್ನು ಹಾಳು ಮಾಡಿದರು ಎನ್ನಲಾಗುತ್ತಿದೆ. ಆದರೆ, ನಿಜಕ್ಕೂ ಅದು ಸಚಿನ್ ತೆಂಡೂಲ್ಕರ್ ಅವರ ಆಲೋಚನೆ ಆಗಿತ್ತು.

Published: 01st July 2020 04:27 PM  |   Last Updated: 01st July 2020 04:27 PM   |  A+A-


Sachin-Irfan Pathan

ಸಚಿನ್-ಇರ್ಫಾನ್

Posted By : Vishwanath S
Source : UNI

ನವದೆಹಲಿ: ಇರ್ಫಾನ್ ಪಠಾಣ್ ಅವರಲ್ಲಿನ ಬ್ಯಾಟಿಂಗ್ ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಆಲ್ ರೌಂಡರ್ ಆಗಿ ಪರಿವರ್ತಿಸಿದ್ದು ಅಂದಿನ ಕೋಚ್ ಗ್ರೇಗ್ ಚಾಪೆಲ್ ಎಂಬುದು ತಿಳಿದಿರುವ ವಿಚಾರ. ಆದರೆ, ಅದಕ್ಕೂ ಮುನ್ನ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ ಎಂದು ಬೆಂಬಲಿಸಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಂಬ ಸಂಗತಿಯನ್ನು ಪಠಾಣ್ ಹೇಳಿಕೊಂಡಿದ್ದಾರೆ.

2005ರಲ್ಲಿ ನಾಗ್ಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಪಂದ್ಯವದು. 3ನೇ ಕ್ರಮಾಂಕದಲ್ಲಿ ಮೊತ್ತ ಮೊದಲ ಬಾರಿ ಬ್ಯಾಟ್ ಮಾಡಿದ್ದ ಪಠಾಣ್ 70 ಎಸೆತಗಳಲ್ಲಿ 83 ರನ್ ಸಿಡಿಸಿ ತಂಡಕ್ಕೆ ಸ್ಫೋಟಕ ಆರಂಭ ತಂದುಕೊಟ್ಟಿದ್ದರು. ಪರಿಣಾಮ ಭಾರತ ತಂಡ 152 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು. 

ನನ್ನ ನಿವೃತ್ತಿ ನಂತರದ ದಿನಗಳಲ್ಲೂ ಈ ಬಗ್ಗೆ ಹೇಳಿದ್ದೇನೆ. ಗ್ರೇಗ್ ಚಾಪೆಲ್ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿ ನನ್ನ ವೃತ್ತಿ ಬದುಕನ್ನು ಹಾಳು ಮಾಡಿದರು ಎನ್ನಲಾಗುತ್ತಿದೆ. ಆದರೆ, ನಿಜಕ್ಕೂ ಅದು ಸಚಿನ್ ತೆಂಡೂಲ್ಕರ್ ಅವರ ಆಲೋಚನೆ ಆಗಿತ್ತು.

ಅಂದಿನ ನಾಯಕ ರಾಹುಲ್ ದ್ರಾವಿಡ್ ಗೆ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳಿಸುವಂತೆ ಅವರು ಹೇಳಿದ್ದರು. 'ಸಿಕ್ಸರ್ ಬಾರಿಸುವ ಸಾಮರ್ಥ್ಯವಿದ್ದು ಹೊಸ ಚೆಂಡಿನ ಎದುರು ಉತ್ತಮವಾಗಿ ಬ್ಯಾಟ್ ಮಾಡಿ ಬಳಿಕ ವೇಗದ ಬೌಲಿಂಗ್ ನಲ್ಲೂ ನೆರವಾಗಬಲ್ಲ' ಎಂದು ಸಚಿನ್ ಸಲಹೆ ನೀಡಿದ್ದರು ಎಂದು ಪಠಾಣ್ ಇತ್ತೀಚಿನ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

Stay up to date on all the latest ಕ್ರಿಕೆಟ್ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp