ಪಿಪ್‌ ಎಡ್ವರ್ಡ್ಸ್‌ ಜತೆಗೆ ಡೇಟಿಂಗ್ ಒಪ್ಪಿಕೊಂಡ ಮೈಕಲ್‌ ಕ್ಲಾರ್ಕ್

ಕೆಲ ತಿಂಗಳ ಹಿಂದಷ್ಟೇ ತಮ್ಮ ಪತ್ನಿ ಕೈಲಿ ಕ್ಲಾರ್ಕ್‌ಗೆ ವಿಚ್ಛೇದನ ನೀಡಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಇದೀಗ ಫ್ಯಾಷನ್‌ ಡಿಸೈನರ್‌ ಹಾಗೂ ಮಾಡೆಲ್‌ ಆಗಿರುವ ಪಿಪ್‌ ಎಡ್ವರ್ಡ್ಸ್‌ ಅವರೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

Published: 02nd July 2020 06:11 PM  |   Last Updated: 02nd July 2020 06:11 PM   |  A+A-


maical1

ಪಿಪ್‌ ಎಡ್ವರ್ಡ್ಸ್ - ಮೈಕಲ್‌ ಕ್ಲಾರ್ಕ್

Posted By : Lingaraj Badiger
Source : UNI

ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ತಮ್ಮ ಪತ್ನಿ ಕೈಲಿ ಕ್ಲಾರ್ಕ್‌ಗೆ ವಿಚ್ಛೇದನ ನೀಡಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಇದೀಗ ಫ್ಯಾಷನ್‌ ಡಿಸೈನರ್‌ ಹಾಗೂ ಮಾಡೆಲ್‌ ಆಗಿರುವ ಪಿಪ್‌ ಎಡ್ವರ್ಡ್ಸ್‌ ಅವರೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಕೆಲ ದಿನಗಳಿಂದ ಈ ಜೋಡಿ ಜೊತೆ ಜೊತೆಯಾಗಿ ಓಡಾಡುತ್ತಿರುವ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ 39 ವರ್ಷದ ಮಾಜಿ ಬಲಗೈ ಬ್ಯಾಟ್ಸ್‌ಮನ್‌, ಪಿಪ್‌ ಎಡ್ವರ್ಡ್ಸ್‌ ತಮ್ಮ ನೂತನ ಗರ್ಲ್‌ಫ್ರೆಂಡ್‌ ಎಂಬುದನ್ನು ಖಾತ್ರಿ ಪಡಿಸಿದ್ದಾರೆ. ಈ ಮೂಲಕ ವಿಚ್ಛೇದನ ಪಡೆದ ನಾಲ್ಕೇ ತಿಂಗಳಲ್ಲಿ ಹೊಸ ಸಂಗಾತಿಯನ್ನು ಕ್ಲಾರ್ಕ್‌ ಹುಡುಕಿಕೊಂಡಿದ್ದಾರೆ.

"ಕಳೆದ ಫೆಬ್ರವರಿಯಲ್ಲಿ ನೂರಾರು ಕೋಟಿ ರೂ.ಗಳ ಭಾರಿ ಮೊತ್ತದ ಜೀವನಾಂಶ ಭರಿಸಿಕೊಟ್ಟು ಕೈಲಿ ಕ್ಲಾರ್ಕ್‌ ಅವರೊಟ್ಟಿಗಿನ ವಿವಾಹ ಬಾಂಧವ್ಯವನ್ನು ಮುರಿದುಕೊಂಡಿದ್ದ ಕ್ರಿಕೆಟ್‌ ತಾರೆ ಮೈಕಲ್‌ ಕ್ಲಾರ್ಕ್‌, ಇದೀಗ ಪಿ.ಇ ನೇಷನ್‌ ಆಕ್ಟೀವ್‌ ವೇರ್‌ನ ಸಹ ಮಾಲಕಿ ಪಿಪ್‌ ಎಡ್ವರ್ಡ್ಸ್‌ ಅವರೊಟ್ಟಿಗೆ ಸಂಬಂಧ ಹೊಂದಿರುವುದನ್ನು ಮೂಲಗಳು ಖಾತ್ರಿ ಪಡಿಸಿವೆ," ಎಂದು ನ್ಯೂ ಸಿಡ್ನಿ ಹೆರಾಲ್ಡ್‌ ವರದಿಮಾಡಿದೆ.

ಕೈಲೀ ಕ್ಲಾರ್ಕ್‌ ಮತ್ತು ಮೈಕಲ್‌ ಕ್ಲಾರ್ಕ್‌ ಜೋಡಿಗೆ 4 ವರ್ಷದ ಕೆಲ್ಸೀ ಕ್ಲಾರ್ಕ್‌ ಹೆಸರಿನ ಮಗಳಿದ್ದಾಳೆ. ಮೈಕ್‌ ತಮ್ಮ ಮಗಳ ಸಲುವಾಗಿ ಪಿಪ್‌ ಎಡ್ವರ್ಡ್ಸ್‌ ಜೊತೆಗಿನ ಸಂಬಂಧದ ಕುರಿತಾಗಿ ಎಲ್ಲಿಯೂ ಈವರೆಗೆ ತುಟಿ ಬಿಚ್ಚಿರಲಿಲ್ಲ ಎಂದು ವದಂತಿ ಹಬ್ಬಿದೆ. ಆದರೀಗ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಕ್ಲಾರ್ಕ್‌, ತಮ್ಮ ಮತ್ತು ಪಿಪ್‌ ನಡುವಣ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp