ಸಿಎಸ್ ಕೆ ತಂಡದ ಅಭ್ಯಾಸ ವೇಳೆ ಅನುಭವ ಕೊರತೆಯಾದವರಂತೆ ಧೋನಿ ಕಾಣಲಿಲ್ಲ: ಪಿಯೂಷ್ ಚಾವ್ಲಾ
ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸದ ಶಿಬಿರದಲ್ಲಿ ಅನುಭವದ ಕೊರತೆಯಲ್ಲಿರುವಂತೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕಾಣಲಿಲ್ಲ ಎಂದು ಸ್ಪೀನ್ನರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ.
Published: 02nd July 2020 05:01 PM | Last Updated: 02nd July 2020 05:26 PM | A+A A-

ಮಹೇಂದ್ರ ಸಿಂಗ್ ಧೋನಿ
ನವದೆಹಲಿ: ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸದ ಶಿಬಿರದಲ್ಲಿ ಅನುಭವದ
ಕೊರತೆಯಲ್ಲಿರುವಂತೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕಾಣಲಿಲ್ಲ ಎಂದು ಸ್ಪೀನ್ನರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ.
ಮಾರ್ಚ್ 29ರಿಂದ ಐಪಿಎಲ್ ನಡೆಯಬೇಕಿತ್ತು, ಆದರೆ, ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಧೀರ್ಘ ವಿರಾಮದ ಬಳಿಕ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಧೋನಿ ಬಗ್ಗೆ ಪಿಯೂಷ್ ಚಾವ್ಲಾ ಮಾತನಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಧೀರ್ಘ ವಿರಾಮದ ಬಳಿಕ ಅಭ್ಯಾಸಕ್ಕೆ ತೊಡಗಿಸಿಕೊಂಡರೂ ಅಭ್ಯಾಸ ಇಲ್ಲದವರಂತೆ ಕಾಣಲಿಲ್ಲ. ಬ್ಯಾಟಿಂಗ್ ತರಬೇತಿ ವೇಳೆಯಲ್ಲಿ ದೊಡ್ಡ ಹೊಡೆತಗಳನ್ನು ಧೋನಿ ಬಾರಿಸಿದ್ದರು ಎಂಬುದಾಗಿ ಮಾಜಿ ಆಟಗಾರ ಆಕಾಶ್ ಚೋರ್ಪಾ ಅವರ ಯು ಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.
ಧೀರ್ಘ ರಜೆ ಬಳಿಕ ಬ್ಯಾಟಿಂಗ್ ಮಾಡಿದರು. ಕೆಲವೇ ಮಂದಿ ಇದ್ದ ಶಿಬಿರದಲ್ಲಿ ರೈನಾ,ರಾಯುಡು, ಧೋನಿ ಎಲ್ಲ ಬ್ಯಾಟ್ಸ್ ಮನ್ ಗಳು ಎರಡರಿಂದ ಎರಡೂವರೆ ಗಂಟೆಗಳವರೆಗೂ ಅಭ್ಯಾಸ ನಡೆಸಿದರು. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗಳು 200ರಿಂದ 250 ಎಸೆತಗಳನ್ನು ಎದುರಿಸಿದ್ದಾಗಿ ಪಿಯೂಷ್ ಚಾವ್ಲಾ ತಿಳಿಸಿದರು
2019 ವಿಶ್ವಕಪ್ ಫೈನಲ್ ಪಂದ್ಯದ ನಂತರ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳದ 38 ವರ್ಷದ ಮಹೇಂದ್ರ ಸಿಂಗ್ ಧೋನಿ, ಪ್ರಸ್ತುತ ಕ್ರಿಕೆಟ್ ನಿಂದ ದೂರ ಉಳಿದು ಸಮಯದ ಜೊತೆ ಆನಂದಿಸುತ್ತಿದ್ದಾರೆ.