2011 ವಿಶ್ವಕಪ್ ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖೆ ಕೈ ಬಿಟ್ಟ ಶ್ರೀಲಂಕಾ!
ಮುಂಬೈನಲ್ಲಿ 2011 ರಲ್ಲಿ ನಡೆದ ಭಾರತ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನಡೆದ ತನಿಖೆ ಪೂರ್ಣಗೊಂಡಿದ್ದು, ಆಟಗಾರರು ಯಾವುದೇ ತಪ್ಪು ಮಾಡದಿರುವುದು ಕಂಡುಬಂದಿದೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಜಗತ್ ಫೋನ್‌ಸೆಕಾ ತಿಳಿಸಿದ್ದಾರೆ.
Published: 03rd July 2020 04:38 PM | Last Updated: 03rd July 2020 05:01 PM | A+A A-

ಮಹೇಲಾ ಜಯವರ್ದನೆ
ಕೊಲಂಬಿಯಾ: ಮುಂಬೈನಲ್ಲಿ 2011 ರಲ್ಲಿ ನಡೆದ ಭಾರತ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನಡೆದ ತನಿಖೆ ಪೂರ್ಣಗೊಂಡಿದ್ದು, ಆಟಗಾರರು ಯಾವುದೇ ತಪ್ಪು ಮಾಡದಿರುವುದು ಕಂಡುಬಂದಿದೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಜಗತ್ ಫೋನ್‌ಸೆಕಾ ತಿಳಿಸಿರುವುದಾಗಿ ನ್ಯೂಸ್ ವೈರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ತಂಡದ ಕ್ರಿಕೆಟ್ ದಿಗ್ಗಜ ಆಟಗಾರರಾದ ಮಹೇಲಾ ಜಯವರ್ದನೆ, ಕುಮಾರ ಸಂಗಕ್ಕಾರ, ಅರವಿಂದ ಡಿ ಸಿಲ್ವಾ ಮತ್ತು ಉಪುಲ್ ತರಂಗ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ.
ವಿಶೇಷ ತನಿಖಾ ಘಚಟದ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ ಬಳಿಕ ತನಿಖೆಯನ್ನು ಕೈ ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಲಾಗಿದೆ.