ಪಾಕಿಸ್ತಾನ ಟೀಂ ಇಂಡಿಯಾವನ್ನು ಬಹುಬಾರಿ ಸೋಲಿಸಿದೆ, ಪಂದ್ಯದ ನಂತರ ಅವರು ನಮ್ಮಲ್ಲಿ ಕ್ಷಮೆ ಕೇಳ್ತಿದ್ದರು: ಶಾಹಿದ್ ಅಫ್ರಿದಿ

ತಾನು ಭಾರತದ ವಿರುದ್ಧ ಆಡುವುದಕ್ಕೆ ಇಷ್ಟಪಡುತ್ತೇನೆ. ಹಾಗೂ ತನ್ನ ತವರು ಪಾಕಿಸ್ತಾನಕ್ಕಿಂತ ಭಾರತದಲ್ಲಿ ನನಗೆ ಹೆಚ್ಚು ಜನ ಪ್ರೀತಿ ತೋರಿಸಿದ್ದಾರೆ ಎಂಬ ತಮ್ಮ 2016ರ ಹೇಳಿಕೆಗೆ ನಾನೀಗಲೂ ಬದ್ದವಿರುವುದಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಪಾಕಿಸ್ತಾನ ಟೀಂ ಇಂಡಿಯಾವನ್ನು ಬಹುಬಾರಿ ಸೋಲಿಸಿದೆ, ಪಂದ್ಯದ ನಂತರ ಅವರು ನಮ್ಮಲ್ಲಿ ಕ್ಷಮೆ ಕೇಳ್ತಿದ್ದರು: ಶಾಹಿದ್ ಅಫ್ರಿದಿ

ಲಾಹೋರ್: ತಾನು ಭಾರತದ ವಿರುದ್ಧ ಆಡುವುದಕ್ಕೆ ಇಷ್ಟಪಡುತ್ತೇನೆ. ಹಾಗೂ ತನ್ನ ತವರು ಪಾಕಿಸ್ತಾನಕ್ಕಿಂತ ಭಾರತದಲ್ಲಿ ನನಗೆ ಹೆಚ್ಚು ಜನ ಪ್ರೀತಿ ತೋರಿಸಿದ್ದಾರೆ ಎಂಬ ತಮ್ಮ 2016ರ ಹೇಳಿಕೆಗೆ ನಾನೀಗಲೂ ಬದ್ದವಿರುವುದಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

"ನಾನು ಯಾವಾಗಲೂ ಭಾರತದ ವಿರುದ್ಧ ಆಡಲು ಆನಂದಿಸುತ್ತೇನೆ. ನಾವು ಅವರನ್ನು ಸಾಕಷ್ಟು ಬಾರಿ ಸೋಲಿಸಿದ್ದೇವೆ. ನಾವು ಅವರನ್ನು ಬಹಳವೇ ಸೋಲಿಗೆ ನೂಕಿರುವುದಾಗಿ ನಾನು ನಂಬುವೆ. ಪಂದ್ಯದ ನಂತರ ಅವರು ನಮ್ಮನ್ನು ಕ್ಷಮೆ ಕೇಳುತ್ತಿದ್ದರು" ಎಂದು ಅವರು ಯೂಟ್ಯೂಬ್‌ನ  ಕ್ರಿಕ್ ಕ್ಯಾಸ್ಟ್ ಶೋನಲ್ಲಿ ಹೇಳಿದ್ದ್ದಾರೆ. 

2016 ರ ಟಿ 20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದ ಪಾಕಿಸ್ತಾನ ತಂಡದ ನಾಯಕ ಅಫ್ರಿದಿ. ಪಾಕಿಸ್ತಾನದಲ್ಲಿ ಅವರು ಪಡೆದುಕೊಂಡದ್ದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದರು. 

ಕಾಶ್ಮೀರದ ಬಗ್ಗೆ ಇತ್ತೀಚೆಗೆ ಅವರು ನೀಡಿದ್ದ ಹೇಳಿಕೆಗಳು ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರೊಂದಿಗಿನ ವಾಗ್ವಾದಗಳೂ ಅವರ ಮತ್ತು ಭಾರತೀಯ ಅಭಿಮಾನಿಗಳ ನಡುವಿನ ಸಂಬಂಧವನ್ನು ಗಮನಾರ್ಹವಾಗಿ ಕೆಡಿಸಿದೆ.  ಆದರೆ ಅಫ್ರಿದಿ ಮಾತ್ರ ತಾವು ಅಂದಿನ ಹೇಳಿಕೆಗೆ ಬದ್ದವಾಗಿರುವುದಾಗಿ ಹೇಳಿದ್ದಾರೆ.

"ಬೇರೆ ಯಾವುದೇ ದೇಶಗಳಿಗಿಂತ ಭಾರತದಲ್ಲಿ ನನಗೆ ಹೆಚ್ಚಿನ ಪ್ರೀತಿ ಸಿಕ್ಕಿದೆ. ಆಗ ನಾನು ಅಲ್ಲಿಗೆ ನಾಯಕನಾಗಿ ಹಾಗೂ ಪಾಕ್ ರಾಯಭಾರಿಯಾಗಿ ಹೋಗಿದ್ದೆ.

"ನಾನು ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಸಾಕಷ್ಟು ಆಟವಾಡುತ್ತಿದ್ದೇನೆ. ನಮಗೆ ಹೆಚ್ಚಿನ ಒತ್ತಡವಿರುತ್ತಿತ್ತು. ಅವು ಉತ್ತಮ ತಂಡಗಳು, ದೊಡ್ಡ ತಂಡಗಳು. ಅವರ ದೇಶಗಳಲ್ಲಿ ಹೋಗಿ ಕ್ರಿಕೆಟ್ ಆಡುವುದು, ಉತ್ತಮ ಪ್ರದರ್ಶನ ನೀಡುವುದು ಬಹುದೊಡ್ಡ ವಿಚಾರ. "

1999 ರ ಚೆನ್ನೈ ಟೆಸ್ಟ್‌ನಲ್ಲಿ ಅವರು ಗಳಿಸಿದ 141ರನ್ ಗಳು ತನ್ನ ನೆಚ್ಚಿನ ಸಾಧನೆಯಾಗಿತ್ತು ಎಂದು ಅಫ್ರಿದಿ ಹೇಳಿದ್ದಾರೆ.  "ನನ್ನ ಅವಿಸ್ಮರಣೀಯ ಇನ್ನಿಂಗ್ಸ್ ಭಾರತದ ವಿರುದ್ಧ 141 ರನ್ ಗಳಿಸಿದ್ದಾಗಿತ್ತು. ಅದೂ ಭಾರತದಲ್ಲಿ ಈ ಸಾಧನೆ. ನನಗೆ ವಾಸಿಮ್ (ವಾಸಿಮ್ ಅಕ್ರಮ್) ಬೆಂಬಲ ನೀಡಿದ್ದರು.  ಅದು ಕಠಿಣ ಪ್ರವಾಸವಾಗಿದ್ದು ಈ ಇನ್ನಿಂಗ್ಸ್ ಅತಿ ಮುಖ್ಯವಾಗಿತ್ತು" ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com