ಜುನೇದ್ ಖಾನ್
ಜುನೇದ್ ಖಾನ್

ಉಗುಳು ಬಳಕೆ ಇಲ್ಲದೆ ಪಾಕ್‌ ವೇಗಿಗಳು ಇಂಗ್ಲೆಂಡ್‌ ಪಿಚ್‌ಗಳಲ್ಲಿ ಪರದಾಡಲ್ಲಿದ್ದಾರೆ: ಜುನೇದ್‌ ಖಾನ್

ಪಾಕಿಸ್ತಾನ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದು, ಆಗಸ್ಟ್‌ನಲ್ಲಿ ತಲಾ ಮೂರು ಪಂದ್ಯಗಳ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ಸರಣಿಗಳನ್ನು ಆಡಲಿದೆ. ಈ ಸಲುವಾಗಿ ಈಗಾಗಲೇ ಮ್ಯಾಂಚೆಸ್ಟರ್‌ನಲ್ಲಿ ಬೀಡುಬಿಟ್ಟಿರುವ ಪಾಕ್‌ ಪಡೆ 14 ದಿನಗಳ ಕ್ವಾರಂಟೈನ್‌ ಬಳಿಕ ಕಠಿಣ ಅಭ್ಯಾಸದಲ್ಲಿ ತೊಡಗಲಿದೆ.

ಕರಾಚಿ: ಪಾಕಿಸ್ತಾನ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದು, ಆಗಸ್ಟ್‌ನಲ್ಲಿ ತಲಾ ಮೂರು ಪಂದ್ಯಗಳ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ಸರಣಿಗಳನ್ನು ಆಡಲಿದೆ. ಈ ಸಲುವಾಗಿ ಈಗಾಗಲೇ ಮ್ಯಾಂಚೆಸ್ಟರ್‌ನಲ್ಲಿ ಬೀಡುಬಿಟ್ಟಿರುವ ಪಾಕ್‌ ಪಡೆ 14 ದಿನಗಳ ಕ್ವಾರಂಟೈನ್‌ ಬಳಿಕ ಕಠಿಣ ಅಭ್ಯಾಸದಲ್ಲಿ ತೊಡಗಲಿದೆ.

ಅಂದಹಾಗೆ ಕೊರೊನಾ ವೈರಸ್‌ ಕಾರಣ ಕ್ರಿಕೆಟ್‌ನಲ್ಲಿ ಈಗ ಹಲವು ನಿಯಮಗಳನ್ನು ತರಲಾಗಿದೆ. ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಆಟಗಾರು ಚೆಂಡಿಗೆ ಹೊಳಪು ತರಲು ಯಾವುದೇ ಕಾರಣಕ್ಕೂ ಉಗುಳನ್ನು ಬಳಸಬಾರದು ಎಂದು ನಿಷೇಧ ಹೇರಲಾಗಿದೆ.

ಉಗುಳು ಬಳಕೆ ಮಾಡದೇ ಹೋದರೆ ಪಾಕ್‌ ವೇಗಿಗಳು ಇಂಗ್ಲೆಂಡ್‌ ಪಿಚ್‌ಗಳಲ್ಲಿ ಪರದಾಟ ನಡೆಸುವುದು ನಿಶ್ಚಿತ ಎಂದು ಅವಕಾಶ ವಂಚಿತ ಎಡಗೈ ವೇಗಿ ಜುನೇದ್‌ ಖಾನ್‌ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್‌ ಪ್ರವಾಸ ಸಲುವಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಕಟಿಸಿದ್ದ 29 ಆಟಗಾರರ ಪಟ್ಟಿಯಲ್ಲಿ 29 ವರ್ಷದ ವೇಗದ ಬೌಲರ್‌ ಜುನೇದ್‌ಗೆ ಸ್ಥಾನ ಲಭ್ಯವಾಗಿರಲಿಲ್ಲ.

ಚೆಂಡಿಗೆ ಉಗುಳು ಹಚ್ಚುವುದು ನಿಷೇಧವಾಗಿರುವ ಕಾರಣ ಎರಡೂ ತಂಡಗಳು ರಿವರ್ಸ್‌ ಸ್ವಿಂಗ್‌ ತರುವಲ್ಲಿ ವಿಫಲವಾಗಲಿವೆ. ಆದರೆ, ಇಲ್ಲಿ ಪರದಾಟವು ನಮ್ಮ ಬೌಲರ್‌ಗಳಿಗೆ ಹೆಚ್ಚಿರುತ್ತದೆ. ಏಕೆಂದರೆ ಇಂಗ್ಲೆಂಡ್‌ ಬೌಲರ್‌ಗಳು ಸ್ವಿಂಗ್‌ ಬೌಲಿಂಗ್‌ ಅನ್ನು ಹೆಚ್ಚು ನೆಚ್ಚಿಕೊಂಡಿಲ್ಲ. 

ಜೇಮ್ಸ್‌ ಆಂಡರ್ಸನ್‌ ಹೊಸ ಚೆಂಡಿನಲ್ಲಿ ಅದ್ಭುತವಾಗಿ ಎಸೆಯುತ್ತಾರೆ. ಆದರೆ ಅವರ ರಿವರ್ಸ್‌ ಸ್ವಿಂಗ್‌ ಅಷ್ಟೇನು ಪರಿಣಾಮಕಾರಿಯಲ್ಲ. ಅದೇ ರೀತಿ ಸ್ಟುವರ್ಟ್‌ ಬ್ರಾಡ್ ಮತ್ತು ಜೋಫ್ರ ಆರ್ಚರ್‌ ಅವರ ರಿವರ್ಸ್‌ ಸ್ವಿಂಗ್‌ ಕೂಡ ಅಷ್ಟು ಹೇಳಿಕೊಳ್ಳುವಂತಿಲ್ಲ," ಎಂದು ಸ್ಥಳೀಯ ವೆಬ್‌ಸೈಟ್‌ ಒಂದಕ್ಕೆ ಜುನೇದ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com