ಸಹ ಆಟಗಾರ ಶ್ರೇಯಸ್ ಐಯ್ಯರ್ ಮನೆಯಲ್ಲಿ ನೀರ್ ದೋಸೆ ಸವಿದ ವಿರಾಟ ಕೊಹ್ಲಿ

ನೀರ್ ದೋಸೆ ಕರಾವಳಿಯ ಸಾಂಪ್ರದಾಯಿಕ ಜನಪ್ರಿಯ ತಿಂಡಿ. ಇದರ ರುಚಿಯನ್ನು ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸವಿದಿದ್ದರಂತೆ. ಅದು ಸಹ ಆಟಗಾರ ಶ್ರೇಯಸ್ ಐಯ್ಯರ್ ಅವರ ಮನೆಯಲ್ಲಿ.

Published: 09th July 2020 11:14 AM  |   Last Updated: 09th July 2020 11:51 AM   |  A+A-


Virat Kohli and Shreyas Iyer

ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್

Posted By : Sumana Upadhyaya
Source : The New Indian Express

ನವದೆಹಲಿ: ನೀರ್ ದೋಸೆ ಕರಾವಳಿಯ ಸಾಂಪ್ರದಾಯಿಕ ಜನಪ್ರಿಯ ತಿಂಡಿ. ಇದರ ರುಚಿಯನ್ನು ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸವಿದಿದ್ದರಂತೆ. ಅದು ಸಹ ಆಟಗಾರ ಶ್ರೇಯಸ್ ಐಯ್ಯರ್ ಅವರ ಮನೆಯಲ್ಲಿ.

ಮುಂಬೈಯಲ್ಲಿ ವಿರಾಟ್ ಕೊಹ್ಲಿ ಅವರ ಮನೆಯ ಹತ್ತಿರದಲ್ಲಿಯೇ ಶ್ರೇಯಸ್ ಐಯ್ಯರ್ ಮನೆಯಿರುವುದು. ಇತ್ತೀಚೆಗೆ ಕೊರೋನಾ ಲಾಕ್ ಡೌನ್ ಮಧ್ಯೆ ಶ್ರೇಯಸ್ ಮನೆಗೆ ಕೊಹ್ಲಿ ಹೋಗಿದ್ದರಂತೆ. ಆಗ ಶ್ರೇಯಸ್ ಅಮ್ಮ ವಿರಾಟ್ ಗೆ ವಿಶೇಷವಾಗಿ ನೀರ್ ದೋಸೆ ಮಾಡಿ ಕೊಟ್ಟರಂತೆ.

ಮಂಗಳೂರು ಕಡೆಯ ನೀರ್ ದೋಸೆ ತಿಂದು ವಿರಾಟ್ ಕೊಹ್ಲಿ ತುಂಬಾ ಇಷ್ಟಪಟ್ಟು ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಗೆಳೆಯ ನಮಗೆ ಮನೆರುಚಿಯ ಸೊಗಸಾದ ನೀರ್ ದೋಸೆ ಮಾಡಿ ಬಡಿಸಿದ್ದಾನೆ. ಇಷ್ಟೊಂದು ರುಚಿಯ ದೋಸೆ ತಿಂದು ಬಹಳ ಸಮಯಗಳಾಗಿತ್ತು. ನಿಮ್ಮ ತಾಯಿಗೆ ದೊಡ್ಡ ಥ್ಯಾಂಕ್ಸ್, ಅದಕ್ಕೆ ಪ್ರತಿಯಾಗಿ ನಾವು ಕಳುಹಿಸಿಕೊಟ್ಟ ಮಶ್ರೂಮ್ ಬಿರಿಯಾನಿ ನಿಮಗೆ ಇಷ್ಟವಾಗಿರಬಹುದು ಎಂದು ಭಾವಿಸುತ್ತೇನೆ. ಶ್ರೇಯಸ್ ಐಯ್ಯರ್ ಒಳ್ಳೆ  ಮನುಷ್ಯ, ನಾವಿಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಭೇಟಿಯಾಗಿದ್ದೇವೆ ಎಂದು ಹೇಳಲು ಬಯಸುತ್ತೇನೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಪ್ರತಿಕ್ರಿಯೆ ನೀಡಿ ಭಯ್ಯಾ, 1,400 ಕಿಲೋ ಮೀಟರ್ ದೂರದಲ್ಲಿರುವ ನಮಗೂ ಸ್ವಲ್ಪ ಬಿರಿಯಾನಿ ಕಳುಹಿಸಿಕೊಡಿ ಎಂದು ಕೊಹ್ಲಿಯನ್ನು ಕಿಚಾಯಿಸಿದ್ದಾರೆ. 

Stay up to date on all the latest ಕ್ರಿಕೆಟ್ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp