ಜನ್ಮದಿನದಂದು 35 ಮಕ್ಕಳ ಶಸ್ತ್ರಚಿಕಿತ್ಸೆಗೆ ನೆರವಾದ ಟೀಂ ಇಂಡಿಯಾ ಮಾಜಿ ನಾಯಕ ಗವಾಸ್ಕರ್

ಟೀಮ್‌ ಇಂಡಿಯಾದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌, ತಮ್ಮ 71ನೇ ಹುಟ್ಟು ಹಬ್ಬದ ದಿನದಂದು ಖಾರ್‌ಘರ್‌ನಲ್ಲಿರುವ ಮಕ್ಕಳ ಹೃದಯ ಆರೈಕೆಯ ಶ್ರೀ ಸತ್ಯ ಸಾಯ್‌ ಸಂಜೀವಿನಿ ಹಾಸಪಿಟಲ್‌ನಲ್ಲಿ 35 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್

ಮುಂಬೈ: ಟೀಮ್‌ ಇಂಡಿಯಾದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌, ತಮ್ಮ 71ನೇ ಹುಟ್ಟು ಹಬ್ಬದ ದಿನದಂದು ಖಾರ್‌ಘರ್‌ನಲ್ಲಿರುವ ಮಕ್ಕಳ ಹೃದಯ ಆರೈಕೆಯ ಶ್ರೀ ಸತ್ಯ ಸಾಯ್‌ ಸಂಜೀವಿನಿ ಹಾಸಪಿಟಲ್‌ನಲ್ಲಿ 35 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.

ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಇದ್ದಂತಹ ಪೋಷಕರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ಗವಾಸ್ಕರ್‌ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವನ್ನಾಗಿಸಿಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಸಿಡಿಸಿದ ಮೊದಲ ಕ್ರಿಕೆಟಿಗ ಗವಾಸ್ಕರ್‌ ಕಳೆದ ವರ್ಷ ಸಹ ಮಕ್ಕಳಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದರು. ತಾವು ಟೆಸ್ಟ್‌ನಲ್ಲಿ ಒಟ್ಟೂ 35 ಶತಕ ಸಿಡಿಸಿದ್ದ ನೆನಪಿಗೆ ಗವಾಸ್ಕರ್ 35 ಮಕ್ಕಳ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ ಎನ್ನಲಾಗಿದೆ.

"ಮಕ್ಕಳು ಮನೆಯ ಸಂತಸದ ಚಿಲುಮೆ ಭವಿಷ್ಯದ ಆಶಾಕಿರಣ ಆದರೆ ಇಂತಹಾ ಮಕಳಿಗೆ ಆರೋಗ್ಯ ಸಮಸ್ಯೆ ಇದ್ದಾಗ ಹೆಚ್ಚಿನ ಪೋಷಕರಿಗೆ ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಹಣವಿರುವುದಿಲ್ಲ. ಹಾಗಾಗಿ ನಾನು ಇಂತಹಾ ಸಾವಿರಾರು ಮಕ್ಕಳಿಗೆ ನೆರವಾಗುತ್ತಿರುವ "ಹಾರ್ಟ್ ಟು ಹಾರ್ಟ್ ಫೌಂಡೇಶನ್" ಜತೆಗೆ ಸೇರಿ ಸೇವೆ ಸಲ್ಲಿಸುತ್ತಿದ್ದೇನೆ." ಕ್ರಿಕೆಟಿಗ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com