2017ರಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕ್ಷಣವನ್ನು ಸ್ಮರಿಸಿದ: ಅಜಿಂಕ್ಯ ರಹಾನೆ

ಟೆಸ್ಟ್ ತಂಡದ ನಾಯಕನಾಗುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು.  ಸುನೀಲ್‌ ಗವಾಸ್ಕರ್‌ ರಿಂದ ಕಪಿಲ್ ದೇವ್‌; ಮೊಹಮ್ಮದ್‌ ಅಜರುದ್ದಿನ್‌ನಿಂದ ಸೌರವ್‌ ಗಂಗೂಲಿ; ಎಂ.ಎಸ್‌ ಧೋನಿಯಿಂದ ವಿರಾಟ್‌ ಕೊಹ್ಲಿಯವರೆಗೂ ಟೀಮ್ ಇಂಡಿಯಾ ಟೆಸ್ಟ್‌ ತಂಡವನ್ನು ಮುನ್ನಡೆಸಿರುವ ಪ್ರಮುಖ ನಾಯಕರಾಗಿದ್ದಾರೆ.
ರಹಾನೆ-ಕೊಹ್ಲಿ
ರಹಾನೆ-ಕೊಹ್ಲಿ

ನವದೆಹಲಿ: ಟೆಸ್ಟ್ ತಂಡದ ನಾಯಕನಾಗುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು.  ಸುನೀಲ್‌ ಗವಾಸ್ಕರ್‌ ರಿಂದ ಕಪಿಲ್ ದೇವ್‌; ಮೊಹಮ್ಮದ್‌ ಅಜರುದ್ದಿನ್‌ನಿಂದ ಸೌರವ್‌ ಗಂಗೂಲಿ; ಎಂ.ಎಸ್‌ ಧೋನಿಯಿಂದ ವಿರಾಟ್‌ ಕೊಹ್ಲಿಯವರೆಗೂ ಟೀಮ್ ಇಂಡಿಯಾ ಟೆಸ್ಟ್‌ ತಂಡವನ್ನು ಮುನ್ನಡೆಸಿರುವ ಪ್ರಮುಖ ನಾಯಕರಾಗಿದ್ದಾರೆ.

ವಿಶ್ವದ ಬೇರೆ ತಂಡಗಳಿಗಿಂತ ಭಾರತ ಟೆಸ್ಟ್ ತಂಡದ ಸಾರಥ್ಯ ವಹಿಸುವುದು ವಿಶಿಷ್ಠ ಸಾಧನೆ. ಮುಂಬೈ ಬಲಗೈ ಬ್ಯಾಟ್ಸ್‌ಮನ್‌ ಅಜಿಂಕ್ಯಾ ರಹಾನೆ 2017ರಲ್ಲಿ ಧರ್ಮಶಾರ್ಲಾದಲ್ಲಿ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಒಮ್ಮೆ ಭಾರತ ತಂಡವನ್ನು ಮುನ್ನಡೆಸಿದ್ದರು. ವೃತ್ತಿ ಜೀವನದ ಮೊದಲ ಪಂದ್ಯದ ನಾಯಕತ್ವದಲ್ಲಿ ರಹಾನೆ ಯಶಸ್ವಿಯಾಗಿದ್ದರು.

ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು, ಎರಡನೇ ಪಂದ್ಯದಲ್ಲಿ ಭಾರತ ಗೆದ್ದಿತ್ತು ಹಾಗೂ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಸರಣಿ ಗೆಲುವಿನ ಕೊನೆಯ ಪಂದ್ಯ ಅತ್ಯಂತ ರೋಚಕತೆ ಕೆರಳಿಸಿತ್ತು. ಮೂರನೇ ಟೆಸ್ಟ್‌ನಲ್ಲಿ ಫೀಲ್ಡಿಂಗ್‌ ಮಾಡುವಾದ ನಾಯಕ ವಿರಾಟ್‌ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ, ಧರ್ಮಶಾಲಾದ ಅಂತಿಮ ಟೆಸ್ಟ್‌ಗೆ ಅವರು ಅಲಭ್ಯರಾಗಿದ್ದರು.

ದೀರ್ಘಾವಧಿ ಸ್ವರೂಪದಲ್ಲಿ ವಿರಾಟ್‌ ಕೊಹ್ಲಿಯೊಂದಿಗೆ ಉಪ ನಾಯಕನಾಗಿದ್ದ ಅಜಿಂಕ್ಯಾ ರಹಾನೆ, ಅಂದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಅತ್ಯಮೂಲ್ಯ ಕ್ಷಣವನ್ನು ಇದೀಗ ಬಲಗೈ ಬ್ಯಾಟ್ಸ್‌ಮನ್‌ ಸ್ಮರಿಸಿಕೊಂಡಿದ್ದು, ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ಕ್ಷಣ ವಿಶೇಷವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಮುಂದಿನ ಪಂದ್ಯದಲ್ಲಿ ನಾನೇ ನಾಯಕನಾಗುತ್ತೇನೆ ಎಂಬ ಸಣ್ಣ ಸುಳಿವು ಇರಲಿಲ್ಲ. ನಾನು ಫಿಟ್‌ ಇಲ್ಲ ಮುಂದಿನ ಪಂದ್ಯವನ್ನು ನೀನೆ ಮುನ್ನಡೆಸಬೇಕು ಎಂದು ವಿರಾಟ್‌ ಕೊಹ್ಲಿ ನನಗೆ ತಿಳಿಸಿದರು. ಆಗ ಮುಖ್ಯ ಕೋಚ್‌ ಆಗಿದ್ದ ಅನಿಲ್‌ ಕುಬ್ಳೆ ಭಾಯ್‌ ಕೂಡ ಇದೇ ವಿಷಯ ಹೇಳಿದರು," ಎಂದು ರಹಾನೆ 2017ರ ಘಟನೆಯನ್ನು ಸ್ಮರಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com