ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಡಿಆರ್‌ಎಸ್‌ ಅನ್ನು ವಿರೋಧಿಸಿದ್ದೇಕೆ?

ಎಲ್‌ಬಿಡಬ್ಲ್ಯೂ ವಿಷಯದಲ್ಲಿ ಡಿಆರ್‌ಎಸ್‌ ತೆಗೆದುಕೊಂಡಾಗ ಚೆಂಡು ಸ್ಟಂಪ್‌ಗೆ ಬಡಿಯುವುದನ್ನು ಕಂಡರೆ ಬ್ಯಾಟ್ಸ್‌ಮನ್‌ಗೆ  ಔಟ್ ನೀಡಬೇಕು ಎಂದು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ನವದೆಹಲಿ: ಎಲ್‌ಬಿಡಬ್ಲ್ಯೂ ವಿಷಯದಲ್ಲಿ ಡಿಆರ್‌ಎಸ್‌ ತೆಗೆದುಕೊಂಡಾಗ ಚೆಂಡು ಸ್ಟಂಪ್‌ಗೆ ಬಡಿಯುವುದನ್ನು ಕಂಡರೆ ಬ್ಯಾಟ್ಸ್‌ಮನ್‌ಗೆ  ಔಟ್ ನೀಡಬೇಕು ಎಂದು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಡಿಆರ್‌ಎಸ್‌ಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರೊಂದಿಗಿನ ಸಂಭಾಷಣೆಯ ವಿಡಿಯೋವನ್ನು ಸಚಿನ್ ಟ್ವೀಟ್ ಮಾಡಿದ್ದಾರೆ.

ಚೆಂಡು ಯಾವ ಶೇಕಡಾ ಆಧಾರದಲ್ಲಿ ಸ್ಟಂಪ್ ಗೆ ಬಡಿಯಿತು ಅನ್ನುವುದು ಮುಖ್ಯವಲ್ಲ. ಡಿಆರ್ಎಸ್ ನಲ್ಲಿ ಚೆಂಡು ಸ್ಟಂಪ್ ಗೆ ಬಡಿದಿದ್ದು ಕಂಡುಬಂದರೆ ಆನ್ ಫೀಲ್ಡ್ ಅಂಪೈರ್ ಡಿಆರ್ ಎಸ್ ತೆಗೆದುಕೊಳ್ಳದೆ ಬ್ಯಾಟ್ಸ್ ಮನ್ ಔಟ್ ಎಂದು ತೀರ್ಪು ನೀಡಬೇಕು ಎಂದು ಹೇಳಿದ್ದಾರೆ. 

ಡಿಆರ್ಎಸ್ ನಲ್ಲಿ ಈ ಬದಲಾವಣೆಯನ್ನು ತಂದರೆ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿದಂತಾಗುತ್ತದೆ. ಮನುಷ್ಯರಂತೆ ತಂತ್ರಜ್ಞಾನಗಳೂ ಶೇ. 100ರಷ್ಟು ಸರಿಯಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com