ಬಿಸಿಸಿಐ ಮಧ್ಯಂತರ ಸಿಇಓ ಆಗಿ ಹೆಮಂಗ್‌ ಅಮಿನ್ ನೇಮಕ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಮಂಗ್ ಅಮಿನ್‌ ಅವರನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಧ್ಯಂತರ ಸಿಇಓ ಆಗಿ ಬಿಸಿಸಿಐ ನೇಮಕ ಮಾಡಿದೆ. "ಹೆಮಂಗ್‌ ಅಮಿನ್‌ ಅವರನ್ನು ಬಿಸಿಸಿಐನ ಮಧ್ಯಂತರ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಎಎನ್‌ಐಗೆ ತಿಳಿಸಿದೆ.
ಹೆಮಂಗ್‌ ಅಮಿನ್
ಹೆಮಂಗ್‌ ಅಮಿನ್

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಮಂಗ್ ಅಮಿನ್‌ ಅವರನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಧ್ಯಂತರ ಸಿಇಓ ಆಗಿ ಬಿಸಿಸಿಐ ನೇಮಕ ಮಾಡಿದೆ. "ಹೆಮಂಗ್‌ ಅಮಿನ್‌ ಅವರನ್ನು ಬಿಸಿಸಿಐನ ಮಧ್ಯಂತರ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಎಎನ್‌ಐಗೆ ತಿಳಿಸಿದೆ.

ಕಳೆದ ವಾರ ರಾಹುಲ್‌ ಜೊಹ್ರಿ ಅವರ ಸಿಇಓ ಹುದ್ದೆಯ ರಾಜೀನಾಮೆಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಂಗೀಕರಿಸಿತ್ತು."ಹಲವು ತಿಂಗಳುಗಳ ಹಿಂದೆಯೇ ರಾಹುಲ್ ಜೊಹ್ರಿ ಬಿಸಿಸಿಐ ಸಿಇಓ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಅವರ ರಾಜೀನಾಮೆಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇತ್ತೀಚಿಗೆ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ. 

ಶಶಾಂಕ್‌ ಮನೋಹರ್‌ ಅಧ್ಯಕ್ಷರಾಗಿದ್ದಾಗ 2016ರಲ್ಲಿಯೇ ರಾಹುಲ್‌ ಜೊಹ್ರಿ ಅವರನ್ನು ಬಿಸಿಸಿಐ ಸಿಇಓ ಹುದ್ದೆಗೆ ನೇಮಕ ಮಾಡಲಾಗಿತ್ತು. ಕಳೆದ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಜೊಹ್ರಿ, ಬಿಸಿಸಿಐ ಹುದ್ದೆಯಿಂದ ದೂರ ಉಳಿಯಲು ಕಳೆದ ಹಲವು ತಿಂಗಳುಗಳ ಹಿಂದೆಯೇ ನಿರ್ಧರಿಸಿ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅವರ ರಾಜೀನಾಮೆ ಅಂಗೀಕಾರವಾಗಿದೆ. 

ಕೊರೊನಾ ವೈರಸ್‌ ಇಡೀ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದರಿಂದ ಕಳೆದ ಮಾರ್ಚ್‌ತಿಂಗಳಿನಿಂದ ಭಾರತ ತಂಡ, ಯಾವುದೇ ಕ್ರಿಕೆಟ್‌ ಪಂದ್ಯವಾಡದೆ ದೂರ ಉಳಿದಿದೆ. ಕಳೆದ ವಾರ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಪುನಾರಂಭವಾಗಿತ್ತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com