ಆಫ್ ಸ್ಪಿನ್ನರ್ ಆರ್ ಅಶ್ವಿನ್‌ ಸಾಮರ್ಥ್ಯಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ: ಗ್ರೇಮ್‌ ಸ್ವಾನ್

ಏಕದಿನ ಕ್ರಿಕೆಟ್‌ನ ವಿಶ್ವದ ಮಾಜಿ ನಂ.1 ಬೌಲರ್‌ ಗ್ರೇಮ್‌ ಸ್ವಾನ್‌, ಟೆಸ್ಟ್‌ ಕ್ರಿಕೆಟ್‌ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್‌ ತಂಡ ಪ್ರಗತಿ ಕಾಣುವಂತೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದವರು. ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಆಫ್‌ ಸ್ಪಿನ್ನರ್‌ ಆಗಿರುವ ಸ್ವಾನ್‌, 2013-14ರಲ್ಲಿ ನಡೆದ ಆ್ಯಷಸ್‌ ಟೆಸ್ಟ್‌ ಸರಣಿ ಬಳಿಕ ಅಂತಾರಾಷ್ಟ್ರೀಯ
ಗ್ರೇಮ್ ಸ್ವಾನ್
ಗ್ರೇಮ್ ಸ್ವಾನ್

ನವದೆಹಲಿ: ಏಕದಿನ ಕ್ರಿಕೆಟ್‌ನ ವಿಶ್ವದ ಮಾಜಿ ನಂ.1 ಬೌಲರ್‌ ಗ್ರೇಮ್‌ ಸ್ವಾನ್‌, ಟೆಸ್ಟ್‌ ಕ್ರಿಕೆಟ್‌ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್‌ ತಂಡ ಪ್ರಗತಿ ಕಾಣುವಂತೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದವರು. ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಆಫ್‌ ಸ್ಪಿನ್ನರ್‌ ಆಗಿರುವ ಸ್ವಾನ್‌, 2013-14ರಲ್ಲಿ ನಡೆದ ಆ್ಯಷಸ್‌ ಟೆಸ್ಟ್‌ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದರು. ಬಳಿಕ ಕ್ರಿಕೆಟ್‌ ಕಾಮೆಂಟೇಟರ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರತ ತಂಡದ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಕೂಡ, ಭಾರತೀಯ ಪಿಚ್‌ಗಳಲ್ಲಿ ಅದ್ಭುತ ಬೌಲರ್‌ ಆಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೆ, ವಿದೇಶಿ ಪಿಚ್‌ಗಳಲ್ಲಿನ ವೈಫಲ್ಯದ ಮೂಲಕ ಟೀಕೆಗಳಿಗೂ ಗುರಿಯಾಗಿದ್ದಾರೆ. ಏಷ್ಯಾ ಭಾಗದಿಂದ ಆಚೆ ಬೌಲಿಂಗ್‌ ಮಾಡಿದಾಗಲೆಲ್ಲಾ ಅಶ್ವಿನ್‌ ವಿಕೆಟ್‌ ಪಡೆಯಲು ಪರದಾಟ ನಡೆಸಿದ್ದಾರೆ. ಹೀಗಾಗಿ ಈಗ ಕೇವಲ ಟೆಸ್ಟ್‌ ತಂಡದಲ್ಲಿ ಮಾತ್ರವೇ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ಇದೀಗ ಅಶ್ವಿನ್‌ ಪರವಾಗಿ ಬ್ಯಾಟ್‌ ಬೀಸಿರುವ ಮಾಜಿ ಆಫ್‌ ಸ್ಪಿನ್ನರ್‌ ಗ್ರೇಮ್‌ ಸ್ವಾನ್‌, ವಿದೇಶಿ ಪಿಚ್‌ಗಳಲ್ಲಿ ಅಶ್ವಿನ್‌ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

"ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಆಡುವುದು ಸಂಪೂರ್ಣ ವಿಭಿನ್ನವಾಗಿರುತ್ತದೆ. ಭಾರತೀಯ ಪಿಚ್‌ಗಳಲ್ಲಿ ಬೌನ್ಸ್‌ ಇರುವುದಿಲ್ಲ ಆದರೆ ಚೆಂಡು ಹೆಚ್ಚು ತಿರುವು ಪಡೆಯುತ್ತದೆ. ಹೀಗಾಗಿ ಅಶ್ವಿನ್‌ಗೆ ಅಲ್ಲಿ ಹೆಚ್ಚು ಯಶಸ್ಸು ಸಿಕ್ಕಿದೆ. ಆದರೆ ಇಂಗ್ಲೆಂಡ್‌ನಲ್ಲಿ ಸ್ಪಿನ್ನರ್‌ಗಳಿಗೆ ಆಡುವುದು ಸುಲಭ. ಹೀಗಾಗಿ ಅಲ್ಲಿ ಅಶ್ವಿನ್‌ ವಿಕೆಟ್‌ ಪಡೆಯಲು ಕಷ್ಟಪಟ್ಟಿದ್ದಾರೆ," ಎಂದು ಪತ್ರಿಕೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ವಾನ್‌ ಹೇಳಿದ್ದಾರೆ.

'2018ರಲ್ಲಿ ಅವರು ಇಂಗ್ಲೆಂಡ್‌ಗೆ ಬಂದಾಗ ಮೊದಲ ಟೆಸ್ಟ್‌ನಲ್ಲಿ ಅದ್ಭುತವಾಗಿ ಬೌಲಿಂಗ್‌ ಮಾಡಿದ್ದರು. ಆದರೆ, ಸೌತಾಂಪ್ಟನ್‌ ಟೆಸ್ಟ್‌ಗೂ ಮುನ್ನ ಅವರು ಗಾಯದ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಹೆಚ್ಚು ಆಡುವ ಅವಕಾಶ ಸಿಗಲಿಲ್ಲ. ನಿಜ ಹೇಳುವುದಾದರೆ ಅಶ್ವಿನ್‌ ಅವರ ಸಾಮರ್ಥ್ಯಕ್ಕೆ ಸಿಗಬೇಕಾದ ಬೆಲೆ ಸಿಗುದಿಲ್ಲ. ವಿಕೆಟ್‌ ಪಡೆಯಲು ಅವರು ಹೆಚ್ಚೇನೂ ಮಾಡುವ ಅಗತ್ಯವಿಲ್ಲ. ತಮ್ಮಲ್ಲಿನ ನೈಜ ಸಾಮರ್ಥ್ಯವನ್ನು ಬೆಂಬಲಿಸಿದರೆ ಸಾಕು. ಅದರಲ್ಲೂ ಅವರು ಲೆಗ್‌ ಸ್ಪಿನ್‌ ಎಲ್ಲಾ ಪ್ರಯತ್ನಿಸುವುದು ನನಗೆ ಕಿಂಚಿತ್ತೂ ಇಷ್ಟವಿಲ್ಲ' ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com