ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನವನ್ನು ಹಿಂಪಡೆಯುವಂತೆ ಪಂಜಾಬ್ ಸರ್ಕಾರವನ್ನು ಕೇಳಿಕೊಂಡಿದ್ದೆ: ಹರ್ಭಜನ್ ಸಿಂಗ್

ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ನಿರ್ದೇಶನ ಮಾಡಿರುವುದನ್ನು ಹಿಂಪಡೆಯುವಂತೆ ಪಂಜಾಬ್ ಸರ್ಕಾರವನ್ನು ತಾವೇ ಸ್ವತ: ಕೇಳಿಕೊಂಡಿದ್ದಾಗಿ  ಟೀಂ ಇಂಡಿಯಾ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

Published: 18th July 2020 04:46 PM  |   Last Updated: 18th July 2020 05:28 PM   |  A+A-


Harbhajan_Singh1

ಹರ್ಭಜನ್ ಸಿಂಗ್

Posted By : Nagaraja AB
Source : The New Indian Express

ನವದೆಹಲಿ: ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ನಿರ್ದೇಶನ ಮಾಡಿರುವುದನ್ನು ಹಿಂಪಡೆಯುವಂತೆ ಪಂಜಾಬ್ ಸರ್ಕಾರವನ್ನು ತಾವೇ ಸ್ವತ: ಕೇಳಿಕೊಂಡಿದ್ದಾಗಿ  ಟೀಂ ಇಂಡಿಯಾ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಹರ್ಭಜನ್ ಸಿಂಗ್, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆಯಲು ತಾವು ಅರ್ಹರಾಗಿಲ್ಲ ಎಂದು
ಬರೆದುಕೊಂಡಿದ್ದಾರೆ.

ಆತ್ಮೀಯ ಗೆಳೆಯರೇ, ನಾನೇ ಸತತ ಕರೆ ಮಾಡಿ ಪಂಜಾಬ್ ಸರ್ಕಾರವನ್ನು ಕೇಳಿಕೊಂಡರಿಂದ ಖೇಲ್ ರತ್ನ ಪ್ರಶಸ್ತಿಯಿಂದ ಹೆಸರನ್ನು
ಹಿಂಪಡೆದಿದೆ.ಸತ್ಯವೆಂದರೆ ನಾನು  ಖೇಲ್ ರತ್ನಕ್ಕೆ ಅರ್ಹನಲ್ಲ, ಕಳೆದ ಮೂರು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳ ಪ್ರದರ್ಶನವನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದಿದ್ದಾರೆ.

 

ಇಲ್ಲಿ ಪಂಜಾಬ್ ಸರ್ಕಾರದ ತಪ್ಪಿಲ್ಲ, ಅವರು ನನ್ನ ಹೆಸರನ್ನು ಹಿಂಪಡೆಯುವ ಹಕ್ಕು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ
ನನ್ನ ಸ್ನೇಹಿತರ ಒತ್ತಾಯ ಊಹೆಯಲ್ಲ ಎಂದು ಅವರು ಬರೆದಿದ್ದಾರೆ.

ಖೇಲ್ ರತ್ನಕ್ಕೆ ಹೆಸರು ನಿರ್ದೇಶನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲ ಮತ್ತು ಊಹೆಗಳಿವೆ. ಕಳೆದ ವರ್ಷ ವಿಳಂಬವಾಗಿ
ಹೆಸರನ್ನು ಕಳುಹಿಸಲಾಗಿತ್ತು.ಆದರೆ, ಮೂರು ವರ್ಷಗಳಿಂದ ಅರ್ಹರ ಪಟ್ಟಿಯಲ್ಲಿ ಇಲ್ಲದ ಕಾರಣ ನನ್ನ ಹೆಸರನ್ನು ಹಿಂಪಡೆಯುವಂತೆ
ಪಂಜಾಬ್ ಸರ್ಕಾರವನ್ನು ಕೇಳುತ್ತಿರುವುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ.

ನಾಲ್ಕು ವರ್ಷಗಳ ಕಾಲ ಕ್ರೀಡಾ ಕ್ಷೇತ್ರದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದವರಿಗೆ ಮುಂದಿನ ವರ್ಷದ ಆರಂಭದಲ್ಲಿಯೇ  ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಪಂಜಾಬ್ ಸರ್ಕಾರ ಕ್ರೀಡಾ ಸಚಿವಾಲಯಕ್ಕೆ ವಿಳಂಬವಾಗಿ ದಾಖಲೆಗಳನ್ನು ಸಲ್ಲಿಸಿದ್ದರಿಂದ ಹರ್ಭಜನ್ ಸಿಂಗ್ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿತ್ತು. ಆದಾಗ್ಯೂ, ಈ ವರ್ಷ ನಿಗದಿತ ವೇಳೆಯಲ್ಲಿ ನಾಮನಿರ್ದೇಶನ ಮಾಡಲಾಗಿದೆ. 

ಹರ್ಭಜನ್ ಸಿಂಗ್ ಭಾಗವಾಗಿದ್ದ ಟೀಂ ಇಂಡಿಯಾ 2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ ವಿಶ್ವಕಪ್ ಗೆದಿದ್ದೆ. ಅನಿಲ್ ಕುಂಬ್ಳೆ (619) ಕಪೀಲ್ ದೇವ್(434) ಬಿಟ್ಟರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಟೀಂ ಇಂಡಿಯಾದ ಮೂರನೇ ಆಟಗಾರ ಹರ್ಭಜನ್ ಸಿಂಗ್ ಆಗಿದ್ದಾರೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp