ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಾಂಡ್ಯ, ರವೀಂದ್ರ ಜಡೇಜಾ ಆಯ್ಕೆ ಸಾಧ್ಯತೆ ಕಡಿಮೆ: ಮಾಜಿ ಕ್ರಿಕೆಟಿಗ

ಆಸ್ಟ್ರೇಲಿಯಾ ಅಂಗಣದಲ್ಲಿ ಟೀಮ್‌ ಇಂಡಿಯಾ ಇದೇ ವರ್ಷದ ಅಂತ್ಯಕ್ಕೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡುವುದು ಖಾತ್ರಿಯಾಗಿದ್ದು. ಮೊದಲ ಪಂದ್ಯ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಡಿ.3ರಂದು ಆರಂಭವಾಲಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಾಂಡ್ಯ, ರವೀಂದ್ರ ಜಡೇಜಾ ಅಲಭ್ಯತೆ ಸಾಧ್ಯ: ಮಾಜಿ ಕ್ರಿಕೆಟಿಗ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಾಂಡ್ಯ, ರವೀಂದ್ರ ಜಡೇಜಾ ಅಲಭ್ಯತೆ ಸಾಧ್ಯ: ಮಾಜಿ ಕ್ರಿಕೆಟಿಗ

ಆಸ್ಟ್ರೇಲಿಯಾ ಅಂಗಣದಲ್ಲಿ ಟೀಮ್‌ ಇಂಡಿಯಾ ಇದೇ ವರ್ಷದ ಅಂತ್ಯಕ್ಕೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡುವುದು ಖಾತ್ರಿಯಾಗಿದ್ದು. ಮೊದಲ ಪಂದ್ಯ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಡಿ.3ರಂದು ಆರಂಭವಾಲಿದೆ.

ಟೀಮ್‌ ಇಂಡಿಯಾ ಯಾವ ಓಪನರ್‌ಗಳನ್ನು ಆಡಿಸಲಿದೆ ಎಂಬುದು ಚರ್ಚೆಯಾಗುತ್ತಿರುವ ನಡುವೆಯೇ ಆರ್ ಅಶ್ವಿನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮುಂತಾದ ಆಲ್ ರೌಂಡರ್ ಗಳು ತಂಡದಲ್ಲಿರಲಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. 

ಪಂದ್ಯಕ್ಕೆ ಇನ್ನೂ ಸಮಯವಿರುವುದರಿಂದ ಭಾರತ ತಂಡಕ್ಕೂ ತಂಡವನ್ನು ಅಂತಿಮಗೊಳಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ದೊರೆಯಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಈ ಬಗ್ಗೆ ಮಾತನಾಡಿದ್ದು, ಪಾಂಡ್ಯ ಹಾಗೂ ಜಡೇಜಾ ಟೆಸ್ಟ್ ಸರಣಿಗೆ ಆಯ್ಕೆಯಾಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ಆಕಾಶ್ ವಾಣಿಯಲ್ಲಿ ಅಭಿಮಾನಿಯೊಬ್ಬರು ಜಡೇಜಾ ಹಾಗೂ ಪಾಂಡ್ಯ ಕುರಿತ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಆಕಾಶ್ ಚೋಪ್ರಾ, ಇಬ್ಬರೂ ಆಟಗಾರರು ತಂಡಕ್ಕೆ ಮರಳುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.

ಪಾಂಡ್ಯಾಗೆ ಗಾಯದ ಸಮಸ್ಯೆಯಿದ್ದು, ಬೌಲಿಂಗ್ ನ್ನು ಪುನಃ ಪ್ರಾರಂಭಿಸಿಲ್ಲ. ಏಕದಿನ ಪಂದ್ಯವನ್ನಾಗಿಲ್ಲ. ಟಿ20 ಯಲ್ಲಿ ಆಡಬಹುದು ಆದರೆ ಐಪಿಎಲ್ ನ ನಂತರ ಟೆಸ್ಟ್ ನಲ್ಲಿ ಆಡಿಸುತ್ತೀರಾ? ಈ ಹಿನ್ನೆಲೆಯಲ್ಲಿ ಮುಂಬರುವ ಟೆಸ್ಟ್ ಸರಣಿಗೆ ಪಾಂಡ್ಯ ಆಯ್ಕೆ ಕಷ್ಟ ಸಾಧ್ಯ ಎಂದು ಆಕಾಶ್ ಚೋಪ್ರಾ ಕೇಳಿದ್ದಾರೆ.

ರವೀಂದ್ರ ಜಡೇಜಾರಿಗಿಂತ ಮುನ್ನ ಅಶ್ವಿನ್ ಹಾಗೂ ಕುಲ್ದೀಪ್ ಅವರ ಆಯ್ಕೆಗಳಿಗಿಂತ ಪರಿಗಣಿಸಬೇಕಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ವ್ರಿಸ್ಟ್ ಸ್ಪಿನ್ನರ್ ಆಗಿರುವ ಕುಲ್ದೀಪ್ ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ ಗಳನ್ನು ಕುಲ್ದೀಪ್ ಪಡೆದಿದ್ದರು. ಇದಾದ ಬಳಿಕ ಕುಲ್ದೀಪ್ ಅವರನ್ನು ಆಡಿಸಿಲ್ಲ. ಆದ್ದರಿಂದ ಕುಲ್ದೀಪ್ ಗೆ ಮುಂದಿನ ಟೆಸ್ಟ್ ತಂಡದಲ್ಲಿ ಆಡಲು ಹೆಚ್ಚಿನ ಅವಕಾಶವಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com