ಐಪಿಎಲ್‌ ಟೂರ್ನಿ ವಿಶ್ವಕಪ್‌ಗೆ ಸರಿಸಮ: ಗ್ಲೇನ್ ಮ್ಯಾಕ್ಸ್‌ವೆಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಯೋಜನೆಗೆ ರಹದಾರಿ ಸಿಕ್ಕಂತಾಗಿದೆ.
ಗ್ಲೇನ್ ಮ್ಯಾಕ್ಸ್ ವೆಲ್
ಗ್ಲೇನ್ ಮ್ಯಾಕ್ಸ್ ವೆಲ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಯೋಜನೆಗೆ ರಹದಾರಿ ಸಿಕ್ಕಂತಾಗಿದೆ.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಐಪಿಎಲ್‌ 2020 ಟೂರ್ನಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅನಿರ್ದಿಷ್ಟ ಕಾಲ ರದ್ದು ಪಡಿಸಿತ್ತು. 

ಸೆಪ್ಟೆಂಬರ್‌-ನವೆಂಬರ್‌ ಅವಧಿಯಲ್ಲಿ ಟೂರ್ನಿ ಆಯೋಜನೆಗೆ ಯೋಜನೆ ರೂಪಿಸಿತ್ತು. ಆದರೆ, ವಿಶ್ವಕಪ್‌ ಮುಂದೂಡದ ಹೊರತಾಗಿ ಬಿಸಿಸಿಐಗೆ ಐಪಿಎಲ್‌ ಆಯೋಜಿಸುವುದು ಸಾಧ್ಯವಿರಲಿಲ್ಲ.

ಐಪಿಎಲ್ ಪಂದ್ಯಾವಳಿಯನ್ನು ವಿಶ್ವಕಪ್‌ ಗೆ ಹೋಲಿಸಿರುವ ಗ್ಲೇನ್ ಮ್ಯಾಕ್ಸ್‌ವೆಲ್, ಇದರಲ್ಲಿ ಭಾಗವಹಿಸುವ ಸಾಗರೋತ್ತರ ಆಟಗಾರರು ಅದರಲ್ಲಿ ಆಡುವ ‘ಕಿಕ್ ಪಡೆಯಿರಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com