ಕ್ರಿಕೆಟ್ ನಲ್ಲಿ ಆರ್ಥಿಕ ಅಸಮಾನತೆ: ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಅಖ್ತರ್ ವಾಗ್ದಾಳಿ

 ಕ್ರಿಕೆಟ್ ನಲ್ಲಿ ಆರ್ಥಿಕ  ಅಸಮಾನತೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ವಿರುದ್ಧ ಮಾಜಿ ಪಾಕಿಸ್ತಾನ ವೇಗಿಶೋಯೆಬ್ ಅಖ್ತರ್  ಕಿಡಿಕಾರಿದ್ದಾರೆ.
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್

ಇಸ್ಲಾಮಾಬಾದ್: ಕ್ರಿಕೆಟ್ ನಲ್ಲಿ ಆರ್ಥಿಕ  ಅಸಮಾನತೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ವಿರುದ್ಧ ಮಾಜಿ ಪಾಕಿಸ್ತಾನ ವೇಗಿ
ಶೋಯೆಬ್ ಅಖ್ತರ್  ಕಿಡಿಕಾರಿದ್ದಾರೆ.

 ಬಿಸಿಸಿಐ ಆರ್ಥಿಕವಾಗಿ ಸಂಪದ್ಬರಿತವಾಗಿರುವುದರಿಂದ ಮಂಕಿಗೇಟ್ ನಂತಹ ವಿವಾದಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕೈ ಬಿಟ್ಟಿತ್ತು ಎಂದು ಯೂ ಟ್ಯೂಬ್ ಚಾನೆಲ್ ನಲ್ಲಿ ಆರೋಪಿಸಿದ್ದಾರೆ.

 ಮಂಕಿಗೇಟ್  ವಿವಾದ ಕುರಿತಂತೆ ಮಾತನಾಡಿರುವ ಅಖ್ತರ್,  2008ರಲ್ಲಿ  ಭಾರತ ಪ್ರವಾಸದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪೀನ್ನರ್ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾದ  ಆಲ್ ರೌಂಡರ್ ಆಂಡ್ರೋ ಸೈಮಂಡ್ಸ್ ವಿರುದ್ಧ ಜನಾಂಗೀಯ ವಿರುದ್ಧ ಮಾಡಿದ್ದರೂ ಸರಣಿ ಮುಗಿಸುವುದಾಗಿ ಬಿಸಿಸಿಐ ಬೆದರಿಕೆ ಹಾಕುತ್ತದೆ. ಅಂತಹ ಘಟನೆಯೇನೂ ನಡೆದಿಲ್ಲ ಅಂತಾ ಆಸ್ಟ್ರೇಲಿಯಾ ಕ್ರಿಕೆಟ್ ಹೇಳುತ್ತದೆ.
ಆಸ್ಟ್ರೇಲಿಯಾದವರಿಗೆ ನೈತಿಕತೆ ಏಲ್ಲಿದೆ ಎಂದು ಅಖ್ತರ್ ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್- ನವೆಂಬರ್ ನಲ್ಲಿ ನಡೆಯಲಿರುವ ಐಪಿಎಲ್  ಹಾಳಾಗಬಾರದು ಎಂಬ ಉದ್ದೇಶದಿಂದ ಟಿ-20 ವಿಶ್ವಕಪ್ ಮುಂದೂಡಲಾಗಿದೆ ಎಂದು ಅಖ್ತರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com