ಐಪಿಎಲ್ ನಡೆಸಲು ಮುಂದಾಗಿರುವ ಬಿಸಿಸಿಐಗೆ ಇಂಗ್ಲೆಂಡ್ ಪ್ರವಾಸ ನಡೆಸಲು ಕಷ್ಟವಾಯ್ತಾ? ಭಾರತ ವಿರುದ್ಧ ಅಲಿಸಾ ಅಸಮಾಧಾನ!

ಮಹಾಮಾರಿ ಕೊರೋನಾ ವೈರಸ್ ಹಾವಳಿಯಿಂದಾಗಿ ಪ್ರಸ್ತಾವಿತ ಇಂಗ್ಲೆಂಡ್ ಪ್ರವಾಸವನ್ನು ಭಾರತ ಮಹಿಳಾ ಕ್ರಿಕೆಟ್ ತಂಡ ರದ್ದುಗೊಳಿಸಿದ ನಡೆಗೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಅಲಿಸಾ ಹೀಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲಿಸಾ ಹೀಲಿ
ಅಲಿಸಾ ಹೀಲಿ

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಹಾವಳಿಯಿಂದಾಗಿ ಪ್ರಸ್ತಾವಿತ ಇಂಗ್ಲೆಂಡ್ ಪ್ರವಾಸವನ್ನು ಭಾರತ ಮಹಿಳಾ ಕ್ರಿಕೆಟ್ ತಂಡ ರದ್ದುಗೊಳಿಸಿದ ನಡೆಗೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಅಲಿಸಾ ಹೀಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಮಹಿಳಾ ತಂಡವು ಜೂನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಮತ್ತ ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳನ್ನಾಡಬೇಕಿತ್ತು. ಆದರೆ ಕೊರೊನೊ ಸೋಂಕಿನಿಂದಾಗಿ ಟೂರ್ನಿಯನ್ನು ಮುಂದೂಡಲಾಗಿತ್ತು. ಆದರೆ ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಲಾಗಿದೆ.

"ಮುಂದಿನ ವರ್ಷದ ಆರಂಭದಲ್ಲಿ ಐಸಿಸಿ ಮಹಿಳಾ ವಿಶ್ವಕಪ್ ನಡೆಯಲಿದ್ದು ಭಾರತ ವಿರುದ್ಧದ ಟೂರ್ನಿ ಬಹಳ ಮುಖ್ಯವಾಗಿತ್ತು. ಆದರೆ ಇದು ನಡೆಯದಕ್ಕೆ ಬೇಸರವಾಗುತ್ತದೆ" ಎಂದು ಸಿಡ್ನಿ ಮೂಲದ ಕ್ರೀಡಾ ಪತ್ರಕರ್ತ ರಿಕ್ ಐರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಹೀಲಿ ಈ ರೀತಿ ಟ್ವೀಟ್ ಮಾಡಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್ ಮುಂದಿನ ವರ್ಷ ಫೆಬ್ರವರಿ 6ರಿಂದ ಮಾರ್ಚ್ 7ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆದರೆ ಮಹಿಳಾ ತಂಡಕ್ಕೆ ಇಂಗ್ಲೆಂಡ್ ಪ್ರವಾಸ ಕಷ್ಟವಾಯ್ತಾ ಎಂದು ಐರ್ ಟ್ವೀಟಿಸಿದ್ದಾರೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com