ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿರುವ ವಿಕಲಚೇತನ ಕ್ರಿಕೆಟ್ ತಂಡದ ನಾಯಕ!

ಮಹಾಮಾರಿ ಕೊರೋನಾ ಹೊಡತಕ್ಕೆ ಕ್ರೀಡಾಪಟುಗಳು ತತ್ತರಿಸಿದ್ದು ಜೀವನೋಪಾಯಕ್ಕಾಗಿ ತರಕಾರಿ ಮಾರುವ, ಕೂಲಿ ಕೆಲಸ ಮಾಡುವ ಪರಿಸ್ಥಿತಿ ತಂದಿಟ್ಟಿದೆ.
ರಾಜೇಂದ್ರ ಸಿಂಗ್ ಧಾಮಿ
ರಾಜೇಂದ್ರ ಸಿಂಗ್ ಧಾಮಿ

ಡೆಹ್ರಾಡೂನ್: ಮಹಾಮಾರಿ ಕೊರೋನಾ ಹೊಡತಕ್ಕೆ ಕ್ರೀಡಾಪಟುಗಳು ತತ್ತರಿಸಿದ್ದು ಜೀವನೋಪಾಯಕ್ಕಾಗಿ ತರಕಾರಿ ಮಾರುವ, ಕೂಲಿ ಕೆಲಸ ಮಾಡುವ ಪರಿಸ್ಥಿತಿ ತಂದಿಟ್ಟಿದೆ. 

ಉತ್ತರಾಖಂಡದ ವಿಕಲಚೇತನ ಕ್ರಿಕೆಟ್ ತಂಡದ ನಾಯಕ 34 ವರ್ಷದ ರಾಜೇಂದ್ರ ಸಿಂಗ್ ಧಾಮಿ ಅವರು ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಸಿಗದ ಕಾರಣ ತಮ್ಮ ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕಷ್ಟದ ಸಮಯದಲ್ಲೂ ಧಾಮಿ ಅವರು ತಮ್ಮದೇ ತಂಡವನ್ನು ನಿರ್ಮಿಸಿಕೊಂಡಿದ್ದಾರೆ.

ಭಾರತೀಯ ವಿಕಲಚೇತನ ಕ್ರಿಕೆಟ್ ತಂಡದ ಮಾಜಿ ನಾಯಕ ಧಾಮಿ ಅವರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಕ್ರಿಕೆಟ್‌ನ ವಿವಿಧ ಆಯಾಮಗಳಲ್ಲಿ ಅಂಡರ್ 19 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ಹಲವು ದಿವ್ಯಾಂಗ ಜನರು ತಮ್ಮ ಜೀವನವನ್ನು ಒತ್ತಡಕ್ಕೆ ಸಿಲುಕಿಸಿ ಭರವಸೆ ಕಳೆದುಕೊಂಡಿರುವುದನ್ನು ನಾನು ನೋಡಿದ್ದೇನೆ. ನಾನು ಒಮ್ಮೆ ಅದೇ ಕತ್ತಲೆಯ ಪ್ರದೇಶದಲ್ಲಿದ್ದೆ. ಹೀಗಾಗಿ ನನ್ನ ಪ್ರಯತ್ನಗಳು ದಿವ್ಯಾಂಗರ ಜೀವನಕ್ಕೆ ಭರವಸೆ ನೀಡುವಲ್ಲಿ ಕೇಂದ್ರೀಕರಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ರಸ್ತೆಗಾಗಿ ನಿರ್ಮಾಣಕ್ಕಾಗಿ ಬಳಸಬೇಕಾದ ಕಲ್ಲುಗಳನ್ನು ಒಡೆಯುವಾಗ ಧಮಿ ದೃಢ ಸಂಕಲ್ಪದೊಂದಿಗೆ ಹೇಳುತ್ತಾರೆ.

"ನಾನು ದಿವ್ಯಾಂಗ ಮಕ್ಕಳಿಗೆ ತರಬೇತಿ ನೀಡುತ್ತಿದ್ದೆ ಮತ್ತು ಭವಿಷ್ಯದ ಪಂದ್ಯಾವಳಿಗಳಿಗೆ ತಯಾರಿ ನಡೆಸಲು ನಾನು ಅಭ್ಯಾಸ ಮಾಡುತ್ತಿದ್ದೆ ಆದರೆ ಕೋವಿಡ್ ಸಾಂಕ್ರಾಮಿಕವು ಎಲ್ಲವನ್ನೂ ನಿಲ್ಲಿಸಿತು ಎಂದು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಧಾಮಿ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com