ಅತ್ಯುತ್ತಮ ನಾಯಕ: ಧೋನಿ, ಪಾಂಟಿಂಗ್ ಇಬ್ಬರಲ್ಲಿ ಅಫ್ರಿದಿ ಆರಿಸಿದ್ದು ಯಾರನ್ನ?

ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಇಬ್ಬರು ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ನಾಯಕರ ಪೈಕಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅತ್ಯುತ್ತಮ ನಾಯಕನಾಗಿ ಒಬ್ಬರನ್ನು ಆರಿಸಿದ್ದಾರೆ.
ಧೋನಿ-ರಿಕಿ ಪಾಂಟಿಂಗ್
ಧೋನಿ-ರಿಕಿ ಪಾಂಟಿಂಗ್

ನವದೆಹಲಿ: ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಇಬ್ಬರು ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ನಾಯಕರ ಪೈಕಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅತ್ಯುತ್ತಮ ನಾಯಕನಾಗಿ ಒಬ್ಬರನ್ನು ಆರಿಸಿದ್ದಾರೆ. 

ಎಂಎಸ್ ಧೋನಿ ನಾಯಕತ್ವದಲ್ಲಿ 2007ರ ಟಿ20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಫಿ ಗೆದ್ದು ಬೀಗಿತ್ತು. ಅದೇ ರೀತಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ 2003 ಮತ್ತು 2007ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಆಸ್ಟ್ರೇಲಿಯಾ ಗೆದ್ದಿತ್ತು. 

ಅಭಿಮಾನಿಯೊಂದಿಗೆ ನಡೆಸಿದ ಸಂಭಾಷಣೆ ವಿಡಿಯೋವನ್ನು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ಅಭಿಮಾನಿ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ನಡುವೆ ಯಾರು ಅತ್ಯುತ್ತಮ ನಾಯಕ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಫ್ರಿದಿ ಎಂಎಸ್ ಧೋನಿ ಎಂದು ಹೇಳಿದ್ದಾರೆ. ಕಾರಣ ತಮ್ಮ ನಾಯಕತ್ವದಲ್ಲಿ ಧೋನಿ ಹಲವು ಯುವ ಪ್ರತಿಭೆಗಳನ್ನು ಬೆಳೆಸಿದ್ದಾರೆ ಎಂದು ಉತ್ತರಿಸಿದ್ದಾರೆ. 

ಎಂಎಸ್ ಧೋನಿ ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲೂ ಪರವಾಗಿ ಒಟ್ಟು 332 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 178 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 120 ಪಂದ್ಯಗಳನ್ನು ತಂಡ ಸೋತ್ತಿತ್ತು. 6 ಪಂದ್ಯ ಟೈ ಆಗಿದ್ದು 15 ಪಂದ್ಯಗಳು ಡ್ರಾ ಆಗಿತ್ತು. 

ಇನ್ನು ರಿಕಿ ಪಾಂಟಿಂಗ್ ಅವರು ತಮ್ಮ ನಾಯಕತ್ವದಲ್ಲಿ 324 ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದಾರೆ. ಈ ಪೈಕಿ 220 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 77 ಪಂದ್ಯಗಳು ಸೋತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com