ಗಂಭೀರ್-ಆಫ್ರಿದಿ ಎಲ್ಲೆ ಮೀರಿ ವರ್ತಿಸಬಾರದು: ವಕಾರ್ ಯೂನಿಸ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ ತಮ್ಮ ಘನತೆಗೆ ತಾವೇ ಧಕ್ಕೆ ತಂದುಕೊಳ್ಳುತ್ತಿದ್ದು...
ಗಂಭೀರ್-ಆಫ್ರಿದಿ
ಗಂಭೀರ್-ಆಫ್ರಿದಿ

ಲಾಹೋರ್: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ ತಮ್ಮ ಘನತೆಗೆ ತಾವೇ ಧಕ್ಕೆ ತಂದುಕೊಳ್ಳುತ್ತಿದ್ದು ಎಲ್ಲೆ ಮೀರಿ ವರ್ತಿಸಬಾರದು ಎಂದು ಪಾಕ್ ಮಾಜಿ ನಾಯಕ ಸಲಹೆ ನೀಡಿದ್ದಾರೆ. 

ಶಾಹೀದ್ ಆಫ್ರಿದಿ ಸ್ವಲ್ಪ ಎಲ್ಲೆ ಮೀರಿ ವರ್ತಿಸುತ್ತಿರುತ್ತಾರೆ. ಹೀಗಾಗಿ ಇಬ್ಬರೂ ಪರಸ್ಪರ ನಿಯಂತ್ರಿಸಿಕೊಂಡು ಬುದ್ದಿವಂತರಂತೆ ವರ್ತಿಸಬೇಕಿದೆ ಎಂದು ಆಫ್ರಿದಿ ಮತ್ತು ಗಂಭೀರ್ ಗೆ ವಕಾರ್ ಯೂನಿಸ್ ಸಲಹೆ ನೀಡಿದ್ದಾರೆ. 

ಆಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಯಾರೋ ಒಬ್ಬ ಆಟಗಾರ ತಾನು ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ನ ಮಿಶ್ರಣವೆಂಬಂತೆ ವರ್ತಿಸುತ್ತಾರೆ. ತಾನು ಶ್ರೇಷ್ಠ ಎಂದು ಬೀಗುವ ಆತನ ಹೆಸರಿಲ್ಲಿ ಯಾವುದೇ ಗಮನಾರ್ಹ ದಾಖಲೆಯೇನು ಇಲ್ಲ ಎಂದು ಬರೆದು ಗಂಭೀರ್ ರನ್ನು ಕೆಣಕಿದ್ದರು. 

ಇದಕ್ಕೆ ತಿರುಗೇಟು ನೀಡಿದ್ದ ಗಂಭೀರ್ ಶಾಹೀದ್ ಗೆ ತಲೆ ಕೆಟ್ಟಿದೆ. ಬೇಕಿದ್ದರೆ ಅವರನ್ನು ನಾನೇ ಮನೋವೈದ್ಯರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ನಂತರ ಇಬ್ಬರ ನಡುವೆ ಟ್ವೀಟ್ ವಾರ್ ಶುರುವಾಗಿತ್ತು. 

ಇದಕ್ಕೆ ವಾಕರ್ ಯೂನಿಸ್ ಅವರು ಬಹಳ ಕಾಲದಿಂದಲೂ ಆಫ್ರಿದಿ ಮತ್ತು ಗಂಭೀರ್ ನಡುವಿನ ವೈಮನಸ್ಸು ಮುಂದುವರೆದುಕೊಂಡು ಬಂದಿದೆ. ಇಬ್ಬರೂ ಒಳ್ಳೆಯವರೇ, ಬುದ್ದಿವಂತರು, ತಾಳ್ಮೆಯುಳ್ಳವರು ಎಂದು ನಾನು ಭಾವಿಸುತ್ತೇನೆ. ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಕ್ಕೆ ತರಬಾರದು ಎಂದು ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com