ಆತ್ಮಹತ್ಯೆಗೆ ಆಲೋಚಿಸಿದ್ದೆ, ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ: ಜೀವನದ ಕಹಿ ಸತ್ಯ ಬಿಚ್ಚಿಟ್ಟ ರಾಬಿನ್‌ ಉತ್ತಪ್ಪ

ಟೀಂ ಇಂಡಿಯಾ ಅನುಭವಿ ಆಟಗಾರ, ಕನ್ನಡಿಗ ರಾಬಿನ್‌ ಉತ್ತಪ್ಪ ಅವರು ಕ್ರಿಕೆಟ್ ಮತ್ತು ತಮ್ಮ ಜೀವನದ ಕೆಟ್ಟ ಸಮವನ್ನು ನೆನಪಿಸಿಕೊಂಡಿದ್ದು, 2009ರಿಂದ 2011ರವರೆಗಿನ ಅವಧಿ ತಮ್ಮ ಪಾಲಿಗೆ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

Published: 04th June 2020 04:47 PM  |   Last Updated: 04th June 2020 04:47 PM   |  A+A-


Robin Uthappa

ರಾಬಿನ್ ಉತ್ತಪ್ಪ

Posted By : Lingaraj Badiger
Source : PTI

ನವದೆಹಲಿ: ಟೀಂ ಇಂಡಿಯಾ ಅನುಭವಿ ಆಟಗಾರ, ಕನ್ನಡಿಗ ರಾಬಿನ್‌ ಉತ್ತಪ್ಪ ಅವರು ಕ್ರಿಕೆಟ್ ಮತ್ತು ತಮ್ಮ ಜೀವನದ ಕೆಟ್ಟ ಸಮವನ್ನು ನೆನಪಿಸಿಕೊಂಡಿದ್ದು, 2009ರಿಂದ 2011ರವರೆಗಿನ ಅವಧಿ ತಮ್ಮ ಪಾಲಿಗೆ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ರಾಯಲ್ ರಾಜಸ್ಥಾನ್ ಫೌಂಡೇಶನ್‍ನ ‘ಮೈಂಡ್, ಬಾಡಿ ಅಂಡ್ ಸೋಲ್’ ಎಂಬ ಲೈವ್ ಸಂವಾದದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, 2009ರಿಂದ 2011ರ ಅವಧಿಯಲ್ಲಿ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಮತ್ತು ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೆ ಎಂಬ ಆಘಾತಕಾರಿ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

2006ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದಾಗ ನನ್ನ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಅಂದಿನಿಂದ ಹಲವು ಬೆಳವಣಿಗೆಗಳು ಮತ್ತು ಪಾಠಗಳನ್ನು ಕಂಡಿದ್ದೇನೆ ಕಲಿತಿದ್ದೇನೆ. ಈಗ ನನ್ನ ಬಗ್ಗೆ ಬಹಳ ಸ್ಪಷ್ಟತೆ ಇದೆ. ಏನು ಮಾಡಬೇಕು ಏನು ಮಾಡಬಾರದು ಎಂಬುದರ ಅರಿವಿದೆ. ಎಲ್ಲಾದರೂ ನಾನು ಕಾಲು ಜಾರುತ್ತಿದ್ದೇನೆ ಎಂದೆನಿಸಿದರೆ ಅಲ್ಲಿಯೇ ಸರಿ ಪಡಿಸಿಕೊಳ್ಳುವಷ್ಟು ಅರಿವು ನನ್ನಲ್ಲಿದೆ," ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

2009ರಿಂದ 2011ರ ಅವಧಿ ನಾನು ಪ್ರತಿದಿನ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದ ಕಾಲಘಟ್ಟ. ಅಂದು ಅನುಭವಿಸಿದ ನೋವು ಇಂದಿಗೂ ನನಗೆ ನೆನಪಿದೆ. ಆಗ ಕ್ರಿಕೆಟ್ ಬಗ್ಗೆ ಸ್ವಲ್ಪ ಯೋಚಿಸುತ್ತಿದ್ದೆ, ಮುಂದೆ ಏನಾಗುತ್ತೆ? ನನ್ನ ಜೀವನದಲ್ಲಿ ಏನಾಗುತ್ತಿದೆ ಮತ್ತು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇನೆ” ಎಂಬ ನೂರೆಂಟು ಪ್ರಶ್ನೆಗಳು ಕಾಡಿದ ಕಾಲವದು ಎಂದು ಉತ್ತಪ್ಪ ನೆನೆದಿದ್ದಾರೆ.

ಕ್ರಿಕೆಟ್‌ನ ವಿರಾಮದ ದಿನಗಳಲ್ಲಿ ಕಾಲ ಕಳೆಯುವುದು ಬಹಳ ಕಷ್ಟವಾಗಿತ್ತು. ಒಂದು ದಿನ ಒಂದು ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದೆ. ಆದರೆ ಹೇಗೋ ನನ್ನನ್ನು ನಾನೇ ತಡೆದು ನಿಲ್ಲಿಸಿದ್ದೆ ಎಂದಿದ್ದಾರೆ.

2007ರ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ರಾಬಿನ್ ಉತ್ತಪ್ಪ ಅವರು, ಟೀಮ್‌ ಇಂಡಿಯಾ ಪರ ಈವರೆಗೆ 46 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದು, 13 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲೂ ಬ್ಯಾಟ್‌ ಬೀಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp