ಐಸಿಸಿ ಮುನ್ನಡೆಸಲು ಸೌರವ್ ಗಂಗೂಲಿ ಯೋಗ್ಯ: ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಯನ್ನು ಮುನ್ನಡೆಸಲು ಯೋಗ್ಯರಾಗಿದ್ದು, ಆ ಹುದ್ದೆಯನ್ನು ಅಲಂಕರಿಸಲು ಆಯಾ ಕ್ರಿಕೆಟ್ ಮಂಡಳಿಗಳು ಬೆಂಬಲಿಸದಿರಲು ಯಾವುದೇ ಕಾರಣವಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಭಾನುವಾರ ಹೇಳಿದ್ದಾರೆ.
ಡ್ಯಾನಿಶ್ ಕನೇರಿಯಾ-ಗಂಗೂಲಿ
ಡ್ಯಾನಿಶ್ ಕನೇರಿಯಾ-ಗಂಗೂಲಿ

ನವದೆಹಲಿ: ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಯನ್ನು ಮುನ್ನಡೆಸಲು ಯೋಗ್ಯರಾಗಿದ್ದು, ಆ ಹುದ್ದೆಯನ್ನು ಅಲಂಕರಿಸಲು ಆಯಾ ಕ್ರಿಕೆಟ್ ಮಂಡಳಿಗಳು ಬೆಂಬಲಿಸದಿರಲು ಯಾವುದೇ ಕಾರಣವಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಭಾನುವಾರ ಹೇಳಿದ್ದಾರೆ.

ಸುದ್ಧಿ ಸಂಸ್ಥೆಯೊಂದಿಗೆ ಮಾತನಾಡಿರುವ ಮಾಜಿ ಸ್ಪಿನ್ನರ್, ಗಂಗೂಲಿ ಅವರು ಐಸಿಸಿಯನ್ನು ಮುನ್ನಡೆಸುವ ಎಲ್ಲ ಗುಣಗಳನ್ನು ಹೊಂದಿದ್ದಾರೆ. ಏಕೆಂದರೆ ಅವರು ಹೆಸರಾಂತ ಕ್ರಿಕೆಟಿಗರಾಗಿದ್ದು, ಒಬ್ಬ ಆಟಗಾರನು ತನ್ನ ಜೀವನದಲ್ಲಿ ಏನು ಮಾಡುತ್ತಾನೆಂದು ಎಂದು ಚೆನ್ನಾಗಿ ಅರಿತಿದ್ದಾರೆ ಎಂದಿದ್ದಾರೆ.

ಸೌರವ್ ಗಂಗೂಲಿ ಐಸಿಸಿಯನ್ನು ಮುನ್ನಡೆಸಿದರೆ ಅದು ನಿಜವಾಗಿಯೂ ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದು ಕ್ರಿಕೆಟ್ ಗೆ ಸಹಾಯ ಮಾಡುತ್ತದೆ ಮತ್ತು ಹೆಸರಾಂತ ಕ್ರಿಕೆಟಿಗನಾಗಿ ಆಟಗಾರರು ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸುತ್ತಾರೆ. ಅವರು ವೃತ್ತಿಪರ ಕ್ರಿಕೆಟ್ ಆಡಿರುವ ಜತೆಗೆ ಭಾರತದ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ಅವರು ಬಂಗಾಳದ ಕ್ರಿಕೆಟ್ ಸಂಸ್ಥೆಯಲ್ಲಿ ಆಡಳಿತಾತ್ಮಕ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಕನೇರಿಯಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com