ತಾಕತ್ತು ಇದ್ದರೆ ಆಕ್ರಮಣಕಾರಿ ವೇಗಿ ಎದುರು ಸ್ವಾಭಾವಿಕ ಆಟ ಆಡಲಿ: ರೋಹಿತ್'ಗೆ ಮೈಕಲ್ ಹೋಲ್ಡಿಂಗ್ ಸವಾಲು!

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಅವರು ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆ ಮೂಲೆಮೂಲೆಗೂ ಚೆಂಡನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನವದೆಹಲಿ: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಅವರು ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆ ಮೂಲೆಮೂಲೆಗೂ ಚೆಂಡನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಂತಹ ರೋಹಿತ್ ಶರ್ಮಾಗೆ ಮೈಕಲ್ ಹೋಲ್ಡಿಂಗ್ ಸವಾಲು ಹಾಕಿದ್ದಾರೆ. 

ವೆಸ್ಟ್ ಇಂಡೀಸ್ ಮಾಜಿ ಬೌಲರ್ ಮೈಕಲ್ ಹೋಲ್ಡಿಂಗ್ ಅವರು ಅತ್ಯುತ್ತಮ ಗುಣಮಟ್ಟದ ವೇಗದ ಬೌಲಿಂಗ್ ಎದುರು ಸ್ವಾಭಾವಿಕ ಹೊಡೆತಗಳನ್ನು ಸಿಡಿಸಲು ಸಾಧ್ಯವಾಗುವುದಿಲ್ಲ. ಆಕ್ರಮಣಕಾರಿ ವೇಗದ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಯಾವ ರೀತಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ. 

ರೋಹಿತ್ ಶರ್ಮಾ ಮತ್ತು ಎಬಿ ಡಿವಿಲಿಯರ್ಸ್ ಅತ್ಯುತ್ತಮ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದಾರೆ. ಮೈದಾನದ ಯಾವ ಮೂಲೆಗಾದರೂ ಚೆಂಡನ್ನು ಹೊಡೆಯುವ ತಾಕತ್ತು ಹೊಂದಿದ್ದಾರೆ. ಆದರೆ ನಮ್ಮ ಕಾಲದ ವೇಗಿಗಳ ಎದುರು ಈ ಬ್ಯಾಟ್ಸ್ ಮನ್ ಗಳು ಇಷ್ಟೇ ಉತ್ತಮವಾಗಿ ಬ್ಯಾಟ್ ಬೀಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಮೈಕಲ್ ಹೋಲ್ಡಿಂಗ್ ಅವರು ನಿಖಿಲ್ ನಾಝ್ ರೊಂದಿಗಿನ ಇನ್ ಸ್ಟಾಗ್ರಾಮ್ ಲೈವ್ ಚಾಟ್ ನಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com