ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೂ ಆದ್ಯತೆ ಕೊಡುವುದು ಭಾರತಕ್ಕೆ ಹೆಮ್ಮೆಯ ವಿಷಯ: ರಾಹುಲ್ ದ್ರಾವಿಡ್

ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೂ ಆದ್ಯತೆ ಕೊಡುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಸಾಂಪ್ರಾದಾಯಿಕ ಸ್ವರೂಪದ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನೂ ಅದ್ಬುತವಾದ ಪ್ರದರ್ಶನ ತೋರಬೇಕಾಗಿದೆ ಎಂದು ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ನವದೆಹಲಿ: ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೂ ಆದ್ಯತೆ ಕೊಡುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಸಾಂಪ್ರಾದಾಯಿಕ ಸ್ವರೂಪದ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನೂ ಅದ್ಬುತವಾದ ಪ್ರದರ್ಶನ ತೋರಬೇಕಾಗಿದೆ ಎಂದು ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಇಎಸ್ ಪಿಎನ್ ಕ್ರಿಕ್ ಇನ್ಫೋ ಇತ್ತೀಚಿನ ಎಪಿಸೋಡ್ ನಲ್ಲಿ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮೆಂಜ್ರೇಕರ್ ಜೊತೆಗೆ ಕ್ರಿಕೆಟ್ ನೊಂದಿಗೆ ಬದುಕು, ರಕ್ಷಣಾತ್ಮಕ ಬ್ಯಾಟಿಂಗ್ ಭವಿಷ್ಯ ಮತ್ತು ಚೇತೇಶ್ವರ ಪೂಜಾರ್ ಅವರ ಸಾಮರ್ಥ್ಯ ಕುರಿತಂತೆ ಮನಬಿಚ್ಚಿ ರಾಹುಲ್  ದ್ರಾವಿಡ್ ಮಾತನಾಡಿದ್ದಾರೆ. 

ಪ್ರಸ್ತುತ ಟಿ-20 ಮಾದರಿಯಲ್ಲಿ ಆಟಗಾರರ ಮೇಲಿನ ಹೆಚ್ಚಿನ ಒತ್ತಡ ಕುರಿತಂತೆ ಪ್ರತಿಕ್ರಿಯಿಸಿದ ರಾಹುಲ್, ಟಿ-20 ಮಾದರಿಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಒಂದು ಎಸೆತ ಇರುವಂತೆ ಸಿಕ್ಸರ್ ಹೊಡೆಯಬೇಕಾದರೆ ಕೌಶಲ್ಯಭರಿತ ಅಭ್ಯಾಸದ ಅವಶ್ಯಕತೆ ಇರಬೇಕಾಗುತ್ತದೆ ಎಂದರು. 

ಎಲ್ಲಾ ಮಾದರಿಯ ಪಂದ್ಯಗಳಲ್ಲಿ ವಿಭಿನ್ನವಾದ ಕೌಶಲ್ಯದ ಅಗತ್ಯವಿರುತ್ತದೆ. ಟಿ-20  ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ನಡುವಿನ ವ್ಯತ್ಯಾಸವೆಂದರೆ ಟಿ- 20 ಮಾದರಿಯಲ್ಲಿ ಇನ್ನೂ ಹೆಚ್ಚಿನದನ್ನು ಪಡೆಯಬಹುದು. ಆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ದೌರ್ಬಲ್ಯಗಳನ್ನು ಹೊಂದಿದ್ದರೆ ಬದುಕಲು ಸಾಧ್ಯವಿಲ್ಲ, ಟಿ-20 ಮಾದರಿಯಲ್ಲಿ ನಿರ್ದಿಷ್ಟವಾದ ಪಾತ್ರವಿರುತ್ತದೆ. ಆದರೆ, ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದರೆ ಯಶಸ್ವಿಯಾಗಬಹುದು ಎಂದು ಹೇಳಿದರು. 

ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಆಡಬಯಸುವ ಆಟಗಾರರ ಸಂಖ್ಯೆ ಪ್ರತಿವರ್ಷ ಕುಸಿಯುತ್ತಿದೆ ಎಂಬುದನ್ನು ರಾಹುಲ್ ದ್ರಾವಿಡ್ ನಂಬುವುದಿಲ್ಲ, ಟೆಸ್ಟ್ ಬ್ಯಾಟ್ಸ್ ಮನ್ ಗಳ ರಕ್ಷಣಾತ್ಮಕ ಆಟದ ಮೇಲೆ ಅವಲಂಬಿತರಾಗಿಲ್ಲ, ಮುಂದೆ ಬಂದು ಹೆಚ್ಚಿನ ರನ್ ಕದಿಯುವುದನ್ನು ನೋಡಲು ನಾವು ಬಯಸುತ್ತೇವೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೌರವಿಸುವುದು ಟೀಂ ಇಂಡಿಯಾಕ್ಕೆ ಅತ್ಯುನ್ನತ ವಿಷಯವಾಗಿದೆ ಎಂದರು. 

ವಿರಾಟ್ ಕೊಹ್ಲಿ ಯಾವಾಗಲೂ ಅದರ ಬಗ್ಗೆ ಮಾತನಾಡುತ್ತಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಯಶಸ್ವಿಯಾದ ನಂತರ ಕ್ರಿಕೆಟಿನಾಗಿ ಅವರಿಗಿರುವ ನಿಜವಾದ ಗೌರವ ಅರ್ಥವಾದ್ದಂತಿದೆ. ನಮ್ಮ ಯುವ ಕ್ರಿಕೆಟಿಗರಿಗೆ ಅವರೊಬ್ಬ ದೊಡ್ಡ ರೋಲ್ ಮಾಡೆಲ್ ಆಗಿದ್ದಾರೆ. ವಿಕೆಟ್ ಗಳು ಸವಾಲಿನಿಂದ ಕೂಡಿರುವುದನ್ನು ನೋಡಲು ಬಯಸುತ್ತೇನೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಉತ್ತಮ ಸಮತೋಲನವಿದ್ದಾಗ ಜನರು ಕುತೂಹಲಭರಿತವಾಗಿ ಪಂದ್ಯ  ವೀಕ್ಷಿಸುತ್ತಾರೆ ಎಂದು ಹೇಳಿದರು. 

ಅನೇಕ ಯುವ ಆಟಗಾರರೊಂದಿಗೆ ಕೆಲಸ ಮಾಡಿದ್ದೇನೆ.  ಅವರಿಗೆ ಕೊಹ್ಲಿ, ಅಥವಾ ಕೇನ್ ವಿಲಿಯಮ್ಸ್ , ಸ್ಟೀವ್ ಸ್ಮೀತ್ ಹಿರೋ ಆಗಿ ಕಾಣುತ್ತಾರೆ. ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಆಡಲು ಬಯಸುತ್ತಾರೆ. ಆದರೆ, ಕಡಿಮೆ ಪ್ರತಿಭಾವಂತ ಅಥವಾ ಕಡಿಮೆ ಕೌಶಲ್ಯದ ಆಟಗಾರರು ಕೊಹ್ಲಿ ಅಥವಾ ಪೂಜಾರ ಅಥವಾ (ಅಜಿಂಕ್ಯ) ರಹಾನೆ ಅವರೊಂದಿಗೆ ತಂಡವನ್ನು ಪ್ರವೇಶಿಸುವುದು ಕಷ್ಟ ಎಂಬುದನ್ನು  ಅರಿತುಕೊಂಡಿದ್ದಾರೆ ಎಂದು ರಾಹುಲ್ ದ್ರಾವಿಡ್ ತಿಳಿಸಿದರು. 

ಪೂಜಾರ ಅವರಂತಹ ಬ್ಯಾಟ್ಸ್ ಮನ್ ಗಳಿಗೆ ಯಾವಾಗಲೂ ಸ್ಥಾನ ನೀಡಬೇಕಾಗುತ್ತದೆ. ಅವರ ತಾಂತ್ರಿಕ ಕೌಶಲ್ಯ ಪಂದ್ಯ ಗೆಲ್ಲಲು ಕಾರಣವಾಗುತ್ತದೆ. ಪ್ರಸ್ತುತ ಅನೇಕ ಮಂದಿ ಆಟಗಾರರು ಉತ್ತಮ ರಕ್ಷಣಾತ್ಮಕ ತಂತ್ರಗಾರಿಕೆ ಹೊಂದಿದ್ದಾರೆ.ಇಂತಹ ತಂತ್ರದಿಂದ ಸಂಕಷ್ಟದ ಸಂದರ್ಭದಲ್ಲಿ ತಂಡವನ್ನು ರಕ್ಷಿಸಲು ನೆರವಾಗಲಿದೆ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com