ಗಾಯಾಗೊಂಡ ಪಕ್ಷಿಯನ್ನು ರಕ್ಷಿಸಿದ ಝಿವಾ-ಧೋನಿ, ಅಪರೂಪದ ಚಿತ್ರ ಹಂಚಿಕೊಂಡ ಸಿಎಸ್ ಕೆ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಅವರ ಪುತ್ರಿ ಝಿವಾ ಅವರು ಗಾಯಗೊಂಡ ಪಕ್ಷಿಯನ್ನು ರಕ್ಷಿಸಿ, ಅದಕ್ಕೆ ನೀರು ಕುಡಿಸಿದ ಅಪರೂಪದ ಚಿತ್ರವನ್ನು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ಟ್ವೀಟ್ ಮಾಡಿದೆ.
ಧೋನಿ
ಧೋನಿ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಅವರ ಪುತ್ರಿ ಝಿವಾ ಅವರು ಗಾಯಗೊಂಡ ಪಕ್ಷಿಯನ್ನು ರಕ್ಷಿಸಿ, ಅದಕ್ಕೆ ನೀರು ಕುಡಿಸಿದ ಅಪರೂಪದ ಚಿತ್ರವನ್ನು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ಟ್ವೀಟ್ ಮಾಡಿದೆ.

ಧೋನಿ ಅವರು ತಮ್ಮ ಫಾರ್ಮ್‌ ಹೌಸ್‌ನಲ್ಲಿ ಪತ್ನಿ ಸಾಕ್ಷಿ ಸಿಂಗ್‌ ಮತ್ತು ಪುತ್ರಿ ಝಿವಾ ಜೊತೆಗೆ ಕಾಲ ಕಳೆಯುತ್ತಿದ್ದ ವೇಳೆ ಗಾಯಗೊಂಡು ಬಿದ್ದಿದ್ದ ಗುಬ್ಬಚ್ಚಿ ಪ್ರಬೇಧದ ಒಂದು ಪುಟ್ಟ ಪಕ್ಷಿಯನ್ನು ರಕ್ಷಿಸಿ ಅದಕ್ಕೆ ನೀರುಣಿಸಿ ಆರೈಕೆ ಮಾಡಿದ್ದಾರೆ. ಇದರ ಫೋಟೊಗಳನ್ನು ಮತ್ತು ಪಕ್ಷಿ ರಕ್ಷಣಾ ಕಾರ್ಯಾಚರಣೆಯ ಕಥೆಯನ್ನು ಸಾಕ್ಷಿ ಸಿಂಗ್‌ ಅವರು ತಮ್ಮ ಪುತ್ರಿಯ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಕಾಪರ್‌ಸ್ಮಿತ್‌ ಬಾರ್ಬೆಟ್ ಜಾತಿಹ ಹಕ್ಕಿಯನ್ನು ರಕ್ಷಿಸಿ ಅದಕ್ಕೆ ನೀರುಣಿಸಿ ಚೇತರಿಸುವಂತೆ ಮಾಡಿದ್ದ ಝಿವಾ ಮತ್ತು ಧೋನಿ, ನಂತರ ಅದನ್ನು ಬುಟ್ಟಿಯೊಂದರಲ್ಲಿ ಇರಿಸಿದ್ದರು. ನಿಧಾನವಾಗಿ ಚೇತರಿಸಿ ಪ್ರಜ್ಞೆ ಕಂಡುಕೊಂಡ ಪಕ್ಷಿಯು ಹಾರಿಹೋಗಿದೆ ಎಂದು ಸಾಕ್ಷಿ ತಮ್ಮ ಮಗಳ ಖಾತೆಯಲ್ಲಿ ಬರೆದಿದ್ದಾರೆ.

"ಇಂದು ಸಂಜೆ ನಮ್ಮ ಮನೆಯ ಮುಂದಿನ ಹುಲ್ಲು ಹಾಸಿನಲ್ಲಿ ಪಕ್ಷಿಯೊಂದು ಪ್ರಜ್ಞೆತಪ್ಪಿ ಬಿದ್ದಿತ್ತು. ನಾನು ಪಪ್ಪಾ ಮತ್ತು ಮಮ್ಮಾ ಎಂದು ಜೋರಾಗಿ ಕರೆದೆ. ಬಳಿಕ ಪಪ್ಪಾ ಪಕ್ಷಿಯನ್ನು ಎತ್ತಿಕೊಂಡು ಅದಕ್ಕೆ ನೀರು ಕುಡಿಸಿದರು. ಕೆಲ ಸಮಯದ ಬಳಿಕ ಅದು ಕಣ್ಣು ಬಿಟ್ಟಿತು. ಅದನ್ನು ಕಂಡು ಎಲ್ಲರಿಗೂ ಸಂತೋಷವಾಯಿತು. ಪಕ್ಷಿಯನ್ನು ಎಲೆಗಳಿದ್ದ ಬುಟ್ಟಿಯಲ್ಲಿ ಇರಿಸಿದ್ದೆವು. ಅದು ಸಿರ್ಮ್ಸನ್‌ ಬ್ರೆಸ್ಟೆಟ್‌ ಬಾರ್ಬೆಟ್‌ ಪಕ್ಷಿಯೆಂದು ಮಮ್ಮಾ ಹೇಳಿದರು. ಕಾಪರ್‌ಸ್ಮಿತ್‌ ಎಂದು ಕೂಡ ಕರೆಯಲಾಗುತ್ತದೆಯಂತೆ," ಎಂದು ಝಿವಾ ಹೇಳಿರುವ ರೀತಿಯಲ್ಲಿ ಸಾಕ್ಷಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com