ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿ ಜೊತೆಯಾಟ ತಡೆಯಲು ಅಂಪೈರ್‌ ಮೊರೆ ಹೋಗಿದ್ದ ಆ್ಯರೋನ್ ಫಿಂಚ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಯಾಟಕ್ಕೆ ಬ್ರೇಕ್ ಹಾಕಲು ಆಸಿಸ್ ನಾಯಕ ಆ್ಯರೋನ್ ಫಿಂಚ್ ಅಂಪೈರ್ ಮೊರೆ ಹೋಗಿದ್ದ ಸ್ವಾರಸ್ಯಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿ ಜೊತೆಯಾಟ ತಡೆಯಲು ಅಂಪೈರ್‌ ಮೊರೆ ಹೋಗಿದ್ದ ಆ್ಯರೋನ್ ಫಿಂಚ್

ಲಂಡನ್: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಯಾಟಕ್ಕೆ ಬ್ರೇಕ್ ಹಾಕಲು ಆಸಿಸ್ ನಾಯಕ ಆ್ಯರೋನ್ ಫಿಂಚ್ ಅಂಪೈರ್ ಮೊರೆ ಹೋಗಿದ್ದ ಸ್ವಾರಸ್ಯಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿ ಭದ್ರವಾಗಿ ನೆಲೆ ನಿಂತಿದ್ದರೆ ಅವರ ಜೊತೆಯಾಟ ಮುರಿಯಲು ವಿಶ್ವದ ಯಾವುದೇ ಬಲಿಷ್ಟ ಬೌಲರ್ ಗಳಿಗೂ ಅಸಾಧ್ಯ. ಇದೇ ರೀತಿ ಪಂದ್ಯವೊಂದರಲ್ಲಿ  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಇಂಥದ್ದೇ ಅದ್ಭುತ ಜೊತೆಯಾಟವೊಂದನ್ನು ಮುರಿಯಲು ನಾನಾ ಪ್ರಯತ್ನ ಮಾಡಿ ಸೋತಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್‌ ಫಿಂಚ್‌, ಅಂತಿಮವಾಗಿ ಟೀಮ್‌ ಇಂಡಿಯಾ ಆಟಗಾರರ ಜೊತೆಗಾರಿಕೆ ಕಡಿವಾಣ ಹಾಕಲು ಅಂಪೈರ್‌ ಬಳಿ ಸಲಹೆ ಕೇಳಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಇಂಗ್ಲೆಂಡ್‌ ಮೂಲದ ಅಂಪೈರ್‌ ಮೈಕಲ್‌ ಗಾಫ್‌ ಅವರನ್ನು ಕೊಹ್ಲಿ-ರೋಹಿತ್‌ ನಡುವಣ ಜೊತೆಯಾಟ ಮುರಿಯಲು ಸಲಹೆ ಸೂಚಿಸುವಂತೆ ಆರೋನ್ ಫಿಂಚ್‌ ಕೇಳಿಕೊಂಡಿದ್ದರಂತೆ, ಇದಕ್ಕೆ 40 ವರ್ಷದ ಅಂಪೈರ್‌ ನಗುತ್ತಲೇ “ಇದಕ್ಕೆ ನೀವೇ ಉತ್ತರ ಕಂಡುಕೊಳ್ಳಬೇಕು,” ಎಂದಿದ್ದರಂತೆ.

ವಿಸ್ಡನ್‌ ಕ್ರಿಕೆಟ್‌ಗೆ ನೀಡಿರುವ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಂಪೈರ್‌ ಮೈಕಲ್ ಗಾಫ್, 'ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವದು. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ದೊಡ್ಡ ಜೊತೆಯಾಟವನ್ನು ಆಡುತ್ತಿದ್ದರು. ಸ್ಕ್ವೇರ್ ಲೆಗ್‌ನಲ್ಲಿ ಅಂಪೈರಿಂಗ್‌ ಮಾಡುವಾಗ ಅಲ್ಲಿ ಆಸ್ಟ್ರೇಲಿಯಾ ನಾಯಕ ಆರೊನ್‌ ಫಿಂಚ್‌ ಫೀಲ್ಡ್‌ ಮಾಡುತ್ತಿದ್ದರು. ಪಂದ್ಯದ ನಡುವೆಯೇ ಇವರಿಬ್ಬರ ಆಟ ನಂಬಲು ಸಾಧ್ಯವಾಗದೇ ಇರುವಂಥದ್ದು ಎಂದರು. ಬಳಿಕ ಇವರಿಗೆ ನಾನು ಹೇಗೆ ಬೌಲಿಂಗ್‌ ಮಾಡಬೇಕು! ಎಂದು ಹೇಳಿದರು. ಅವರತ್ತ ನೋಡಿ ‘ನನ್ನಲ್ಲಿ ಸಾಕಷ್ಟು ಇದೆ, ಆದರೆ ಇದಕ್ಕೆ ನೀವೇ ಉತ್ತರ ಕಂಡುಕೊಳ್ಳಬೇಕು,” ಎಂದು ಹೇಳಿದ್ದಾಗಿ ಗಾಫ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com