ಐಪಿಎಲ್ ಗೆ ಮುಹೂರ್ತ ಫಿಕ್ಸ್, 44 ದಿನದ ಐಪಿಎಲ್ ಕೂಟ, 5 ಕ್ರೀಡಾಂಗಣದಲ್ಲಿ ಆಯೋಜನೆಗೆ ಭರ್ಜರಿ ಪ್ಲ್ಯಾನ್!

ಜಗತ್ತಿನ ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನ್ನು ಇದೇ ವರ್ಷದಲ್ಲಿ ನಡೆಸಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆ. 
ಧೋನಿ-ಕೊಹ್ಲಿ-ರೋಹಿತ್
ಧೋನಿ-ಕೊಹ್ಲಿ-ರೋಹಿತ್

ಜಗತ್ತಿನ ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನ್ನು ಇದೇ ವರ್ಷದಲ್ಲಿ ನಡೆಸಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆ. 

ಹೌದು ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚಿಂತಿಸಿದ್ದು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಒಟ್ಟಾರೆ 60 ಪಂದ್ಯಗಳನ್ನು 44 ದಿನಗಳಲ್ಲಿ ಮುಗಿಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇನ್ನು ಈ ಬಾರಿ ಹೋಮ್ ಗ್ರೌಂಡ್ ಮ್ಯಾಚ್ ಗಳಿರುವುದಿಲ್ಲ. ಬದಲಾಗಿ ಒಟ್ಟು 5 ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಂಡು ಇಡೀ ಟೂರ್ನಿಯನ್ನು ನಡೆಸಲಿದೆ. 

ಕಳೆದ ಕೆಲವು ದಿನಗಳಿಂದ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳು, ಮಾಧ್ಯಮ ಹಕ್ಕುಗಳ ಪಾಲುದಾರ(ಸ್ಟಾರ್ ಇಂಡಿಯಾ) ಮತ್ತು ಐಪಿಎಲ್‌ನ ಇತರ ಪಾಲುದಾರರೊಂದಿಗೆ ಸಮಾಲೋಚಿಸಿದೆ ಮತ್ತು ಐಪಿಎಲ್ ಅನ್ನು ಸೆಪ್ಟೆಂಬರ್ 26 ರಿಂದ ನವೆಂಬರ್ 8 ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ಇನ್ಸೈಡ್‌ಸ್ಪೋರ್ಟ್ ವರದಿ ಮಾಡಿದೆ. 

ಈ ತಾತ್ಕಾಲಿಕ ದಿನಾಂಕಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಅನ್ನು ಮುಂದೂಡುವುದರ ಮೇಲೆ ಅವಲಂಭಿತವಾಗಿದೆ. 

ಜೂನ್ 10ರಂದು ನಡೆದ ಐಸಿಸಿ ಬೋರ್ಡ್ ಸಭೆಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ 20 ವಿಶ್ವಕಪ್ ಕುರಿತ ನಿರ್ಧಾರವನ್ನು ಜುಲೈ ತಿಂಗಳವರೆಗೆ ವಿಳಂಬಗೊಳಿಸಿತ್ತು.

ಬಿಸಿಸಿಐನ ಮೂಲಗಳ ಪ್ರಕಾರ, ಮಂಡಳಿಯು ಹೆಚ್ಚು ಹೊತ್ತು ಕಾಯಲು ಸಿದ್ಧವಾಗಿಲ್ಲ ಮತ್ತು ಐಸಿಸಿ ಸಭೆ ಮುಗಿದ ಕೂಡಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸದಸ್ಯ ಮಂಡಳಿಗಳಿಗೆ ಸೂಚನೆ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com