3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದಿದ್ದರೆ ಧೋನಿ ಹೆಚ್ಚಿನ ದಾಖಲೆ ಮುರಿಯಬಹುದಿತ್ತು: ಗಂಭೀರ್

ಏಕದಿನ ಪಂದ್ಯದ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲಾ ದಾಖಲೆಗಳನ್ನು ತಮ್ಮ ಕಿಟ್ ನಲ್ಲಿ ಹೊಂದಿರುವ ವಿಭಿನ್ನ ಆಟಗಾರ ಎಂದು ಮಾಜಿ ಟೀಂ ಇಂಡಿಯಾ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಗೌತಮ್ ಗಂಭೀರ್, ಎಂ.ಎಸ್. ಧೋನಿ
ಗೌತಮ್ ಗಂಭೀರ್, ಎಂ.ಎಸ್. ಧೋನಿ

ನವದೆಹಲಿ: ಏಕದಿನ ಪಂದ್ಯದ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲಾ ದಾಖಲೆಗಳನ್ನು ತಮ್ಮ ಕಿಟ್ ನಲ್ಲಿ ಹೊಂದಿರುವ ವಿಭಿನ್ನ ಆಟಗಾರ ಎಂದು ಮಾಜಿ ಟೀಂ ಇಂಡಿಯಾ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ಗುರಿ ಮುಟ್ಟುವಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಹೋಲಿಕೆ ಮಾಡುವುದು ಕಷ್ಟಸಾಧ್ಯ ಎಂದು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕ್ರಿಕೆಟ್ ಕುರಿತಂತೆ ಗಂಭೀರ್ ಮಾತನಾಡಿದರು.

ವಿಶ್ವ ಕ್ರಿಕೆಟ್ ಬೌಲಿಂಗ್ ನಲ್ಲಿ ಈಗಿನ ರೀತಿಯ ಬೌಲಿಂಗ್ ದಾಳಿ ಇದ್ದರೆ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಜಾರ್ಖಂಡ್ ಡ್ಯಾಷರ್ ಹೆಚ್ಚಿನ ದಾಖಲೆಗಳನ್ನು ಮುರಿಯುತ್ತಿದ್ದರು. ಬ್ಯಾಟಿಂಗ್ ವಿಭಾಗದ  ನಂಬರ್ -3 ಕ್ರಮಾಂಕದಲ್ಲಿ ಎಂಎಸ್ ಧೋನಿಯನ್ನು  ತೆಗೆದುಕೊಳ್ಳುವುದಾಗಿ ಗಂಭೀರ್ ಹೇಳಿದರು. 

ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ನ ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಉತ್ತಮ ಗುಣಮಟ್ಟವಿದೆ. 2007 ಮತ್ತು 2011 ವಿಶ್ವಕಪ್ ವಿಜೇತ ಟೀಂ ಇಂಡಿಯಾ ನಾಯಕರಾಗಿದ್ದ ಎಂಎಸ್ ಧೋನಿ ಬಹುಷ: ಎಲ್ಲಾ ದಾಖಲೆಗಳನ್ನು ಮುರಿಯುತ್ತಿದ್ದರು ಎಂದು ಗಂಭೀರ್ ಅಭಿಪ್ರಾಯಪಟ್ಟರು.

ಕೆಳ ಕ್ರಮಾಂಕದ ಬ್ಯಾಟಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಧೋನಿ ಹೆಚ್ಚು ಪಂದ್ಯಗಳನ್ನು ಪೂರ್ಣಗೊಳಿಸಿರುವ ಆಟಗಾರ. ವಿಶ್ವದ ಶ್ರೇಷ್ಟ ಆಟಗಾರನಾಗಿದ್ದ ಧೋನಿ ನಂಬರ್-3 ಕ್ರಮಾಂಕದಲ್ಲಿ ಆಡುವುದು ಕೈ ತಪ್ಪಿದೆ.ಧೋನಿ ಟೀ ಇಂಡಿಯಾದ ನಾಯಕ ಮಾತ್ರ ಆಗಿರಲಿಲ್ಲ. ನಂಬರ್ 3 ಕ್ರಮಾಂಕದಲ್ಲಿನ ಶ್ರೇಷ್ಟ ಬ್ಯಾಟ್ಸ್ ಮನ್ ಆಗಿದ್ದರು. ಆ ಕ್ರಮಾಂಕದಲ್ಲಿ ಹೆಚ್ಚಿನ ರನ್ ಗಳಿಸಿದ್ದು, ಇನ್ನೂ ಅನೇಕ ದಾಖಲೆಗಳನ್ನು ಮುರಿಯುತ್ತಿದ್ದರು ಎಂದು ಗಂಭೀರ್ ಹೇಳಿದರು. 

ಆದಾಗ್ಯೂ, ನಂಬರ್-3 ಕ್ರಮಾಂಕದಲ್ಲಿ ಕೊಹ್ಲಿ ಸೂಕ್ತ ಆಯ್ಕೆ ಎಂದು ಟೀಂ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com