ಐಪಿಎಲ್ ಬಗ್ಗೆ ಗಂಗೂಲಿ ಹೇಳಿದ್ದು ಒಳ್ಳೆಯ ಸುದ್ದಿ: ಇರ್ಫಾನ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರಭ್ ಗಂಗೂಲಿ ಅವರ ನೀಡಿರುವ ಹೇಳಿಕೆ ವಿಶ್ವದಾದ್ಯಂತ ಎಲ್ಲ ಕ್ರಿಕೆಟಿಗರಿಗೆ ಒಳ್ಳೆಯ ಸುದ್ದಿ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. 
ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರಭ್ ಗಂಗೂಲಿ ಅವರ ನೀಡಿರುವ ಹೇಳಿಕೆ ವಿಶ್ವದಾದ್ಯಂತ ಎಲ್ಲ ಕ್ರಿಕೆಟಿಗರಿಗೆ ಒಳ್ಳೆಯ ಸುದ್ದಿ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.

“ನಿನ್ನೆ ಐಪಿಎಲ್ ಸಂಘಟಿಸಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಹೇಳಿಕೆಯನ್ನು ನಾನು ಓದಿದ್ದೇನೆ. ಎಲ್ಲರೂ ಅವರ ನಿರ್ಧಾರವನ್ನು ಸಹನೆಯಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಸಾಧ್ಯತೆಯ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರಭ್ ಗಂಗೂಲಿ ಅವರು ನೀಡಿರುವ ಹೇಳಿಕೆ ಭಾರತೀಯ ಕ್ರಿಕೆಟಿಗರಿಗೆ ಮಾತ್ರವಲ್ಲ, ಜಗತ್ತಿನ ಎಲ್ಲ ಕ್ರಿಕೆಟಿಗರಿಗೂ ಇದು ತುಂಬಾ ಒಳ್ಳೆಯ ಸುದ್ದಿ. ನಾನು ಸಹ ಅದನ್ನು ಎದುರು ನೋಡುತ್ತಿದ್ದೇನೆ. ಇದು ಎಲ್ಲ ಕ್ರಿಕೆಟಿಗರಿಗೆ ಸಾಕಷ್ಟು ವಿಶ್ವಾಸವನ್ನು ನೀಡಿದೆ "ಎಂದು ಹೇಳಿದ್ದಾರೆ.

ಐಪಿಎಲ್‌ನ 13 ನೇ ಆವೃತ್ತಿಯು ಈ ವರ್ಷ ಮಾರ್ಚ್ 29 ರಿಂದ ನಡೆಯಬೇಕಿತ್ತು. ಆದರೆ ಕೊರೋನಾದ ಕಾರಣ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಅನ್ನು ಅಕ್ಟೋಬರ್-ನವೆಂಬರ್‌ಗೆ ಮುಂದೂಡಿದಾಗ ಮಾತ್ರ ಈ ಅವಧಿಯಲ್ಲಿ ಐಪಿಎಲ್ ನಡೆಸಲು ಚಿಂತಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com