ಗಾಲ್ವಾನ್ ಭಾರತೀಯ ಹುತಾತ್ಮ ಯೋಧರ ಬಗ್ಗೆ ವಿವಾದಾತ್ಮಕ ಪೋಸ್ಟ್: ಸಿಎಸ್ಕೆ ಅಮಾನತು ವೈದ್ಯ ಬೇಷರತ್ ಕ್ಷಮೆಯಾಚನೆ

ಭಾರತ-ಚೀನಾ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಮಧು ತೊಟ್ಟಪ್ಪಿಲ್ಲಿಲ್ ಇದೀಗ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮಧು ತೊಟ್ಟಪ್ಪಿಲ್ಲಿಲ್
ಮಧು ತೊಟ್ಟಪ್ಪಿಲ್ಲಿಲ್

ನವದೆಹಲಿ: ಭಾರತ-ಚೀನಾ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಮಧು ತೊಟ್ಟಪ್ಪಿಲ್ಲಿಲ್ ಇದೀಗ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರು ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗಮನಕ್ಕೆ ತಾರದೆ ವೈದ್ಯ ಮಧು ತೊಟ್ಟಪ್ಪಿಲ್ಲಿಲ್ ಟ್ವೀಟ್ ಮಾಡಿದ್ದರು. ಅದು ಕೆಟ್ಟ ಅಭಿರುಚಿಯಿಂದ ಕೂಡಿತ್ತು ಎಂದು ಅವರನ್ನು ತಂಡದ ವೈದ್ಯ ಸ್ಥಾನದಿಂದ ವಜಾ ಮಾಡಿತ್ತು. 

ಮಧು ತೊಟ್ಟಪ್ಪಿಲ್ಲಿಲ್ ತಂಡ ಆರಂಭವಾದಾಗಿನಿಂದಲೂ ಕ್ರೀಡಾ ವೈದ್ಯಕೀಯ ವಿಭಾಗದಲ್ಲಿ ವಿಶೇಷ ತಜ್ಞರಾಗಿದ್ದರು. 

ಭಾರತ-ಚೀನಾ ಸೇನಾ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಸುದ್ದಿ ಹೊರಬರುತ್ತಿದ್ದಂತೆ ಕೇಂದ್ರ ಸರ್ಕಾರವನ್ನು ಅಣಕಿಸಿ ಟ್ವೀಟ್ ಮಾಡಿದ್ದರು. ನಂತರ ಅದನ್ನು ಡಿಲೀಟ್ ಮಾಡಿದ್ದರು.

ಮಧು ತೊಟ್ಟಲ್ಲಿಲ್ಲಿಲ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಟ್ವಿಟ್ಟರ್ ಪೇಜ್ ನಲ್ಲಿ ಖಚಿತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com