ಐಪಿಎಲ್‌ಗೆ ಚೀನಾ ಮೂಲದ 'ವಿವೋ' ಸಂಸ್ಧೆಯ ಪ್ರಾಯೋಜಕತ್ವ ಮುಂದುವರೆಯಲಿದೆ: ಬಿಸಿಸಿಐ

ಲಡಾಖ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವಿನ ಸಂಘರ್ಷದಲ್ಲಿ 20 ಭಾರತೀಯರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಾ ವಿರುದ್ಧದ ಕೂಗು ಜೋರಾಗಿದೆ. ಇದೇ ವೇಳೆ ಬಿಸಿಸಿಐ ಚೀನಾ ಮೂಲದ ಸಂಸ್ಥೆ ವಿವೋ ಪ್ರಾಯೋಜಕತ್ವ ಮುಂದುವರೆಯಲಿದೆ ಎಂದು ಹೇಳಿದೆ.
ಐಪಿಎಲ್
ಐಪಿಎಲ್

ನವದೆಹಲಿ: ಲಡಾಖ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವಿನ ಸಂಘರ್ಷದಲ್ಲಿ 20 ಭಾರತೀಯರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಾ ವಿರುದ್ಧದ ಕೂಗು ಜೋರಾಗಿದೆ. ಇದೇ ವೇಳೆ ಬಿಸಿಸಿಐ ಚೀನಾ ಮೂಲದ ಸಂಸ್ಥೆ ವಿವೋ ಪ್ರಾಯೋಜಕತ್ವ ಮುಂದುವರೆಯಲಿದೆ ಎಂದು ಹೇಳಿದೆ. 

ಭಾರತದೊಳಗೆ ಚೀನಾದ ಸರಕುಗಳ ವಿರುದ್ಧ ನಿಷೇಧ ಹೇರಬೇಕು ಎಂಬ ಕೂಗು ಜೋರಾಗಿದೆ. ಅಲ್ಲದೆ ಹಲವರು ಸ್ವಪ್ರೇರಿತವಾಗಿ ಚೀನಾದ ವಸ್ತುಗಳನ್ನು ನಾಶಮಾಡುತ್ತಿದ್ದಾರೆ. ಇನ್ನು ಚೀನಾದ ಕೆಲ ಮೊಬೈಲ್ ಅಪ್ಲಿಕೇಷನ್ ಗಳನ್ನು ಡಿಲೀಟ್ ಮಾಡುತ್ತಿದ್ದಾರೆ. 

ಇನ್ನು ನಿನ್ನೆಯಷ್ಟೇ ಕೇಂದ್ರ ರೈಲ್ವೆ ಸಚಿವಾಲಯ ಚೀನಾ ಮೂಲದ ಸಂಸ್ಥೆಯೊಂದಕ್ಕೆ ನೀಡಿದ್ದ ಗುತ್ತಿಗೆಯೊಂದನ್ನು ರದ್ದುಪಡಿಸಿತ್ತು. ಅಲ್ಲದೆ ಸರ್ಕಾರದ ಯೋಜನೆಗಳಲ್ಲಿ ಚೀನಾದ ಪಾಲುದಾರಿಕೆಯನ್ನು ನಿಲ್ಲಿಸಲು ಚಿಂತನೆ ಸಹ ನಡೆಯುತ್ತಿವೆ. 

ಇದೇ ವೇಳೆ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಚೀನಾ ಮೂಲದ ವಿವೋ ಸಂಸ್ಧೆಯ ಪ್ರಾಯೋಜಕತ್ವ ಮುಂದುವರೆಯಲಿದೆ ಎಂದು ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ. 

ಇಲ್ಲಿ ಮೊಬೈಲ್ ಮಾರಾಟ ಮಾಡಿ ಚೀನಾ ಸಂಸ್ಧೆ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು. ಆದರೆ ಅದೇ ಸಂಸ್ಥೆಯನ್ನು ಮರಲಿ ಇಲ್ಲೇ ಹೂಡಿಕೆ ಮಾಡುವಂತೆ ಮಾಡಿ ಭಾರತ ಸರ್ಕಾರಕ್ಕೆ ತೆರಿಗೆ ಸಿಗುವಂತೆ ಮಾಡುತ್ತಿದ್ದೇವೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ. 

ನಮಗೆ ದೇಶವೇ ಮೊದಲು. ನಂತರವೇ ಉಳಿದುದ್ದೆಲ್ಲವು. ಒಂದು ವೇಳೆ ಸರ್ಕಾರ ಈ ಒಪ್ಪಂದ ತೆಗೆದುಹಾಕಿ ಎಂದು ಆದೇಶಿಸಿದರೆ ಮರುದಿನವೇ ಆ ಕೆಲಸ ಮಾಡುತ್ತೇವೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com