ತಪ್ಪುಗಳಾಗೋದು ಸಹಜ: ಸಚಿನ್ ಎದುರು ತಪ್ಪು ತೀರ್ಪು ನೀಡಿದ್ದೆ: ಮಾಜಿ ಅಂಪೈರ್ ಸ್ಟೀವ್‌ ಬಕ್ನರ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ)ನ ಮಾಜಿ ಅಂಪೈರ್‌ ಸ್ಟೀವ್‌ ಬಕ್ಕರ್‌, ಒಂದಲ್ಲ ಎರಡು ಬಾರಿ ಟೀಮ್‌ ಇಂಡಿಯಾ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್ ಅವರನ್ನು ನಾಟ್‌ಔಟ್‌ ಆಗಿದ್ದರೂ ಔಟ್‌ ಎಂದು ತೀರ್ಪು ನೀಡಿದ್ದವರು.
ಸ್ಟೀವ್ ಬಕ್ನರ್-ಸಚಿನ್
ಸ್ಟೀವ್ ಬಕ್ನರ್-ಸಚಿನ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ)ನ ಮಾಜಿ ಅಂಪೈರ್‌ ಸ್ಟೀವ್‌ ಬಕ್ಕರ್‌, ಒಂದಲ್ಲ ಎರಡು ಬಾರಿ ಟೀಮ್‌ ಇಂಡಿಯಾ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್ ಅವರನ್ನು ನಾಟ್‌ಔಟ್‌ ಆಗಿದ್ದರೂ ಔಟ್‌ ಎಂದು ತೀರ್ಪು ನೀಡಿದ್ದವರು.

ಮೊದಲಿಗೆ 2003ರಲ್ಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ 'ಗಬ್ಬಾ' ಟೆಸ್ಟ್‌ ಪಂದ್ಯದಲ್ಲಿ ಸಚಿನ್‌ ಎಲ್‌ಬಿಡಬ್ಲ್ಯು ಆಗಿದ್ದಾರೆ ಎಂದು ಸ್ಟೀವ್‌ ಬಕ್ನರ್‌ ತೀರ್ಪು ನೀಡಿದ್ದರು. ಆಗ ಡಿಆರ್‌ಎಸ್‌ (ಅಂಪೈರ್‌ ತೀರ್ಪು ಪರಿಶೀಲನೆ) ಇಲ್ಲವಾಗಿದ್ದ ಕಾರಣ ಸಚಿನ್‌ ನಾಟ್‌ಔಟ್‌ ಆಗಿದ್ದರೂ ಕೂಡ ಹೊರ ನಡೆಯುವಂತಾಗಿತ್ತು.

ಈ ಬಗ್ಗೆ ಇದೀಗ ಮಾತನಾಡಿರುವ ಸ್ಟೀವ್‌, ಅಂದು ಜೇಸನ್‌ ಗಿಲೆಸ್ಪಿ ಅವರ ಬೌಲಿಂಗ್‌ನಲ್ಲಿ ಸಚಿನ್‌ ಪ್ಯಾಡ್ಸ್‌ಗೆ ಬಡಿದಿದ್ದ ಚೆಂಡು ಬಹುಶಃ ಸ್ಟಂಪ್ಸ್‌ನಿಂದ ಮೇಲೆ ಹೋಗುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ 2005ರಲ್ಲಿ ಪಾಕಿಸ್ತಾನ ವಿರುದ್ಧ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲೂ ಸಚಿನ್‌, ವೇಗಿ ಅಬ್ದುಲ್‌ ರಝಾಕ್‌ ಬೌಲಿಂಗ್ಸ್‌ನಲ್ಲಿ ಎಡ್ಜ್‌ ಮಾಡಿ ಕೀಪರ್‌ಗೆ ಕ್ಯಾಚ್‌ ನೀಡಿದ್ದರು ಎಂದು ತಪ್ಪಾಗಿ ಗ್ರಹಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.

"ಎರಡು ಬಾರಿ ಸಚಿನ್‌ ನಾಟ್‌ಔಟ್‌ ಆಗಿದ್ದ ಸಂದರ್ಭದಲ್ಲಿ ಔಟ್‌ ಎಂದು ತೀರ್ಪು ನೀಡಿದ್ದೇನೆ. ಅವೆರಡೂ ತಪ್ಪಾದ ನಿರ್ಧಾರ. ಅಂದಹಾಗೆ ಅಂಪೈರ್‌ಗಳು ತಪ್ಪು ನಿರ್ಧಾರ ನೀಡಬೇಕೆಂದು ಎಂದಿಗೂ ಬಯಸುವವರಲ್ಲ. ಏಕೆಂದರೆ ತಪ್ಪಾದ ನಿರ್ಧಾರಗಳು ಅವರ ಬಳಿ ಶಾಶ್ವತವಾಗಿ ಉಳಿಯುತ್ತವೆ. ಅವರನ್ನು ದ್ವಂದ್ವಕ್ಕೆ ನೂಕಿಬಿಡುತ್ತದೆ ಎಂದು ಬಕ್ನರ್‌ ಬಾರ್ಬೇಡೋಸ್‌ನ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com