ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ದಾಖಲೆ ವಿಕೆಟ್ ಬೇಟೆ ನಡೆಸಿದ ರಾಜಿಂದರ್ ಗೋಯಲ್ ನಿಧನ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 750 ವಿಕೆಟ್ ಪಡೆದ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯಲ್ (77) ಭಾನುವಾರ ವಯೋ ಸಹಜ ಕಾಯಿಲೆಗಳಿಂದ ನಿಧನರಾದರು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 750 ವಿಕೆಟ್ ಪಡೆದ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯಲ್ (77) ಭಾನುವಾರ ವಯೋ ಸಹಜ ಕಾಯಿಲೆಗಳಿಂದ ನಿಧನರಾದರು. 

ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆಯನ್ನು ಅವರು ಹೊಂದಿದ್ದಾರೆ. ಗೋಯಲ್ ಅವರಿಗೆ ಪತ್ನಿ ಮತ್ತು ಮಗ ನಿತಿನ್ ಗೋಯಲ್ ಇದ್ದಾರೆ. ಸೆಪ್ಟೆಂಬರ್ 20, 1942 ರಂದು ಹರಿಯಾಣದ ನರ್ ವನಾದಲ್ಲಿ ಜನಿಸಿದ ಗೋಯಲ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಪಟಿಯಾಲ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಉತ್ತರ ವಲಯ ಪರ ಆಡಿದ್ದರು ಮತ್ತು 157 ಪಂದ್ಯಗಳಲ್ಲಿ 750 ವಿಕೆಟ್‌ಗಳನ್ನು 18.58 ಸರಾಸರಿಯಲ್ಲಿ ಪಡೆದರು.

ಗೋಯಲ್ ಇನಿಂಗ್ಸ್‌ನಲ್ಲಿ 59 ಬಾರಿ ಐದು ಮತ್ತು 10 ವಿಕೆಟ್‌ಗಳನ್ನು 18 ಬಾರಿ ಪಡೆದಿದ್ದಾರೆ. ತಮ್ಮ ಜೀವಮಾನದ ಸಾಧನೆಗಾಗಿ 2017 ರಲ್ಲಿ ಗೋಯೆಲ್ ಅವರಿಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com