ನಾನು ಕ್ರಿಕೆಟರ್, ರಾಜಕಾರಣಿಯಲ್ಲ.. ಸಾನಿಯಾ ಜೊತೆಗಿನ ವಿವಾಹ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ ಶೋಯೆಬ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ  ಕ್ರಿಕೆಟ್ ಆಲ್ ರೌಂಡರ್ ಶೋಯೆಬ್ ಮಲಿಕ್ 2008ರಲ್ಲಿ ವಿವಾಹವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ
ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ

ಇಸ್ಲಾಮಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ  ಕ್ರಿಕೆಟ್ ಆಲ್ ರೌಂಡರ್ ಶೋಯೆಬ್ ಮಲಿಕ್ 2008ರಲ್ಲಿ ವಿವಾಹವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮದುವೆಯ ನಂತರ ಇವರಿಬ್ಬರೂ ಯುಎಇನಲ್ಲೂ ವಾಸವಾಗಿ ಸಂಸಾರ ನಡೆಸುತ್ತಿದ್ದಾರೆ. ಅಂದಿನಿಂದಲೂ ಈ ಜೋಡಿ ಕುರಿತ ಟೀಕೆಗಳು ಉಭಯ ದೇಶಗಳಲ್ಲಿ ಹಬ್ಬುತ್ತಲೇ ಇವೆ.

ಈ ಬಗ್ಗೆ ಮೊದಮೊದಲು ಸಾನಿಯಾ, ಮಲಿಕ್ ಪ್ರತಿಕ್ರಿಯಿಸುತ್ತಿದ್ದರು. ನಂತರ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗದೆ ತಮ್ಮಪಾಡಿಗೆ ತಾವಿದ್ದುಬಿಟ್ಟಿದ್ದಾರೆ. ಇನ್ನೊಂದೆಡೆ ಇತ್ತೀಚಿಗೆ ಸಾನಿಯಾ ಮಿರ್ಜಾ ಹೈದಾರಾಬಾದ್ ನಲ್ಲಿರುವ ತವರು ಮನೆಗೆ ಬಂದಿದ್ದಾರೆ. ಶೋಯಬ್ ಮಲಿಕ್ ಕೂಡಾ ಪಿಎಸ್‌ಎಲ್(ಪಾಕಿಸ್ತಾನ ಪ್ರಿಮೀಯರ್ ಲೀಗ್)ನಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳಿದ್ದರು. 

ಆದರೆ  ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ಭಾರತದಲ್ಲಿ ಲಾಕ್ ಡೌನ್ ವಿಧಿಸಿದ್ದರಿಂದ ಸಾನಿಯಾ ಇಲ್ಲಿಯೇ ಸಿಲುಕಿಕೊಂಡಿದ್ದರು. ಇದರಿಂದಾಗಿ ಕಳೆದ ಮೂರು ತಿಂಗಳಿನಿಂದ ಪತ್ನಿ, ಮಗನನ್ನು ಶೋಯೆಬ್ ನೋಡಲು ಸಾಧ್ಯವಾಗಿರಲಿಲ್ಲ. ಲಾಕ್ ಡೌನ್ ಸಡಿಲಿಸಿದ್ದರಿಂದಾಗಿ ಮಲಿಕ್ ಇತ್ತಿಚಿಗೆ ಹೈದಾರಾಬಾದ್ ಸೇರಿಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಮಲಿಕ್ ಮಾತನಾಡಿ, ಸಾನಿಯಾಳನ್ನು ವಿವಾಹ ಮಾಡಿಕೊಂಡಾಗಿನಿಂದ  ನಮ್ಮ ಬಗ್ಗೆ ಅನೇಕ ವಿರ್ಮಶೆಗಳು ಎದುರಾಗುತ್ತಿವೆ. ಆದರೆ, ನಾನೊಬ್ಬ ಕ್ರೀಡಾಪಟು, ನಾನು ರಾಜಕೀಯ ನಾಯಕನಲ್ಲ, ಉಭಯ ದೇಶಗಳ ಮಧ್ಯ ಇರುವ ಪರಿಸ್ಥಿತಿಗೂ ತನ್ನ ವಿವಾಹಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು, ವಿವಾಹ ಮಾಡಿಕೊಂಡಿದ್ದೇವೆ. ಸಂತೋಷವಾಗಿದ್ದೇವೆ. ಭಾರತ, ಪಾಕಿಸ್ತಾನ ನಡುವೆ ರಾಜಕೀಯವಾಗಿ ಏನೇ ಪರಿಸ್ಥಿತಿ ಇದ್ದರೂ, ಅದಕ್ಕೂ ನಮ್ಮ ವಿವಾಹಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಮಲಿಕ್ ಹೇಳಿದ್ದಾರೆ. ತಾನು ಪ್ರೀತಿಸಿದ ಸಾನಿಯಾ ಭಾರತಕ್ಕೆ ಸೇರಿದವರಾಗಿದ್ದರೂ, ಭಾರತದೊಂದಿಗೆ ದೇಶದೊಂದಿಗೆ ತನ್ನ ದೇಶ ಹಲವು ರಾಜಕೀಯ ಸಮಸ್ಯೆ ಹೊಂದಿದ್ದರೂ, ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com