ಸಚಿನ್ ಗೆ ಸ್ಲೆಡ್ಜ್‌ ಮಾಡುವ ಧೈರ್ಯ ಯಾರಿಗೂ ಇರಲಿಲ್ಲ: ಪಾಕ್ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಮಾಜಿ ಬ್ಯಾಟ್ಸ್‌ಮನ್‌ ಬಸಿತ್‌ ಅಲಿ ಅವರು ತಮ್ಮ ಕ್ರಿಕೆಟ್‌ ದಿನಗಳಲ್ಲಿ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರಿಗೆ ಸ್ಲೆಡ್ಜ್‌ ಮಾಡಲು ಯಾರಿಗೂ ಧೈರ್ಯವಿರಲಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ನವದೆಹಲಿ: ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಮಾಜಿ ಬ್ಯಾಟ್ಸ್‌ಮನ್‌ ಬಸಿತ್‌ ಅಲಿ ಅವರು ತಮ್ಮ ಕ್ರಿಕೆಟ್‌ ದಿನಗಳಲ್ಲಿ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರಿಗೆ ಸ್ಲೆಡ್ಜ್‌ ಮಾಡಲು ಯಾರಿಗೂ ಧೈರ್ಯವಿರಲಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

'ಬಸಿತ್‌ ಅಲಿ ಶೋ'ನ ಇತ್ತೀಚಿನ ಆವೃತ್ತಿಯಲ್ಲಿ ಮಾತನಾಡಿದ ಅವರು, ಅಂಗಳ ಹಾಗೂ ಅಂಗಳದ ಹೊರಗಡೆ ಭಾರತೀಯ ಕ್ರಿಕೆಟ್‌ ಆಟಗಾರರೊಂದಿಗೆ ಕಳೆದಿದ್ದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.

ಯಾವ ವಿಕೆಟ್‌ ಕೀಪರ್‌ ಅನ್ನು ನೀವು ತುಂಬಾ ಸ್ಲೆಡ್ಜ್‌ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ನಯಾನ್‌ ಮೊಂಗಿಯಾ ಅವರಿಗೆ ಹೆಚ್ಚು ಕಿಚಾಯಿಸಲಾಗಿತ್ತು ಎಂದು ತಿಳಿಸಿದರು.

ಸಚಿನ್‌ ತೆಂಡೂಲ್ಕರ್‌ ಹಾಗೂ ಅಝರುದ್ದಿನ್‌ ಅವರನ್ನು ಹೊರತುಪಡಿಸಿ ಇನ್ನೆಲ್ಲರಿಗೂ ಸ್ಲೆಡ್ಜ್‌ ಮಾಡಲಾಗುತ್ತಿತ್ತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com