2013ರ ಈ ದಿನ: ಐಸಿಸಿಯ ಎಲ್ಲಾ ವಿಧದ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕನೆನಿಸಿದ ಧೋನಿ

 ಮಹೇಂದ್ರ ಸಿಂಗ್ ಧೋನಿ ಆಧುನಿಕ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರ ಹೆಸರು. ವಿಶ್ವ ಕ್ರಿಕೆಟ್ ನಲ್ಲಿ ಕೇವಲ ಬೆರಳೆಣಿಕೆಯಷ್ಟು ಕ್ಯಾಪ್ಟನ್ ಗಳು ಅವರಿಗೆ ಪ್ರತಿಸ್ಪರ್ಧಿಯಾಗಬಲ್ಲರು. ಇನ್ನು 2013ರ ಇದೇ ದಿನ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಎಲ್ಲಾ ಮೂರು ವಿಧದ ಐಸಿಸಿಟ್ರೋಫಿಗಳನ್ನು ಜಯಿಸಿದ್ದ ಸಾಧನೆಯನ್ನು ಪೂರ್ಣ ಮಾಡಿದ್ದಾರೆ. ಇಂದಿನ ಈ ದಿನ ಧೋನಿ ಭಾರತಕ್ಕೆ  ಚಾಂಪಿಯನ 
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ

ಬರ್ಮಿಂಘ್ಯಾಂ: ಮಹೇಂದ್ರ ಸಿಂಗ್ ಧೋನಿ ಆಧುನಿಕ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರ ಹೆಸರು. ವಿಶ್ವ ಕ್ರಿಕೆಟ್ ನಲ್ಲಿ ಕೇವಲ ಬೆರಳೆಣಿಕೆಯಷ್ಟು ಕ್ಯಾಪ್ಟನ್ ಗಳು ಅವರಿಗೆ ಪ್ರತಿಸ್ಪರ್ಧಿಯಾಗಬಲ್ಲರು. ಇನ್ನು 2013ರ ಇದೇ ದಿನ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಎಲ್ಲಾ ಮೂರು ವಿಧದ ಐಸಿಸಿಟ್ರೋಫಿಗಳನ್ನು ಜಯಿಸಿದ್ದ ಸಾಧನೆಯನ್ನು ಪೂರ್ಣ ಮಾಡಿದ್ದಾರೆ. ಇಂದಿನ ಈ ದಿನ ಧೋನಿ ಭಾರತಕ್ಕೆ  ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿ ಕೊಟ್ಟಿದ್ದರು.

ಏಳು ವರ್ಷಗಳ ಹಿಂದೆ ಜೂನ್ 23 ರಂದು ಧೋನಿ ವಿಶ್ವದರ್ಜೆಯಲ್ಲಿ ಎಲ್ಲಾ ವಿ3 ಧದ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ದಿನ ನಡೆದಿದ್ದ ಫೈನಲ್ಸ್ ನಲ್ಲಿ ಅತಿಥೇಯ ಇಂಗ್ಲೆಂಡ್ ನ್ನು ಐದು ರನ್ನುಗಳಿಂದ ಮಣಿಸಿ ಟೀಂ ಇಂಡಿಯಾ ಟ್ರೋಫಿ ತನ್ನದಾಗಿಸಿಕೊಂಡಿತ್ತು.

2007 ರಲ್ಲಿ ರಾಂಚಿ ಕ್ರೀಡಾ ತಾರೆ ಧೋನಿ ಧೋನಿ ದಕ್ಷಿಣ ಆಫ್ರಿಕಾದಲ್ಲಿ  ನಡೆದಿದ್ದ ಚೊಚ್ಚಲ ವಿಶ್ವ ಟಿ 20ಪ್ರಶಸ್ತಿ ಗೆಲ್ಲುವ ಮುಖೇನ ವಿಶ್ವ ಖ್ಯಾತಿಗೆ ಪಾತ್ರವಾಗಿದ್ದರು. ಅಂದು ಪಾಕಿಸ್ತಾನದ ಎದುರಿಗೆ ಭಾರತ ಭರ್ಜರಿ ಗೆಲುವು ಕಂಡಿತ್ತು. 

2011 ರ ಏಕದಿನ ವಿಶ್ವಕಪ್ ನಲ್ಲಿ ಸಹ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ನಾಯಕ ಧೋನಿ ಅಲ್ಲಿ ಸಹ ಟೀಂ ಇಂಡಿಯಾಗೆ ಇಪ್ಪತ್ತೆಂಟು ವಷಗಳ ನಂತರ ವಿಶ್ವಕಪ್ ಕಿರೀಟ ಧರಿಸುವಂತೆ ಮಾಡಿದ್ದರು. ಇದು ನಾಯಕನಾಗಿ ಅವರ ಅತ್ಯುತ್ತಮ ಕ್ಷಣವಾಗಿತ್ತು. ಆ ದಿನ ಏಪ್ರಿಲ್ 2, 2011ರಂದು ಶ್ರೀಲಂಕಾ ಎದುರು ಭಾರತ ಕಣಕ್ಕಿಳಿದಿತ್ತು. 

ಇನ್ನು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೋತ 2019  ವಿಶ್ವಕಪ್ ಬಳಿಕ ಧೋನಿ ವಿಶ್ರಾಂತಿಯಲ್ಲಿದ್ದಾರೆ.  ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನೊಂದಿಗೆ ವಿಕೆಟ್‌ಕೀಪರ್ ಕಂ ಬ್ಯಾಟ್ಸ್‌ಮನ್ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದೆ.  ಆದರೆ ಇದೀಗ ಕೊರೋನಾವೈರಸ್ ಕಾರಣ ಪಂದ್ಯ ನಡೆಯುವ ಸಮಯ, ಸ್ಥಳದ ಬಗ್ಗೆ ಸಹ ಸಂದೇಹವಿದೆ. ಏನೇ ಆದರೂ ವಿಶ್ವ ಶ್ರೇಶ್ತ್ಃಅ ಕ್ಯಾಪ್ಟನ್ ಧೋನಿ ಹೆಸರು ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com