ಕ್ರಿಕೆಟ್ ಗೂ ಮೀರಿದ ಜೀವನವನ್ನು ದ್ರಾವಿಡ್ ರಿಂದ ಕಲಿತೆ: ಪೂಜಾರ

ಕ್ರಿಕೆಟ್ ನಿಂದ ಹೊರಗುಳಿಯುವುದರ ಪ್ರಾಮುಖ್ಯತೆಯನ್ನು ರಾಹುಲ್ ದ್ರಾವಿಡ್ ತಮಗೆ ಕಲಿಸಿಕೊಟ್ಟಿದ್ದು, ಅವರಿಗೆ ಕೃತಜ್ಞನಾಗಿ ಇರುವುದಾಗಿ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ಭಾರತದ ಚೇತೇಶ್ವರ್ ಪೂಜಾರಾ ಹೇಳಿದ್ದಾರೆ.
ರಾಹುಲ್ ದ್ರಾವಿಡ್, ಚೇತೇಶ್ವರ ಪೂಜಾರ
ರಾಹುಲ್ ದ್ರಾವಿಡ್, ಚೇತೇಶ್ವರ ಪೂಜಾರ

ನವದೆಹಲಿ: ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್,ತಮ್ಮ ಜೀವನದಲ್ಲಿ ಬೀರಿರುವ ಪ್ರಭಾವವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.ಆದರೆ,ಕ್ರಿಕೆಟ್ನಿಂದ ಹೊರಗುಳಿಯುವುದರ ಪ್ರಾಮುಖ್ಯತೆಯನ್ನು ರಾಹುಲ್ ದ್ರಾವಿಡ್ ತಮಗೆ ಕಲಿಸಿಕೊಟ್ಟಿದ್ದು,  ಅವರಿಗೆ ಕೃತಜ್ಞನಾಗಿ ಇರುವುದಾಗಿ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಭಾರತದ ಚೇತೇಶ್ವರ್ ಪೂಜಾರಾ ಹೇಳಿದ್ದಾರೆ.

ಕ್ರಿಕೆಟ್ ನಿಂದ ಹೊರಗುಳಿಯುವಿಕೆಯ ಮಹತ್ವವನ್ನು ನನಗೆ ಅರ್ಥ ಮಾಡಿಸಲು ರಾಹುಲ್ ದ್ರಾವಿಡ್ ನನಗೆ ಸಹಾಯ ಮಾಡಿದ್ದಾರೆ.
ಬಹಳ ಗೊಂದಲದಲ್ಲಿದ್ದೆ. ಆದರೆ, ದ್ರಾವಿಡ್ ಅವರೊಂದಿಗೆ ಮಾತನಾಡಿದ ಬಳಿಕ ಏನು ಮಾಡಬೇಕು ಎಂಬುದು ಸ್ಪಷ್ಟವಾಯಿತು ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋಗೆ ಹೇಳಿದ ಸಂದರ್ಶನದಲ್ಲಿ ಪೂಜಾರಾ ತಿಳಿಸಿದ್ದಾರೆ.

ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ದ್ರಾವಿಡ್ ಸಲಹೆ ನೀಡಿದ್ದಾರೆ. ಕ್ರಿಕೆಟ್ ಕಡೆಗೆ ಗಮನ ನೀಡುವಂತೆ ಹೆಚ್ಚಿನ ಜನ ಹೇಳುತ್ತಿದ್ದರು, ನಾನು ಕೂಡಾ ಆ ಕಡೆಗೆ ಗಮನ ನೀಡುತ್ತಿದೆ. ಆದರೆ, ಕ್ರಿಕೆಟ್ ನಿಂದ ಹೊರಗುಳಿದಾಗ ಕ್ರಿಕೆಟ್ ಗೂ ಮೀರಿದ ಜೀವನವಿದೆ ಅಂತಾ ಅನ್ನಿಸಿತು ಎಂದಿದ್ದಾರೆ.

ಡ್ರಾವಿಡ್ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 164 ಟೆಸ್ಟ್ ಗಳಲ್ಲಿ 13288 ರನ್ ಗಳಿದ್ದು, 344 ಏಕದಿನ ಪಂದ್ಯಗಳ್ಲಲಿ 10889 ರನ್ ಗಳಿಸಿದ್ದಾರೆ.ರಾಹುಲ್ ನಾಯಕತ್ವದಲ್ಲಿನ ಟೀಂ ಇಂಡಿಯಾ 79 ಏಕದಿನ ಪಂದ್ಯಗಳ ಪೈಕಿಯಲ್ಲಿ 42 ಗೆದಿದ್ದೆ. ರಾಹುಲ್ ದ್ರಾವಿಡ್ ಅವರನ್ನು ಒಂದು ವಾಕ್ಯದಲ್ಲಿ ವರ್ಣಿಸಲು ಸಾಧ್ಯವಿಲ್ಲ, ಅವರು ಯಾವಾಗಲೂ ನನಗೆ ಸ್ಪೂರ್ತಿ ಎಂದು ಪೂಜಾರ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com