'ಐ ವಿಲ್ ಕಿಲ್ ಯೂ': ಪಾಕ್ ಕ್ರಿಕೆಟರ್ ಬಾಬರ್ ಆಜಮ್ ಗೆ ಸಾನಿಯಾ ಮಿರ್ಜಾ ವಾರ್ನಿಂಗ್!

ಪಾಕಿಸ್ತಾನ ಕ್ರಿಕೆಟ್ ಆಟಗಾರ ಬಾಬರ್ ಆಜಮ್‌ಗೆ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಎಚ್ಚರಿಕೆ ನೀಡಿದ್ದಾರೆ. 

Published: 27th June 2020 03:23 PM  |   Last Updated: 27th June 2020 05:49 PM   |  A+A-


Sania Mirza warns pakistan Cricketer Babar Azam

ಸಾನಿಯಾ ಮಿರ್ಜಾ-ಶೊಯೆಬ್ ಮಲ್ಲಿಕ್

Posted By : Srinivasamurthy VN
Source : UNI

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಆಟಗಾರ ಬಾಬರ್ ಆಜಮ್‌ಗೆ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಎಚ್ಚರಿಕೆ ನೀಡಿದ್ದಾರೆ. 

ಪತಿ ಶೋಯೆಬ್ ಮಲಿಕ್ ಅವರೊಂದಿಗೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಬಾಬರ್ ಆಜಮ್ ಜೊತೆ ಮಾತನಾಡುತ್ತಿದ್ದಾಗ.. ಸಾನಿಯಾ ಈ ವಾರ್ನಿಂಗ್ ನೀಡಿದ್ದಾರೆ.

ಮಲಿಕ್ ಕೇಳಿದ ಪ್ರಶ್ನೆಗಳಿಗೆ ಬಾಬರ್ ಆಜಮ್ ಉತ್ತರ ನೀಡುತ್ತಿದ್ದರು. ಪಾಕ್ ಕ್ರಿಕೆಟ್ ಆಟಗಾರರ ಕುಟುಂಬಗಳೊಂದಿಗೆ ನಿನಗೆ ಉತ್ತಮ ಸಂಬಂಧ ಇದೆ.. ಅವರಲ್ಲಿ ನಿನಗೆ ತುಂಬಾ ಇಷ್ಟವಾದ ಅತ್ತಿಗೆ ಯಾರು..? ಎಂದು ಬಾಬರ್ ಮಲಿಕ್ ಪ್ರಶ್ನಿಸಿದರು.. ಮಾಜಿ ನಾಯಕ ಸರ್ಫ್ ರಾಜ್ ಪತ್ನಿ ಸೈದಾ ಖುಸ್ಬತ್ ಎಂದು ಬಾಬರ್ ನೇರವಾಗಿ ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಾನಿಯಾ ಬಾಬರ್ ಗೆ 'ನಿನ್ನ ಕೊಲ್ಲುತ್ತೇನೆ' ಎಂದು ಹಾಸ್ಯಮಯವಾಗಿ ಹೇಳಿದ್ದರು. ಬಾಬರ್ ಆಜಮ್, ಸಾನಿಯಾರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಆದರೆ ತನ್ನ ಹೆಸರು ಹೇಳುತ್ತಾನೆಂದುಕೊಂಡರೆ, ಸೈದಾ ಹೆಸರು ಹೇಳಿದ್ದರಿಂದ ಸಾನಿಯಾ ಮಿರ್ಜಾ ಸಿಟ್ಟು ಬಂದಿದೆ. ಇದರೊಂದಿಗೆ ಲೈವ್ ನಲ್ಲೇ ‘ಐ ವಿಲ್ ಕಿಲ್ ಯೂ” ಎಂದು ಮೇಸೆಜ್ ರವಾನಿಸಿ, ಈ ಬಾರಿ ಮನೆಗೆ ಬಂದರೆ ಕನಿಷ್ಟ ಕುಳಿತಿಕೊಳ್ಳುವಂತೆಯೂ ಹೇಳುವುದಿಲ್ಲ ಎಂದು ಬಾಬರ್ ವಿರುದ್ದ ಸಾನಿಯಾ ಹುಸಿ ಮುನಿಸು ಪ್ರದರ್ಶಿಸಿದರಂತೆ. ಇದಕ್ಕೆ ಸಂಬಂಧಿಸಿದ ಟ್ವೀಟ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp