ಎರಡನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ, ಎರಡನೇ ದಿನವೂ ನ್ಯೂಜಿಲೆಂಡ್‌ಗೆ ಮುನ್ನಡೆ

ಟ್ರೆಂಟ್ ಬೌಲ್ಟ್ (12 ಕ್ಕೆ 3) ಮಾರಕ ದಾಳಿಗೆ ನಲುಗಿದ ಭಾರತ ತಂಡ ಇಲ್ಲಿನ ಹ್ಯಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲಿನ ದವಡೆಗೆ ಸಿಲುಕಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಬೌಲ್ಟ್
ವಿಕೆಟ್ ಪಡೆದ ಸಂಭ್ರಮದಲ್ಲಿ ಬೌಲ್ಟ್

ಕ್ರೈಸ್ಟ್‌ಚರ್ಚ್‌: ಟ್ರೆಂಟ್ ಬೌಲ್ಟ್ (12 ಕ್ಕೆ 3) ಮಾರಕ ದಾಳಿಗೆ ನಲುಗಿದ ಭಾರತ ತಂಡ ಇಲ್ಲಿನ ಹ್ಯಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲಿನ ದವಡೆಗೆ ಸಿಲುಕಿದೆ.

ಎರಡನೇ ದಿನವಾದ ಇಂದು ಏಳು ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ಕಿವೀಸ್ ವೇಗಿಗಳ ಎದುರು ಮಕಾಡೆ ಮಲಗಿತು. ಎರಡನೇ ದಿನದಾಟದ ಅಂತ್ಯಕ್ಕೆ 36 ಓವರ್‌ಗಳಿಗೆ 90 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ 97 ರನ್ ಗಳ ಮುನ್ನಡೆ ಗಳಿಸಿದೆಯಾದರೂ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಪೃಥ್ವಿ ಶಾ ಹಾಗೂ ಚೇತೇಶ್ವರ ಪೂಜಾರ ಕ್ರಮವಾಗಿ 14 ಮತ್ತು 24 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಸತತ ವೈಫಲ್ಯ ಅನುಭವಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. 14 ರನ್ ಗಳಿಸಿದ್ದ ಕೊಹ್ಲಿ ಅವರನ್ನು ಕಾಲಿನ್ ಡಿ ಗ್ರಾಂಡ್ಹೋಮ್ ಎಲ್‌ಬಿ ಡಬ್ಲ್ಯು ಬಲೆಗೆ ಬೀಳಿಸಿದರು. ಬಳಿಕ ಅಜಿಂಕ್ಯಾ ರಹಾನೆ 9 ರನ್ ಗಳಿಸಿ ವ್ಯಾಗ್ನರ್ ಗೆ ವಿಕೆಟ್ ಒಪ್ಪಿಸಿದರೆ, ಉಮೇಶ್ ಯಾದವ್ 1 ರನ್ ಗಳಿಸಿ ಬೌಲ್ಚ್ ಗೆ ವಿಕೆಟ್ ಒಪ್ಪಿಸಿದರು. 

ದಿನದ ಅಂತ್ಯಕ್ಕೆ 5 ರನ್ ಗಳಿಸಿರುವ ಹನುಮ ವಿಹಾರಿ ಮತ್ತು 1 ರನ್ ಗಳಿಸಿರುವ ರಿಷಬ್ ಪಂತ್ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಮೂರು ವಿಕೆಟ್ ಕಬಳಿಸಿದರೆ, ಟಿಮ್ ಸೌಥಿ, ಗ್ರಾಂಡ್  ಹೋಮ್ ಮತ್ತು ವ್ಯಾಗ್ನರ್ ತಲಾ 1 ವಿಕೆಟ್ ಪಡೆದರು.

ಪ್ರಸ್ತುತ ಭಾರತ 2ನೇ ಇನ್ನಿಂಗ್ಸ್ ನಲ್ಲಿ 90 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದು, 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಅಲ್ಲದೆ 2ನೇ ಇನ್ನಿಂಗ್ಸ್ ನಲ್ಲಿ 97 ರನ್ ಗಳ ಮುನ್ನಡೆ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com