ರಿಷಬ್ ಪಂತ್ ಅವನೊಬ್ಬನ ಕೈಯಲ್ಲಿ ಏನಾಗುತ್ತೆ: ಟೆಸ್ಟ್ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೀಗೆ?

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಕೊಂಚ ಗರಂ ಆಗಿದ್ದರು. ಇನ್ನು ರಿಷಬ್ ಪಂತ್ ಕುರಿತಂತೆ ಮಾತನಾಡಿದ ಅವರು ಪಂತ್ ಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಆದರೆ ಆತನ ಜಾಗದಲ್ಲಿ ಮತ್ತೊಬ್ಬ ಯುವ ಆಟಗಾರರನನ್ನು ಆಡಿಸಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ-ಪಂತ್
ಕೊಹ್ಲಿ-ಪಂತ್

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಕೊಂಚ ಗರಂ ಆಗಿದ್ದರು. ಇನ್ನು ರಿಷಬ್ ಪಂತ್ ಕುರಿತಂತೆ ಮಾತನಾಡಿದ ಅವರು ಪಂತ್ ಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಆದರೆ ಆತನ ಜಾಗದಲ್ಲಿ ಮತ್ತೊಬ್ಬ ಯುವ ಆಟಗಾರರನನ್ನು ಆಡಿಸಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಿದ್ದಾರೆ. 

ಇನ್ನು ನ್ಯೂಜಿಲ್ಯಾಂಡ್ ವಿರುದ್ಧ ತಂಡ ಸಾಮೂಹಿಕ ವೈಫಲ್ಯ ಅನುಭವಿಸಿದೆ. ಇದರ ಮಧ್ಯೆ ರಿಷಬ್ ಪಂತ್ ಒಬ್ಬನನ್ನೇ ಪ್ರತ್ಯೇಕಿಸಿ ಮಾತನಾಡುವುದು ಸೂಕ್ತವಲ್ಲ. ಅಲ್ಲದೆ ಅವನೊಬ್ಬನಿಂದಲೇ ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ. 

ಹಲವು ಅವಕಾಶಗಳು ಸಿಕ್ಕರೂ ಸತತ ವೈಫಲ್ಯ ಅನುಭವಿಸುತ್ತಿರುವ ರಿಷಬ್ ಪಂತ್ ಕಳೆದ ಒಂದು ವರ್ಷದಿಂದ ಸ್ಕ್ಯಾನರ್ ಮಾಡಲಾಗುತ್ತಿದೆ. ಇನ್ನು ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ ಗಳಲ್ಲೂ ಕೇವಲ 60 ರನ್ ಮಾತ್ರ ಪಂತ್ ಬಾರಿಸಿದ್ದು ಆತನ ಬದಲಿಗೆ ವೃದ್ಧಿಮಾನ್ ಸಹಾ ಅವರನ್ನು ಆಡಿಸಬಹುದು ಎಂಬ ಚರ್ಚೆಗಳು ಆಗುತ್ತಿವೆ. 

ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 242 ರನ್ ಪೇರಿಸಿತ್ತು. ನಂತರ ನ್ಯೂಜಿಲ್ಯಾಂಡ್ 235 ರನ್ ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 124 ರನ್ ಗಳಿಗೆ ಆಲೌಟ್ ಆಗಿದ್ದು 132 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 132 ರನ್ ಬಾರಿಸಿ ಗೆಲುವಿನ ನಗೆ ಬೀರಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com