ಎರಡನೇ ಟೆಸ್ಟ್: ಟೀಂ ಇಂಡಿಯಾಗೆ 7 ವಿಕೆಟ್ ಹೀನಾಯ ಸೋಲು, 2-0  ಸರಣಿ ಕ್ಲೀನ್ ಸ್ವೀಪ್ ಮಾಡಿ ಗೆಲುವಿನ ಕೇಕೆ ಹಾಕಿದ ಕಿವೀಸ್!

ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಮೂರನೇ ದಿನವಾದ ಸೋಮವಾರ ನ್ಯೂಜಿಲೆಂಡ್ ಟೀಂ ಇಂಡಿಯಾ ವಿರುದ್ಧ  ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಡನೆ ಕಿವೀಸ್ ತನ್ನದೇ ನೆಲದಲ್ಲಿ ಭಾರತದ ವಿರುದ್ಧ  ಸ್ಮರಣೀಯ ಸರಣಿ ಕ್ಲೀನ್ ಸ್ವೀಪ್ ಸಾಧನೆ ಗೈದಿದೆ
ಎರಡನೇ ಟೆಸ್ಟ್: ಟೀಂ ಇಂಡಿಯಾಗೆ 7 ವಿಕೆಟ್ ಹೀನಾಯ ಸೋಲು, 2-0  ಸರಣಿ ಕ್ಲೀನ್ ಸ್ವೀಪ್ ಮಾಡಿ ಗೆಲುವಿನ ಕೇಕೆ ಹಾಕಿದ ಕಿವೀಸ್!
ಎರಡನೇ ಟೆಸ್ಟ್: ಟೀಂ ಇಂಡಿಯಾಗೆ 7 ವಿಕೆಟ್ ಹೀನಾಯ ಸೋಲು, 2-0 ಸರಣಿ ಕ್ಲೀನ್ ಸ್ವೀಪ್ ಮಾಡಿ ಗೆಲುವಿನ ಕೇಕೆ ಹಾಕಿದ ಕಿವೀಸ್!

ಕ್ರೈಸ್ಟ್‌ಚರ್ಚ್: ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಮೂರನೇ ದಿನವಾದ ಸೋಮವಾರ ನ್ಯೂಜಿಲೆಂಡ್ ಟೀಂ ಇಂಡಿಯಾ ವಿರುದ್ಧ  ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಡನೆ ಕಿವೀಸ್ ತನ್ನದೇ ನೆಲದಲ್ಲಿ ಭಾರತದ ವಿರುದ್ಧ  ಸ್ಮರಣೀಯ ಸರಣಿ ಕ್ಲೀನ್ ಸ್ವೀಪ್ ಸಾಧನೆ ಗೈದಿದೆ.

ಮೂರನೇ ದಿನ ಭಾರತ ಎರಡನೇ ಇನ್ನಿಂಗ್ಸ್ ಅನ್ನು ಮುಂದುವರಿಸಿದ್ದರೂ ಕೇವಲ 124 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಪತನವಾಗಿದೆ. ನ್ಯೂಜಿಲೆಂಡ್ ಕೇವಲ 36 ಓವರ್‌ಗಳಲ್ಲಿ 132 ರನ್ನುಗಳ ಸಾಧಾರಣ ಗೆಲುವಿನ ಗುರಿ ಮುಟ್ಟಿದ್ದು ಟಾಮ್ ಲಾಥಮ್ (74 ಎಸೆತಗಳಲ್ಲಿ 52) ಮತ್ತು ಟಾಮ್ ಬ್ಲುಂಡೆಲ್ (113 ಎಸೆತಗಳಲ್ಲಿ 55) ಉತ್ತಮ ಬ್ಯಾಟಿಂಗ್  ನಡೆಸಿ ತಂಡದ ಜಯಕ್ಕೆ ಕಾರಣವಾದರು.

ಕಿವೀಸ್ ನೆಲದಲ್ಲಿ 5 ಪಂದ್ಯಗಳ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದ ಟೀಂ ಇಂಡಿಯಾ ಗೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಗಳ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ ಸೇಡು ತೀರಿಸಿದೆ. 

ಇನ್ನು ಟೀಂ ಇಂಡಿಯಾ ಸ್ವದೇಶದಲ್ಲಷ್ತೇ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತಿದ್ದು ವಿದೇಶೀ ನೆಲಗಳಲ್ಲಿ ಕಳಪೆ ಸಾಧನೆ ತೋರುತಿದೆ. ಈ ಹಿಂದೆ  2014 ಮತ್ತು 2018 ರಲ್ಲಿ ಇಂಗ್ಲೆಂಡ್‌ನಲ್ಲಿ ಸಹ ಟೀಂ ಇಂಡಿಯಾ ಇಂತಹುದೇ ಸೋಲಿನ ಕಹಿ ಅನುಭವಿಸಿತ್ತು. ಇದೀಗ ಕಿವೀಸ್ ನಾಡಿನಲ್ಲಿ ಮತ್ತೊಮ್ಮೆ ಅದೇ ಪ್ರಸಂಗ ಮರುಕಳಿಸಿದೆ.

ಈ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ ನಾಲ್ಕು ಅರ್ಧಶತಕಗಬಂದಿತ್ತು.ನಾಯಕ ಕೊಹ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 38 ರನ್ ಗಳಿಸಲಷ್ಟೇ ಯಶಸ್ವಿಯಾಗಿರುವುದು ಅವರ ಅಭಿಮಾನಿಗಳಿಗೆ ತೀವ್ರ ಮುಜುಗರ ತಂದಿದೆ.

ಭಾರತವು ಮುಂದಿನ ದಿನಗಳಲ್ಲಿ 2021 ರಲ್ಲಿ ಇಂಗ್ಲೆಂಡ್‌ನಲ್ಲಿ ಆಡಬೇಕಿದ್ದು ಇದಕ್ಕಾಗಿ ತಂಡದಲ್ಲಿ ಕೆಲ ಬದಲಾವಣೆ ಹಾಗೂ ಆಟದಲ್ಲಿ ಕೆಲ ಮಾರ್ಪಾಡು ಅನಿವಾರ್ಯವಾಗಿದೆ. 

ಸಂಕ್ಷಿಪ್ತ ಸ್ಕೋರ್
ಭಾರತ
1 ನೇ ಇನ್ನಿಂಗ್ಸ್: 46 ಓವರ್‌ಗಳಲ್ಲಿ 242 ಮತ್ತು 124 ಆಲ್‌ ಔಟ್ (ಚೇತೇಶ್ವರ ಪೂಜಾರಾ 24; ಟ್ರೆಂಟ್ ಬೌಲ್ಟ್ 4/28, ಟಿಮ್ ಸೌಥಿ 3/36)

ನ್ಯೂಜಿಲೆಂಡ್: 36 ಓವರ್‌ಗಳಲ್ಲಿ 235 ಮತ್ತು 3 ಓಟದಲ್ಲಿ 132 (ಟಾಮ್ ಲಾಥಮ್ 52, ಟಾಮ್ ಬ್ಲುಂಡೆಲ್ 55 )

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com