30ಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಇನ್ನೂ ಕಠಿಣ ಅಭ್ಯಾಸ ಮಾಡಬೇಕು: ಕಪಿಲ್ ದೇವ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇನ್ನು ಮುವತ್ತು ವರ್ಷ. ಅವರು ಇನ್ನು ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಬೇಕು, ಅವರ ಕೈ ಹಾಗೂ ಕಣ್ಣಿನ ಹೊಂದಾಣಿಕೆ ನಿಧಾನವಾದಂತೆ ಕಾಣುತ್ತಿದೆ ಎಂದು ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ಕಪಿಲ್ ದೇವ್-ವಿರಾಟ್ ಕೊಹ್ಲಿ
ಕಪಿಲ್ ದೇವ್-ವಿರಾಟ್ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇನ್ನು ಮುವತ್ತು ವರ್ಷ. ಅವರು ಇನ್ನು ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಬೇಕು, ಅವರ ಕೈ ಹಾಗೂ ಕಣ್ಣಿನ ಹೊಂದಾಣಿಕೆ ನಿಧಾನವಾದಂತೆ ಕಾಣುತ್ತಿದೆ ಎಂದು ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಮೂರು ಮಾದರಿಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಏಕದಿನ ಹಾಗೂ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿಸಿದ್ದಾರೆ.

“ಒಂದಿಷ್ಟು ಹಂತ ತಲುಪಿದಾಗ ನಿಮಗೆ ಕೆಲವು ತೊಂದರೆ ಆಗುತ್ತದೆ. ವಿರಾಟ್ 30 ವರ್ಷ ತಲುಪಿದ್ದಾರೆ. ದೃಷ್ಟಿ ಅವರ ಕೈ ಹಿಡಿಯುವಲ್ಲಿ ವಿಫಲವಾಗಿದೆ. ಸ್ವಿಂಗ್ ಬೌಲ್ ಗುರುತಿಸಿ ಬೌಂಡರಿ ಬಾರಿಸುತ್ತಿದ್ದ ವಿರಾಟ್, ಈ ಪ್ರವಾಸದಲ್ಲಿ ಎರಡು ಬಾರಿ ಸ್ವಿಂಗ್ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ. ಅವರು ದೃಷ್ಟಿಯನ್ನು ಸರಿ ಪಡಿಸಿಕೊಳ್ಳುವ ಅವಶ್ಯಕತೆ ಇದೆ” ಎಂದಿದ್ದಾರೆ.

“ಖ್ಯಾತ ನಾಮ ಆಟಗಾರರು ಬಳಗೆ ಬರುವ ಚೆಂಡನ್ನು ಗುರುತಿಸುವಲ್ಲಿ ಎಡವಿ ಬೋಲ್ಡ್ ಹಾಗೂ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದಾಗ ಅವರು ಇನ್ನು ಅಭ್ಯಾಸ ಮಾಡುವ ಅವಶ್ಯಕತೆ ಇದೆ. ಇದನ್ನು ನೋಡಿದರೆ ಕೈ ಹಾಗೂ ದೃಷ್ಟಿ ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ ಎಂಬುದು ತಿಳಿಯುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಬಲವೇ ದೌರ್ಬಲ್ಯವಾಗುತ್ತದೆ” ಎಂದು ಕಪಿಲ್ ತಿಳಿಸಿದ್ದಾರೆ.

ಕೊಹ್ಲಿ ಅವರು ಇನ್ನು ಅಭ್ಯಾಸ ಮಾಡುವ ಅವಶ್ಯಕತೆ ಇದೆ. ದೃಷ್ಠಿ ನಿಮ್ಮ ಕೈಹಿಡಿಯದಿದ್ದಾಗ ತಂತ್ರಗಾರಿಕೆಯನ್ನು ಬಲ ಪಡಿಸಬೇಕು. ಇಂಡಿಯನ್ ಪ್ರೀಮಿಯರ್ ಲೀಗ್ ಕೊಹ್ಲಿ ಅವರಿಗೆ ನ್ಯೂನತೆ ಸುಧಾರಿಸಲು ವೇದಿಕೆ ಆಗಲಿದೆ. ಅವರಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಗೊತ್ತಿದೆ. ಅವರು ಈ ಸಮಸ್ಯೆಯಿಂದ ಬೇಗ ಹೊರಗಡೆ ಬರುತ್ತಾರೆ” ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com