39 ಎಸೆತಗಳಲ್ಲಿ 105 ರನ್: ಐಪಿಎಲ್ ಗೆ ಹಾರ್ದಿಕ್ ಪಾಂಡ್ಯ ಭರ್ಜರಿ ಸಿದ್ಧತೆ

ಐಪಿಎಲ್ 2020ಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಟಿ20 ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ 105 ರನ್ ಸಿಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯಾ
ಹಾರ್ದಿಕ್ ಪಾಂಡ್ಯಾ

ಮುಂಬೈ: ಐಪಿಎಲ್ 2020ಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಟಿ20 ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ 105 ರನ್ ಸಿಡಿಸಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಕ್ರಿಕೆಟ್ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಡಿವೈ ಪಾಟೀಲ್ ಟಿ20 ಕಪ್‌ ಸರಣಿಯಲ್ಲಿ ಅವರು ಕೇವಲ 39 ಎಸೆತಗಳಲ್ಲಿ 105 ರನ್ ಸಿಡಿಸಿದ್ದಾರೆ. ಆವರ ಈ ಭರ್ಜರಿ ಇನ್ನಿಂಗ್ಸ್ ನಲ್ಲಿ ಎಂಟು ಬೌಂಡರಿ ಮತ್ತು 10 ಸಿಕ್ಸರ್‌ಗಳು ಕೂಡ ಇತ್ತು.

ಡಿವೈ ಪಾಟೀಲ್ ಟಿ20 ಕಪ್‌ ಸರಣಿಯಲ್ಲಿ ರಿಲಯನ್ಸ್ -1 ತಂಡದ ಪರ ಆಡಿದ ಪಾಂಡ್ಯ ಕ್ರೀಸ್ ಗೆ ಬರುತ್ತಲೇ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಹಾರ್ದಿಕ್ ಪಾಂಡ್ಯ ಅವರ ಈ ಇನ್ನಿಂಗ್ಸ್ ನೆರವಿನಿಂದ ರಿಲಯನ್ಸ್ -1 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಭರ್ಜರಿ 252 ರನ್ ಗಳಿಸಿತು. ಅಲ್ಲದೆ ರಿಲಯನ್ಸ್ -1 ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತಂಡವನ್ನು 151 ರನ್‌ಗಳಿಗೆ ಔಟ್ ಮಾಡಿತು. ಆ ಮೂಲಕ ರಿಲಯನ್ಸ್ -1 ತಂಡ 101 ರನ್‌ಗಳಿಂದ ಜಯಗಳಿಸಿತು.

ಈ ಭರ್ಜರಿ ಇನ್ನಿಂಗ್ಸ್ ಮೂಲಕ ಪಾಂಡ್ಯಾ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಮತ್ತು ಐಪಿಎಲ್ ಗೆ ತಾವು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. 

ಇನ್ನು ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯಾ, ಗಾಯಗೊಂಡು ಕ್ರಿಕೆಟ್ ನಿಂದ ದೂರವಿದ್ದೆ. ಆದರೆ ಇಂತಹ ದೊಡ್ಡ ಇನ್ನಿಂಗ್ಸ್ ಮೂಲಕ ಕ್ರಿಕೆಟ್ ಗೆ ಕಮ್ ಆಗಿದ್ದು ಸಂತಸ ತಂದಿದೆ. ಇದು ನನ್ನಂತಹ ಆಟಗಾರರಿಗೆ ಉತ್ತಮ ವೇದಿಕೆಯಾಗಿದೆ. ನಾನು ಆರು ತಿಂಗಳ ಕಾಲ ಕ್ರಿಕೆಟ್ ನಿಂದ ದೂರವಿದ್ದ. ನಾನು ಬಹಳ ಸಮಯದ ನಂತರ ಎರಡನೇ ಪಂದ್ಯವನ್ನು ಆಡುತ್ತಿದ್ದೆ. ಪಂದ್ಯವನ್ನು ಆಡಿದ ನಂತರ, ನನ್ನ ದೇಹವು ಈ ಸಮಯದಲ್ಲಿ ಯಾವ ಸ್ಥಿತಿಯಲ್ಲಿದೆ ಎಂದು ನಾನು ಅರಿತುಕೊಂಡೆ. ಈ ಸಂಗತಿಗಳು ನನಗೆ ಸಂತೋಷವಾಗಿದೆ' ಎಂದರು.

ಅಂತೆಯೇ ಭರ್ಜರಿ ಇನ್ನಿಂಗ್ಸ್ ಕುರಿತು ಮಾತನಾಡಿದ ಪಾಂಡ್ಯಾ, 'ಚೆಂಡು ನಾನು ಬ್ಯಾಟ್ ಬೀಸುವ ಸೂಕ್ತ ಪ್ರದೇಶದಲ್ಲಿದ್ದರೆ, ನಾನು ಅದನ್ನು ಹೊಡೆಯುತ್ತೇನೆ. ಇದರಲ್ಲಿ ಬೇರೆ ಯಾವುದೇ ತಂತ್ರಗಾರಿಕೆಯಿಲ್ಲ ಎಂದು ಹೇಳಿದ್ದಾರೆ.

ಬೆನ್ನಿನ ಗಾಯದಿಂದಾಗಿ ಪಾಂಡ್ಯ ದೀರ್ಘಕಾಲದವರೆಗೆ ಭಾರತ ತಂಡದಿಂದ ಹೊರಗುಳಿದಿದ್ದರು. ಈಗ ಅವರು ತಂಡದಲ್ಲಿರಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com