ಕೊರೊನಾ ವೈರಸ್ ನಿಂದ ಐಪಿಎಲ್, ದಕ್ಷಿಣ ಆಫ್ರಿಕಾ ಸರಣಿಗೆ ಯಾವುದೇ ಧಕ್ಕೆಯಿಲ್ಲ: ಸೌರವ್ ಗಂಗೂಲಿ 

ಕೊರೊನಾ ವೈರಸ್ ನಿಂದ ಮುಂಬರುವ ಐಪಿಎಲ್ ಟಿ20 ಸರಣಿ ಪಂದ್ಯಕ್ಕೆ ಯಾವುದೇ ತೊಂದರೆಯಿಲ್ಲ,ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಗಾವಹಿಸುತ್ತಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ನ ಆಡಳಿತ ಮಂಡಳಿ ಅಧ್ಯಕ್ಷ ಬ್ರಜೇಶ್ ಪಟೇಲ್ ತಿಳಿಸಿದ್ದಾರೆ.
ಕೊರೊನಾ ವೈರಸ್ ನಿಂದ ಐಪಿಎಲ್, ದಕ್ಷಿಣ ಆಫ್ರಿಕಾ ಸರಣಿಗೆ ಯಾವುದೇ ಧಕ್ಕೆಯಿಲ್ಲ: ಸೌರವ್ ಗಂಗೂಲಿ 

ಮುಂಬೈ: ಕೊರೊನಾ ವೈರಸ್ ನಿಂದ ಮುಂಬರುವ ಐಪಿಎಲ್ ಟಿ20 ಸರಣಿ ಪಂದ್ಯಕ್ಕೆ ಯಾವುದೇ ತೊಂದರೆಯಿಲ್ಲ,ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಗಾವಹಿಸುತ್ತಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ನ ಆಡಳಿತ ಮಂಡಳಿ ಅಧ್ಯಕ್ಷ ಬ್ರಜೇಶ್ ಪಟೇಲ್ ತಿಳಿಸಿದ್ದಾರೆ.


ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಈ ತಿಂಗಳ 29ಕ್ಕೆ ಐಪಿಎಲ್ ಸರಣಿ ಆರಂಭವಾಗಲಿದ್ದು ಆರಂಭಿಕ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಅಂತಿಮ ಹಣಾಹಣಿ ಮೇ 24ರಂದು ಏರ್ಪಡಲಿದೆ.
ಕೊರೊನಾ ವೈರಸ್ ಸೋಂಕು ಪ್ರಕರಣ ಭಾರತದ ಅಲ್ಲಲ್ಲಿ ಪತ್ತೆಯಾಗಿರುವುದರಿಂದ ಪಂದ್ಯಗಳಿಗೆ ಏನಾದರೂ ತೊಂದರೆಯಿದೆಯೇ ಎಂದು ಕೇಳಿದಾಗ, ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ, ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಎಂದರು.


ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹ ಐಪಿಎಲ್ ಪಂದ್ಯ ಅಥವಾ ದಕ್ಷಿಣ ಆಫ್ರಿಕಾ ಸರಣಿ ಪಂದ್ಯಗಳಿಗೆ ಕೊರೊನಾ ವೈರಸ್ ನಿಂದ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಹೇಳಿದ್ದಾರೆ.ದಕ್ಷಿಣ ಆಫ್ರಿಕಾ ಸರಣಿ ಪಂದ್ಯ ಹಿಮಾಚಲ ಪ್ರದೇಶದ ಧರಮ್ ಶಾಲಾದಲ್ಲಿ ಈ ತಿಂಗಳ 12ರಂದು ಆರಂಭವಾಗಲಿದೆ.


ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ನಿಗದಿಯಂತೆ ಮೂರು ಏಕದಿನ ಪಂದ್ಯಗಳಿಗೆ ಭಾರತಕ್ಕೆ ಬರುತ್ತಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಕೂಡ ಹೇಳಿದ್ದಾರೆ.


ಮಾರಣಾಂತಿಕ ಕೊರೊನಾ ವೈರಸ್ ವಿಶ್ವವ್ಯಾಪಿ ಪಸರಿಸಿದ್ದು 3 ಸಾವಿರದ 100ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ. 90 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಅನೇಕ ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳು ನಿಂತಿವೆ. ಟೊಕ್ಯೊ ಒಲಂಪಿಕ್ಸ್ ಕೂಡ ನಡೆಯುವುದು ಸಂಶಯ ಎನ್ನಲಾಗುತ್ತಿದೆ. ಭಾರತದಲ್ಲಿ ಕೂಡ ಕೆಲವು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com