ಐಪಿಎಲ್ 2020 ಆನ್: ಕೊರೋನಾ ವೈರಸ್ ನಿಂದ ಟೂರ್ನಿಗೆ ಅಡ್ಡಿ ಇಲ್ಲ.. ಸುಗಮ ಟೂರ್ನಿಗೆ ಬಿಸಿಸಿಐ ಸಜ್ಜು

ಮಾರಣಾಂತಿಕ ಕೋವಿಡ್-19 ಈಗಾಗಲೇ ಭಾರತಕ್ಕೆ ವ್ಯಾಪಿಸಿದೆ. ಈ ಮಧ್ಯೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, 2020ರ ಐಪಿಎಲ್ ಪ್ರಕ್ರಿಯೆ ಶುರುವಾಗಿದ್ದು, ಮಾರ್ಚ್ 29ರಿಂದ ಆರಂಭವಾಗಲಿರುವ ಟೂರ್ನಿಯನ್ನು ಸುಗಮವಾಗಿ ನಡೆಸಲು ಮಂಡಳಿ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಣಾಂತಿಕ ಕೋವಿಡ್-19 ಈಗಾಗಲೇ ಭಾರತಕ್ಕೆ ವ್ಯಾಪಿಸಿದೆ. ಈ ಮಧ್ಯೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, 2020ರ ಐಪಿಎಲ್ ಪ್ರಕ್ರಿಯೆ ಶುರುವಾಗಿದ್ದು, ಮಾರ್ಚ್ 29ರಿಂದ ಆರಂಭವಾಗಲಿರುವ ಟೂರ್ನಿಯನ್ನು ಸುಗಮವಾಗಿ ನಡೆಸಲು ಮಂಡಳಿ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

"ಇದು ಶುರುವಾಗಿದೆ. ಕೊರೊನಾ ವೈರಸ್ ಸೋಂಕಿನ ವಿರುದ್ಧ ಬಿಸಿಸಿಐ ಎಲ್ಲ ರೀತಿಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಿದೆ,'' ಎಂದು ಕೊರೊನಾ ವೈರಸ್ ಕುರಿತಾದ ಪ್ರಶ್ನೆಯೊಂದಕ್ಕೆ ಗಂಗೂಲಿ ಹೇಳಿದ್ದಾರೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ ದೇಶದಲ್ಲಿ ಈವರೆಗೂ 30 ಮಂದಿಗೆ ಸೋಂಕು ತಗುಲಿರುವ ಪ್ರಕರಣಗಳು ದೃಢಪಟ್ಟಿವೆ.

ಈ ಮಧ್ಯೆ ಸರ್ಕಾರ ಶಿಫಾರಸು ಮಾಡಿರುವ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಮಂಡಳಿಯು ಪುನರಾವರ್ತಿಸುತ್ತದೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ವರದಿಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ಆಟಗಾರರು, ಫ್ರಾಂಚೈಸಿಗಳು, ವಿಮಾನಯಾನ, ತಂಡಗಳ ಹೋಟೆಲ್ ಮತ್ತು ಷೇರುದಾರರು ಸೇರಿದಂತೆ ಟೂರ್ನಿಗೆ ಸಂಬಂಧಪಟ್ಟಿರುವ ಎಲ್ಲರಿಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಲಾಗಿದೆ.

ಇದಲ್ಲದೆ ಅಭಿಮಾನಿಗಳೊಂದಿಗೆ ಹಸ್ತಲಾಘವ ಮಾಡುವುದು ಹಾಗೂ ಫೋಟೊ ತೆಗೆದುಕೊಳ್ಳುವುದನ್ನು ಸಾಧ್ಯವಾದಷ್ಟು ತಡೆಯುವಂತೆ ಆಟಗಾರರಿಗೆ ಮಂಡಳಿ ಸಲಹೆ ನೀಡಿದೆ. ಕೊರೊನಾ  ವೈರಸ್ ಸೋಂಕಿನ ಭೀತಿಯಿಂದಾಗಿ ಈಗಾಗಲೇ ಪ್ರಪಂಚದಾದ್ಯಂತ ಹಲವು ಟೂರ್ನಿಗಳು ರದ್ದಾಗಿವೆ. ಇದೇ ವರ್ಷ ಜುಲೈ-ಆಗಸ್ಟ್ ನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಮೇಲೆಯೂ ಕೋವಿಡ್-19 ಕರಿಛಾಯೆ ಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com